ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 777 ಚಾರ್ಲಿ ಪೂರ್ವಭಾವಿ ಶೋ..!

ಬೆಂಗಳೂರು : ಈಗಾಗಲೇ ಟೀಸರ್ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಇದೆ ತಿಂಗಳು ಜೂನ್‌ 10ಕ್ಕೆ ಬಿಡುಗಡೆಯಾಗುತ್ತಿದೆ.

‘ಕರ್ನಾಟಕದಲ್ಲಿ ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘777 ಚಾರ್ಲಿ’ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷವೆಂದರೆ ಜೂನ್‌ 9ರಂದು ರಾಜ್ಯದೆಲ್ಲೆಡೆ ಇದೇ ಮೊದಲ ಬಾರಿಗೆ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದ್ದು. ಬೆಂಗಳೂರಿನಲ್ಲಿ 55 ಕಡೆ ಪ್ರದರ್ಶನ ನಡೆದರೆ, ಉಳಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರದರ್ಶನವಿರಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಏಕಪರದೆ ಚಿತ್ರಮಂದಿರಗಳಲ್ಲೂ ಪೂರ್ವಭಾವಿ ಪ್ರದರ್ಶನ ನಡೆಯಲಿದೆ’ ಎಂದು ಕೆ.ಆರ್.ಜಿ ಫಿಲಂಸ್‌ನ‌ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ.

ಈಗಾಗಲೇ ಉತ್ತರ ಭಾರತದ ದೆಹಲಿ, ಅಹಮದಾಬಾದ್, ಕೋಲ್ಕತ್ತ ರಾಜ್ಯಗಳು ಸೇರಿದಂತೆ  ವಿದೇಶದ ಕೆಲವೆಡೆ ಚಿತ್ರದ ಸೆಲೆಬ್ರಿಟಿ ಶೋಗಳು ನಡೆದಿವೆ. ಸಿನಿಮಾವೊಂದು ಬಿಡುಗಡೆಗು ಮುನ್ನವೇ ಇಷ್ಟೊಂದು ಪ್ರೀಮಿಯರ್‌ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲಾಗಿದ್ದು. ಸೋಮವಾರ ಚಿತ್ರದ ಸೆಲೆಬ್ರಿಟಿ ಪ್ರದರ್ಶನ ನಡೆದಿದೆ, ನಟಿ ರಮ್ಯ, ನಿರ್ದೇಶಕ ಸಂತೋಷ್‌ ಆನಂದರಾಮ್‌ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ಈಗಾಗಲೇ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *