ಯಾದವರು, ಮುಸ್ಲಿಮರು ನಮ್ಮಿಂದ ಯಾವುದೇ ಸಹಾಯ ನಿರೀಕ್ಷಿಸಬಾರದು ದೇವೇಶ್ ಚಂದ್ರ ಠಾಕೂರ್

ಪಾಟ್ನ: ಯಾದವರು, ಮುಸ್ಲಿಮರು ನಮ್ಮಿಂದ ಯಾವುದೇ ಸಹಾಯ ನಿರೀಕ್ಷಿಸಬಾರದು ಎಂದು ಜೆಡಿಯು ಪಕ್ಷದ ಸಂಸದ ದೇವೇಶ್ ಚಂದ್ರ ಠಾಕೂರ್ ಹೇಳಿಕೆ ನೀಡಿದ್ದಾರೆ.

ಮುಸ್ಲಿಮರು ಹಾಗೂ ಯಾದವರು ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮತ ಹಾಕಿಲ್ಲ ಹೀಗಾಗಿ ತಮ್ಮಿಂದ ಈ ಎರಡೂ ಸಮುದಾಯದವರು ಯಾವುದೇ ರೀತಿಯ ಸಹಾಯ ನಿರೀಕ್ಷಿಸಬಾರದು ಎಂದು ಸೀತಾಮರ್ಹಿ ಸಂಸದರು ಹೇಳಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಸಾಂಪ್ರದಾಯಿಕ ಮತದಾರರು ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳದತ್ತ ಆಕರ್ಷಿತರಾದರು ಎಂದೂ ಸಂಸದರು ಆರೋಪಿಸಿದ್ದಾರೆ. ಬಿಹಾರ ವಿಧಾನಪರಿಷತ್ ನ ಅಧ್ಯಕ್ಷರಾಗಿದ್ದ ಠಾಕೂರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 55,000 ಮತಗಳಿಂದ ಗೆದ್ದು ಸಂಸತ್ ಗೆ ಮೊದಲ ಬಾರಿ ಪ್ರವೇಶಿಸಿದ್ದಾರೆ.

ಇದನ್ನು ಓದಿ : ನೀಟ್‌ ವಿಚಾರದಲ್ಲಿ 0.001% ರಷ್ಟೂ ನಿರ್ಲಕ್ಷ್ಯ ಇದ್ದರೆ ತೆಗೆದುಹಾಕಿ: ಸುಪ್ರೀಂ ಕೋರ್ಟ್‌

“ನಾನು ಸೂರಿಸ್ (ಮೀನುಗಾರ ಸಮುದಾಯ) ಮತ್ತು ಕಲ್ವಾರ್‌ಗಳ ಮತಗಳನ್ನು ಪಡೆದಿಲ್ಲ. ಕುಶ್ವಾಹಗಳು ಸಹ ನನ್ನನ್ನು ತೊರೆದರು. ಗೌರವಾನ್ವಿತ ಲಾಲು ಪ್ರಸಾದ್ (ಆರ್‌ಜೆಡಿ ವರಿಷ್ಠ) ಅನೇಕ ಕುಶ್ವಾಹಗಳಿಗೆ ಟಿಕೆಟ್ ನೀಡಿದ ಕಾರಣಕ್ಕಾಗಿ. ಬೇರೆಡೆಯಿಂದ ಆಯ್ಕೆಯಾದ ಕುಶ್ವಾಹ ಸದಸ್ಯರು ನನ್ನ ಕ್ಷೇತ್ರದಲ್ಲಿರುವ ಆ ಸಮುದಾಯಕ್ಕೆ ಏನಾದರೂ ಸಹಾಯ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.

ನಂತರ, “ಯಾದವರು ಮತ್ತು ಮುಸ್ಲಿಮರು ನನ್ನಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು ಎಂದು ನಾನು ಸ್ಪಷ್ಟಪಡಿಸಿದ್ದೇನೆ, ಅವರು ನನ್ನನ್ನು ಭೇಟಿಯಾದಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು, ಚಹಾ ಮತ್ತು ತಿಂಡಿಗಳನ್ನು ಸಹ ನೀಡಲಾಗುವುದು. ಆದರೆ ನಾನು ಅವರ ಯಾವುದೇ ಸಮಸ್ಯೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

“ನನ್ನ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಕಾರಣಕ್ಕೆ ನೀವು ನನಗೆ ಮತ ಹಾಕದಿರುವಾಗ ನಾನು ನಿಮಗಾಗಿ ಕೆಲಸ ಮಾಡಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ ಎಂದು ನಾನು ಮುಸ್ಲಿಂ ಸಹೋದರನನ್ನು ಕೇಳಿದ್ದೆ” ಎಂದು ಠಾಕೂರ್ ಈ ಹಿಂದೆ ಹೇಳಿದ್ದರು.

ಇದನ್ನು ನೋಡಿ : ನೀಟ್ “ಕಾಸಿದ್ದವರ ಮೆಡಿಕಲ್ “ಮೀಸಲಾತಿಯೆ? ನೀಟಾಗದ ಪರೀಕ್ಷೆಯ ಹೊಣೆ ಹೊರುವುದೆ ಕೇಂದ್ರ ಸರ್ಕಾರ? J#neet2024

Donate Janashakthi Media

Leave a Reply

Your email address will not be published. Required fields are marked *