ಬೆಂಗಳೂರು: ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ಅಮಾನವೀಯ ಆಕ್ರಮಣ ಪ್ರಾರಂಭಿಸಿ ಒಂದು ತಿಂಗಳಾಗುತ್ತಿದೆ. ಜನಸಾಮಾನ್ಯರ ಬದುಕು ಛಿದ್ರಗೊಂಡಿದೆ. ಬೆಂಕು ಉಗುಳುತ್ತಿರುವ ಆಕಾಶ, ಎಲ್ಲೆಡೆ ಕುಸಿದ ಮನೆಗಳು, ಶಾಲೆ – ಕಾಲೇಜು – ಆಸ್ಪತ್ರೆಯ ಮೇಲೂ ಬಾಂಬುಗಳು, ಮಹಿಳೆ – ಮಕ್ಕಳು – ವೃದ್ಧರು – ರೋಗಿಗಳನ್ನೂ ಒಳಗೊಂಡಂತೆ ಅಪಾರ ಸಾವು ನೋವು. ಈ ಮಾರಣಹೋಮವನ್ನು ನಿರ್ಲಜ್ಜವಾಗಿ ಬೆಂಬಲಿಸುತ್ತಿರುವ ಕೇಂದ್ರ ಸರ್ಕಾರ. ಇದನ್ನು ದ್ವೇಷ ರಾಜಕಾರಣದ ಪ್ರಚಾರ ಸಾಮಗ್ರಿ ಮಾಡಿಕೊಂಡಿರುವ ಬಲಪಂಥೀಯ ಶಕ್ತಿಗಳು, ಇದರ ವಿರುದ್ಧ ದನಿ ಎತ್ತಲು ಮುಂದಾದಾಗ ಹೋರಾಟದ ಕತ್ತನ್ನು ಹಿಸುಕಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ನೋಡಿ ಸುಮ್ಮನೆ ಕೂತರೆ ನಾವೂ ಸತ್ತಂತೆ ಎಂದು ಸಂಯುಕ್ತ ಕರ್ನಾಟಕ ಹೋರಾಟ ತಿಳಿಸಿದೆ. ನವೆಂಬರ್
ಇದನ್ನೂ ಓದಿ:ಗಾಜಾ ಯುದ್ಧ ಇಡೀ ಪ್ರದೇಶಕ್ಕೆ ವ್ಯಾಪಿಸುವ ಅಪಾಯ ಇದೆಯಾ?
ನವೆಂಬರ್ 8 ರಂದು ರಾಜ್ಯದಾದ್ಯಂತ “ಶಾಂತಿ ಒತ್ತಾಯ” ಪ್ರದರ್ಶನಗಳನ್ನು ಆಯೋಜಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡುತ್ತಿದೆ. ಪ್ಯಾಲೆಸ್ತೇನ್ – ಇಸ್ರೇಲ್ ವಿವಾದದ ಚರ್ಚೆಗೆ ಹೋಗದೆ ಸರಳ ನೇರ ಹಕ್ಕೊತ್ತಾಯದ ಸುತ್ತ ಹೋರಾಟ ರೂಪಿಸಬೇಕು. ಸರಿತಪ್ಪುಗಳ ಚರ್ಚೆ ಒತ್ತಟ್ಟಿಗಿರಲಿ ಮೊದಲು ಯುದ್ಧ ನಿಲ್ಲಬೇಕು ಎಂಬುದು ಏಕ ಮಾತ್ರ ಆಗ್ರಹವಾಗಿರುತ್ತದೆ ಎಂದರು.
“ಯುದ್ಧ ನಿಲ್ಲಲಿ – ಶಾಂತಿ ನೆಲೆಸಲಿ – ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಯಲಿ” ಎಂಬುದು ನಮ್ಮ ಕೇಂದ್ರೀಯ ಒತ್ತಾಯವಾಗಿರಬೇಕು. “ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು. ಶಾಂತಿ ಪಡೆಗಳನ್ನು ಕಳುಹಿಸಿಕೊಡಬೇಕು. ಭಾರತ ಸರ್ಕಾರವೂ ಅದಕ್ಕಾಗಿ ಆಗ್ರಹಿಸಬೇಕು” ಎಂದು ನಾವು ಕೇಳಬೇಕು ಎಂದು ನಿರ್ಣಯ ಮಾಡಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
ನವೆಂಬರ್ 8ರಂದು ನಮ್ಮ ನಮ್ಮ ಊರುಗಳಲ್ಲಿ, ಏರಿಯಾಗಳಲ್ಲಿ ಶಾಂತಿ ಯಾತ್ರೆ, ಮಾನವ ಸರಪಳಿ, “ಯುದ್ಧ ನಿಲ್ಲಲಿ – ಶಾಂತಿ ನೆಲೆಸಲಿ” ಫಲಕದ ಜೊತೆ ಮೌನ ಪ್ರದರ್ಶನ, ಮನೆಯ ಮುಂದೆ ಫಲಕ ಹಿಡಿದು ಫೋಟೋ ತೆಗೆದು ಹಂಚಿಕೊಳ್ಳುವುದು ಮುಂತಾದ ವಿಭಿನ್ನ ಚಟುವಟಿಕೆಗಳನ್ನು ಮಾಡಬಹುದು. ಸಾಧ್ಯವಾದಷ್ಟು ಜೊತೆಗೂಡಿ ಮಾಡೋಣ, ಆಥವಾ ನಮ್ಮ ನಮ್ಮ ಸಂಘಟನೆಯಿಂದ ಸಾಧ್ಯವಿರುವುದನ್ನು ಮಾಡೋಣ ಅಥವಾ ಒಬ್ಬರೇ ಇದ್ದರೂ ವ್ಯಕ್ತಿಯಾಗಿಯೂ ಸಹ ಮಾಡೋಣ… ಒಟ್ಟಿನಲ್ಲಿ ಏನಾದರೂ ಮಾಡೋಣ…ಅಪರಾಧ ಆಕ್ರಮಣಕ್ಕಿಳಿದಾಗ ಸುಮ್ಮನಿರುವುದು ಮಹಾಪರಾಧವಾಗುತ್ತದೆ ಎಂದು ಹೇಳಿದೆ.
ವಿಡಿಯೋ ನೋಡಿ:ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media