ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ 23 ಪೈಸೆ ಮತ್ತು ಡೀಸೆಲ್ ದರ 25 ಪೈಸೆ ಏರಿಕೆಯಾಗಿದೆ. ತೈಲ ದರಗಳು ಮೇ 4ರ ನಂತರ ಈ ಅವಧಿಯಲ್ಲಿ 13 ಬಾರಿ ಏರಿಕೆ ಕಂಡಿದ್ದು, ಮುಂಬಯಿನಲ್ಲಿ ಪೆಟ್ರೋಲ್ ದರ ₹100 ಸಮೀಪವಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಇಂದು ದೇಶಾದ್ಯಂತ ತೈಲ ದರಗಳನ್ನು ಮತ್ತೊಮ್ಮೆ ಹೆಚ್ಚಿಸಿದೆ. ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದೆ.
ಇದನ್ನು ಓದಿ: ಮೊಸಳೆ ಕಣ್ಣೀರು, ಫೇಕ್ ಟೂಲ್‍ಕಿಟ್ ಮಾತುಗಳ ನಡುವೆ ಮರೆಯಾದ ‘ಟೀಕಾ ಉತ್ಸವ್’
ಮುಂಬಯಿನಲ್ಲಿ ಪೆಟ್ರೋಲ್ ದರ ₹99.71ಕ್ಕೆ ಹಾಗೂ ಡೀಸೆಲ್ ದರ ₹91.57ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಕ್ರಮವಾಗಿ ₹93.44ಕ್ಕೆ ಮತ್ತು ₹84.32ಕ್ಕೆ ಏರಿಕೆಯಾಗಿದೆ. ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ತೈಲ ದರಗಳು ₹100ರ ಗಡಿ ದಾಟಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹96.61ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ ₹89.45 ರಷ್ಟಿದೆ.
ಭಾರತ ಸರ್ಕಾರ ಕಚ್ಚಾ ತೈಲದ ಮೇಲಿನ ಮೂಲ ಬೆಲೆಯ 125% ರಷ್ಟು ತೆರಿಗೆಯನ್ನು ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ ₹32.98 ಹಾಗೂ ಡೀಸೆಲ್ ಮೇಲೆ ₹31.80 ನಷ್ಟಿದೆ. ಅದೇ ರೀತಿಯಲ್ಲಿ ರಾಜ್ಯಗಳು ವಿಧಿಸುವ ತೆರಿಗೆಯ ಆಧಾರದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮೇಲೆ ಅತಿ ಹೆಚ್ಚಿನ ವ್ಯಾಟ್ ವಿಧಿಸುವ ರಾಜ್ಯಗಳಲ್ಲಿ ರಾಜಸ್ಥಾನವಾಗಿದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ.
ಇದನ್ನು ಓದಿ: ಮೇ 26ರ ರೈತರ ಪ್ರತಿಭಟನೆಗೆ 12 ಪ್ರತಿಪಕ್ಷಗಳ ಬೆಂಬಲ
ದೇಶದಲ್ಲಿ ಮೇ 4 ರಿಂದ 13 ಬಾರಿ ತೈಲ ದರ ಏರಿಕೆಯಾಗಿದೆ. ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕ್ರಮವಾಗಿ ₹104.42 ಮತ್ತು ₹97.18 ಇತ್ತು. ಇದೀಗ ಪೆಟ್ರೋಲ್ ಬೆಲೆಯಲ್ಲಿ ₹3.04 ಮತ್ತು ಡೀಸೆಲ್ ಬೆಲೆಯಲ್ಲಿ ₹3.59 ಹೆಚ್ಚಳವಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ವಿವರ
ನವದೆಹಲಿಯಲ್ಲಿ ಪೆಟ್ರೋಲ್ ₹93.44 – ಡೀಸೆಲ್ ₹84.32
ಕೋಲ್ಕತಾದಲ್ಲಿ ಪೆಟ್ರೋಲ್ ₹93.49 – ಡೀಸೆಲ್ ₹87.16
ಮುಂಬಯಿನಲ್ಲಿ ಪೆಟ್ರೋಲ್ ₹99.71 – ಡೀಸೆಲ್ ₹91.57
ಚೆನ್ನೈನಲ್ಲಿ ಪೆಟ್ರೋಲ್ ₹95.06ರು – ಡೀಸೆಲ್ ₹89.11
ಬೆಂಗಳೂರಿನಲ್ಲಿ ಪೆಟ್ರೋಲ್ ₹96.61 – ಡೀಸೆಲ್ ₹89.45
ಪಾಟ್ನದಲ್ಲಿ ಪೆಟ್ರೋಲ್ ₹96.13ರು – ಡೀಸೆಲ್ ₹90.05
ಹೈದರಾಬಾದ್ ನಲ್ಲಿ ಪೆಟ್ರೋಲ್ ₹97.12 – ಡೀಸೆಲ್ ₹91.92
ನೋಯ್ಡಾ ದಲ್ಲಿ ಪೆಟ್ರೋಲ್ ₹91.00ರು – ಡೀಸೆಲ್ ₹84.66
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರಗಳ ಏರಿಳಿತವಾಗುತ್ತಿರುತ್ತದೆ. ಅಲ್ಲದೆ, ಡಾಲರ್ – ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ಗಳ ದರಗಳಲ್ಲಿಯೂ ಏರಿಳಿತವಾಗುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರಗಳನ್ನು ಪ್ರಕಟಿಸಿತ್ತವೆ.