ಮುಂಬಯಿ: ಕೇಂದ್ರ ಸರಕಾರ ಕೋವಿಡ್ ವಿರುದ್ಧ ಸಂಪೂರ್ಣವಾಗಿ ಗೆಲುವು ಸಾಧಿಸುವ ಮುನ್ನವೇ ವಿಜಯೋತ್ಸವವನ್ನು ಆಚರಣೆ ಮಾಡಿದ್ದರೆ ಹೊರತು, ನಿಜವಾದ ಹೋರಾಟದ ವಿರುದ್ಧ ತಯಾರಿಯಲ್ಲಿ ತೊಡಗಲಿಲ್ಲ. ಕೇಂದ್ರ ಸರಕಾರದ ನೀತಿಗಳಲ್ಲಿನ ಗೊಂದಲಗಳೇ ಇದಕ್ಕೆ ಕಾರಣವೆಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.
ನೆನ್ನೆ (ಜೂನ್ 04) ನಡೆದ ರಾಷ್ಟ್ರೀಯ ಸೇವಾ ದಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರಕಾರವು ಅದಕ್ಕಿಂತ ಹೆಚ್ಚಾಗಿ ತಾವು ಮಾಡಿದ ಕೆಲವು ನೀತಿ-ಕಾರ್ಯಗಳಿಗೆ ಮನ್ನಣೆ ಪಡೆಯುವಲ್ಲಿ ಹೆಚ್ಚು ಗಮನಹರಿಸಿದರ ಪರಿಣಾಮವಾಗಿ, ದೇಶ ಒಂದು ರೀತಿಯಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟಿಗೆ ಎದುರಾಗಿದೆʼ ಎಂದು ಅಮರ್ತ್ಯ ಸೇನ್ ಹೇಳಿದರು.
ಇದನ್ನು ಓದಿ: ವಿಧ್ವಂಸದ ಎರಡು ಯಾತನಾಮಯ ವರ್ಷಗಳು
“ಕೋವಿಡ್ ವಿರುದ್ಧ ಗೆಲುವಿಗೆ ಬೇಕಾದ ಉತ್ತಮ ಕೆಲಸಗಳತ್ತ ಗಮನ ನೀಡದೇ ಇರುವುದು ಒಂದು ಹಂತದ ಬೌದ್ಧಿಕ ಅಪ್ರಬುದ್ಧತನವನ್ನು ತೋರಿಸುತ್ತದೆ, ಇದನ್ನು ತಪ್ಪಿಸಬೇಕಿದೆ” ಎಂದು ಹೇಳಿದ ಅಮರ್ತ್ಯ ಸೇನ್ ಅವರು ಭಾರತದ ಔಷಧ ಉತ್ಪಾದಕ ಸಾಮರ್ಥ್ಯ ಹಾಗೂ ಇಲ್ಲಿನ ಜನರಲ್ಲಿರುವ ರೋಗನಿರೋಧಕತೆ ಕೋವಿಡ್-19 ನ್ನು ಎದುರಿಸುವುದಕ್ಕೆ ಸರ್ವಸಮರ್ಥ ರಾಷ್ಟ್ರವಾನ್ನಾಗಿಸಿತ್ತು, ಆದರೆ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂದು ಅವರು ಟೀಕೆ ಮಾಡಿದರು.
ʻಕೋವಿಡ್ ವಿರುದ್ಧ ಯಶಸ್ಸಿನ ಗುಂಗಿನಲ್ಲಿರುವ ಸರಕಾರ ಭಾರತವೇ ಜಗತ್ತನ್ನು ರಕ್ಷಿಸಲಿದೆ ಎಂಬ ಭ್ರಮೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದರೊಂದಿಗೇ ಆರಂಭವಾಗ ದೇಶದ ಸಮಸ್ಯೆಗಳು ಸಹ ಬಹುಪಾಲು ಜನರ ಜೀವನವೂ ಅತ್ಯಂತ ಕಷ್ಟಕರವಾಗಿ ಪರಿಣಮಿಸಿದರೂ ಅದನ್ನು ನಿಭಾಯಿಸುವಲ್ಲಿ ವಿಫಲವಾದ ಪರಿಣಾಮವಾಗಿ ಈಗ ದೇಶ ಮತ್ತಷ್ಟು ಬಿಕ್ಕಟ್ಟಿಗೆ ಒಳಗಾಗಿದೆʼ ಎಂದು ಅವರು ಹೇಳಿದರು.
ಇದನ್ನು ಓದಿ: ಕೋವಿಡ್-19: ಲಸಿಕೆಯೇ ಅಂತಿಮ ಅಸ್ತ್ರ
ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣ ವಿಭಾಗದಲ್ಲಿ ಅತ್ಯಂತ ದೊಡ್ಡ ಮಟ್ಟದ ಬದನಾವಣೆಗಳ ತುರ್ತು ಅಗತ್ಯವಿದೆ. ಅಲ್ಲದೆ, ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಮತ್ತಷ್ಟು ಬದಲಾವಣೆಗಳನ್ನು ತರಬೇಕಾಗಿದೆ ಎಂದು ತಿಳಿಸಿದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿರುವ ಅಮರ್ತ್ಯ ಸೇನ್, 1769 ರಲ್ಲಿ ಅರ್ಥಶಾಸ್ತ್ರಜ್ಞ ಆಡಮ್ ಸ್ಮಿತ್ ಬರೆದ ಬರಹವನ್ನು ಉಲ್ಲೇಖಿಸಿದ್ದಾರೆ. “ಒಳ್ಳೆಯ ಕೆಲಸ ಮಾಡುವವರು ಎಂದಿಗೂ ಅದಕ್ಕೆ ಕೀರ್ತಿ ಸಂಪಾದನೆ ಮಾಡಲು ಹೋಗುವುದಿಲ್ಲ” ಎಂಬ ನುಡಿಯನ್ನು ಉಲ್ಲೇಖಿಸಿದರು.