-ಟಿ ಯಶವಂತ
ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನದಿಂದಾಗಿ ಭೂಮಿ ಕಳೆದುಕೊಂಡ ರೈತರು ಸುಮಾರು ಎರಡು ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಯೋಗಿ
ಅಖಿಲ ಭಾರತ ಕಿಸಾನ್ ಸಭಾ (AIKS) ನೇತೃತ್ವದಲ್ಲಿ ಕೆಂಬಾವುಟ ಹಿಡಿದು, 25-4-23 ರಿಂದ ಆರಂಭಗೊಂಡು ನಿರಂತರವಾಗಿ 61 ದಿನಗಳ ಕಾಲ ಹಗಲು ರಾತ್ರಿ ರೈತರು ನಡೆಸಿದ, ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮಣಿದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ಹಾಗೂ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರ ಭೂ ಸ್ವಾಧೀನದ ಪರಿಹಾರದಲ್ಲಿ ಆಗಿರುವ ವಂಚನೆಯನ್ನು ಸರಿಪಡಿಸುವುದಾಗಿ ಹೋರಾಟ ನಿರತ ರೈತರೊಂದಿಗೆ ಲಿಖಿತ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪೆಡೆಯಲಾಗಿತ್ತು ಎಂದರು. ಯೋಗಿ
ಈ ರೀತಿ ಒಪ್ಪಂದ ಆಗಿ ವರ್ಷಗಳೇ ಕಳೆದರೂ, ಭೂಮಿ ಕಳೆದುಕೊಂಡಿದ್ದ ನೋಯ್ಡಾ ರೈತರಿಗೆ ಯಾವುದೇ ರೀತಿಯ ನ್ಯಾಯ ಒದಗಿಸಲು ವಿಫಲರಾದ ಯೋಗಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತೇ ನೋಯ್ಢಾ ಅಭಿವೃದ್ಧಿ ಪ್ರಾಧಿಕಾರದ ಎದುರು ಈ ಹಿಂದೆ ಅನಿರ್ಧಿಷ್ಟ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನಾ ಧರಣಿಯನ್ನು ಪುನರಾರಂಭಿಸಿದರು. ಯೋಗಿ
ಸತತ ಐದು ದಿನಗಳ ಕಾಲ ಪ್ರತಿಭಟನೆ ನಡೆಸಿದರೂ ಯಾವುದೇ ರೀತಿಯ ಪರಿಹಾರ ಕ್ರಮಕ್ಕೆ ಮುಂದಾಗದ ಯೋಗಿ ಆದಿತ್ಯನಾಥ ಸರ್ಕಾರದ ನೀತಿ ಖಂಡಿಸಿ ಉತ್ತರ ಪ್ರದೇಶ ರಾಜ್ಯದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ಸಹಭಾಗಿ ಸಂಘಟನೆ ಗಳ ಬೆಂಬಲದೊಂದಿಗೆ ಡಿಸೆಂಬರ್ 2,2024 ರಂದು ದೆಹಲಿ ಚಲೋ ಗೆ ಮುನ್ನೆಡೆದರು ಎಂದು ಹೇಳಿದರು.
ನೋಯ್ಡಾದ ಮಹಾಮಯ ಪ್ಲೈಓವರ್ ಮೇಲೆ ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರ ಸಜ್ಜಿತ ಪೋಲೀಸರ ಜೊತೆ ಸೆಣಸಿ, ಪೊಲೀಸರು ನಿರ್ಮಿಸಿದ್ದ ತಡೆಗೋಡೆ, ಬ್ಯಾರೀಕೇಡ್, ಮುಳ್ಳು ತಂತಿ ಬೇಲಿ, ಶಿಪ್ಪಿಂಗ್ ಕಂಟೈನರ್ ಗಳನ್ನು ದಾಟಿ ಮುಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಮುನ್ನೆಡೆದು ನೋಯ್ಡಾ ದೆಹಲಿ ಗಡಿಯಲ್ಲಿ ಜಮಾವಣೆಗೊಂಡರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ರೈತರು ಯಾವುದೇ ರೀತಿಯ ಬಲಪ್ರಯೋಗ ಕ್ಕೆ ಹೆದರದೇ ಮುನ್ನಡೆಯುವ ಸಮರಶೀಲ ಚೈತನ್ಯ ಕಂಡು ಹೆದರಿದ ಯುಪಿ ಸರ್ಕಾರ, ಗೌತಮಬುದ್ದನಗರದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿರವರು, ಎಐಕೆಎಸ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರನ್ನು ಪ್ರತಿಭಟನಾ ಸ್ಥಳದಲ್ಲಿ ಬೇಟಿ ಮಾಡಿ ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ತಮ್ಮ ಸಮಸ್ಯೆ ಪರಿಹರಿಸಲು ಭೇಟಿ ಆಗುವರು ಎಂಬ ಸಂದೇಶ ತಲುಪಿಸಿತು.
ಬಲವಂತದ ಭೂ ಸ್ವಾಧೀನ ದಿಂದ ಕಳೆದ 14 ವರ್ಷಗಳಿಂದಲೂ ಯಾತನೆಯಲ್ಲಿದ್ದರೂ ,ಇಂತಹ ಭರವಸೆಗಳನ್ನು ನೂರಾರು ಬಾರಿ ಕೇಳಿದ್ದರೂ ಮುಖ್ಯ ಕಾರ್ಯದರ್ಶಿ ಭೇಟಿಗೆ ಒಪ್ಪಿಕೊಂಡ ರೈತ ನಾಯಕರು, ಅವರು ಬರುವ ತನಕ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಹೆದ್ದಾರಿ ಪಕ್ಕದ ಮೈದಾನದಲ್ಲಿ ಠಿಕಾಣಿ ಹೂಡುವುದಾಗಿ ತಿಳಿಸಿ ಅದರಂತೆ ನಡೆದುಕೊಂಡರು.
ಆದರೆ ಯುಪಿ ಸರ್ಕಾರ ತನ್ನ ಮುಖ್ಯ ಕಾರ್ಯದರ್ಶಿ ಕಳುಹಿಸಿ ಕೊಡುವ ಬದಲು ಪ್ರತಿಭಟನಾ ರೈತರನ್ನು ಸೇರಿಕೊಳ್ಳದಂತೆ ಭೂ ಸ್ವಾಧೀನ ಭಾದಿತ ಗ್ರಾಮಗಳಿಗೆ ಹೋಗಿ ರೈತರನ್ನು ಬೆದರಿಸಿತು. ರೈತ ಮುಖಂಡರನ್ನು ಗೃಹ ಬಂಧನದಲ್ಲಿ ಇಟ್ಟಿತು ,ಈ ಹೋರಾಟದ ಪ್ರಮುಖ 300 ರಷ್ಟು ನಾಯಕರನ್ನು ಬಂಧಿಸಿ ಜೈಲಿಗೆ ನೂಕಿತು.
ಇಷ್ಟೆಲ್ಲಾ ದೌರ್ಜನ್ಯ ದಬ್ಬಾಳಿಕೆಗೆ ನೋಯ್ಡಾ ರೈತರು ಹೆದರದೇ ಬಂಧಿತ ಮುಖಂಡರನ್ನು ಬೇಷರಾತ್ ಆಗಿ ಬಿಡುಗಡೆ ಮಾಡುವಂತೆ ಕಿಸಾನ್ ಪಂಚಾಯತ್ ಸಭೆ ನಡೆಸುವ ಮೂಲಕ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟಿಸಿದರು. ಎಐಕೆಎಸ್ ನೇತೃತ್ವದ ಈ ಬೃಹತ್ ಪ್ರತಿಭಟನೆಗೆ ಮಣಿದ ಯುಪಿ ಸರ್ಕಾರ. ಎಐಕೆಎಸ್ ನಾಯಕ ರೂಪೇಶ್ ವರ್ಮಾ ಸೇರಿದಂತೆ ಪ್ರಮುಖ ಬಂಧಿತರನ್ನು ಬಿಡುಗಡೆ ಮಾಡಿತು. ಬಿಡುಗಡೆ ಗೊಂಡ ನಾಯಕರನ್ನು ರೈತರು ವಿಜಯೋತ್ಸವದ ಘೋಷಣೆ ಮೂಲಕ ಹರ್ಷೋದ್ಘಾರಗಳ ನಡುವೆ ಸ್ವಾಗತಿಸಿದರು.
2020 ನವೆಂಬರ್ 26 ರಂದು ದೆಹಲಿ ಪ್ರವೇಶಿಸಿದಂತೆ ರೈತರನ್ನು ತಡೆದು ಭಾರಿ ಪ್ರಮಾಣದ ಲಾಠಿ ಪ್ರಹಾರ, ಜಲ ಪಿರಂಗಿ ಬಳಕೆ ಮುಂತಾದ ಶತೃ ಸೈನಿಕರಂತೆ ನಡೆಸಿಕೊಂಡಿದ್ದದ್ದು ನೋಯ್ಡಾ ದೆಹಲಿ ಗಡಿಯಲ್ಲಿ ಪುನಾರ್ವರ್ತನೆ ಆಗಿತ್ತು.
ಎಐಕೆಎಸ್ ನ ನೇತೃತ್ವ ಮತ್ತು ನಿರಂತರ ಮುತುವರ್ಜಿಯಿಂದಾಗಿ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವ ನೋಯ್ಡಾ ರೈತರ ಪ್ರತಿಭಟನೆ ಸುಮಾರು 14 ವರ್ಷಗಳ ಹಿಂದೆ ಆಗಿರುವ ಬಲವಂತದ ಹಾಗೂ ಆನ್ಯಾಯದ ಭೂ ಸ್ವಾಧೀನ ಕ್ಕೆ ಸಂಬಂದಿಸಿದ್ದು. ಈ ರೈತರು ತಮ್ಮಿಂದ ಭೂ ಸ್ವಾಧೀನದ ಮೂಲಕ ಕಿತ್ತುಕೊಂಡು , ಅಭಿವೃದ್ಧಿ ಪಡಿಸಿದ್ದ ಭೂಮಿಯಲ್ಲಿ ಶೇಕಡಾ 10 ರಷ್ಟು ಭಾಗವನ್ನು ನೀಡುವಂತೆ, ಭೂ ಸ್ವಾಧೀನ ಪರಿಹಾರಕ್ಕೆ ಭೂ ಸ್ವಾಧೀನ 2013 ರ ಕಾಯ್ದೆ ಅನ್ವಯಿಸುವಂತೆ, ಯೋಜನಾ ನಿರಾಶ್ರಿತ ಭೂ ರಹಿತರಿಗೆ ಮನೆ -ನಿವೇಶನ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.
ಈಗಲೂ ನೂರಾರು ಸಂಖ್ಯೆಯಲ್ಲಿ ರೈತ ಮುಖಂಡರು ಗೌತಮ ಬುದ್ದ ನಗರ ಜೈಲಿನಲ್ಲಿ ಇದ್ದು ,ಇದೇ ಬೇಡಿಕೆಗಳಿಗೆ ಒತ್ತಾಯಿಸಿ ಜೈಲಿನಲ್ಲಿ ಇರುವ ಬಂಧಿತ ರೈತರು ಉಪವಾಸ ಧರಣಿ ನಡೆಸುತ್ತಿದ್ದಾರೆ. ಜೈಲಿನ ಒಳಗೆ ಹಾಗೂ ನೋಯ್ಡಾ ದೆಹಲಿ ಗಡಿಯಲ್ಲಿ ಹೀಗೆ ಎರಡೂ ಕಡೆಯೂ ಸಮರಶೀಲ ರೈತ ಹೋರಾಟ ಮುಂದುವರೆದಿದ್ದು, ಕೋಮುವಾದಿ ಪ್ಯಾಸಿಸ್ಟ್ ಸರ್ಕಾರವನ್ನು ಎದುರಿಸುವುದು ಹೇಗೆ ಎಂದು ಈ ರೈತ ಹೋರಾಟ ತೋರಿಸುತ್ತಿದೆ.
ಎಐಕೆಎಸ್ ಉಪಾಧ್ಯಕ್ಷ ಹಾಗೂ ಸಂಸತ್ ಸದಸ್ಯ ಕಾಂ.ಅಮ್ರಾ ರಾಮ್ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡದಂತೆ ಜಿಲ್ಲಾಧಿಕಾರಿ ಯನ್ನು ಕಂಡು ಆಗ್ರಹಿಸಲಾಗಿದೆ. ಬೇಡಿಕೆಗಳು ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಎಐಕೆಎಸ್ ಮುಖಂಡರು ಘೋಷಿಸಿದ್ದಾರೆ.
ಇದನ್ನೂ ನೋಡಿ: ಕಿರು ಸಾಲಗಳಿಂದ ಮುಕ್ತಿ ಹೇಗೆ? ಹೋರಾಟಗಾರ ಬಿಎಂ ಭಟ್ ಹೇಳುವುದೇನು? Janashakthi Media