ಕಾಂಗ್ರೆಸ್ ಇಲಾಖೆಯಿಂದ ಯಾವುದೇ ಪ್ರವಾಸ ಆಯೋಜಿಸಿಲ್ಲ: ಸಚಿವ ಕೆ. ವೆಂಕಟೇಶ್ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಸಚಿವರು ಹಾಗೂ ಶಾಸಕರ ಫಾರಿನ್ ಟೂರ್ ಕುರಿತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಮಹತ್ವದ ಹೇಳಿಕೆ ನೀಡಿದ್ದೂ, ನಮ್ಮ ಇಲಾಖೆಯಿಂದ ಯಾವುದೇ ಪ್ರವಾಸ ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತಾಡಿರುವ ಅವರು,  ಪಕ್ಷದ ಕೆಲವು ಶಾಸಕರ ವಿದೇಶ ಪ್ರವಾಸಕ್ಕೂ ನಮ್ಮ ಇಲಾಖೆಗೂ ಸಂಬಂಧ ಇಲ್ಲ. ನಮ್ಮ ಇಲಾಖೆ ವತಿಯಿಂದ ಪ್ರವಾಸ ಆಯೋಜನೆ ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೊಲೆ ಪ್ರಕರಣ: ಬೈರತಿ ಬಸವರಾಜ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪ್ರವಾಸಕ್ಕೆ ನನಗೂ ಆಹ್ವಾನ ಇತ್ತು, ಆದರೆ ನಾನು ಹೋಗುತ್ತಿಲ್ಲ. ನಾನೇ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅನಗತ್ಯ ಗೊಂದಲ ಬೇಡ. ನಮ್ಮ ಇಲಾಖೆಗೂ ಫಾರಿನ್ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ಪಶುಸಂಗೋಪನೆ ಇಲಾಖೆ ವತಿಯಿಂದ ಕೆಲವು ಮಂದಿ ಕಾಂಗ್ರೆಸ್ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದೀಗ, ಹೈಕಮಾಂಡ್ ವರದಿ ಕೇಳಿದ ಬೆನ್ನಲ್ಲೇ ಪಶುಸಂಗೋಪನೆ ಇಲಾಖೆ ಸಚಿವ ಕೆ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.

 ಪಕ್ಷದಲ್ಲಿ ಅಧಿಕಾರ ಹಂಚಿಕೆ ಜಟಾಪಟಿ ತೀವ್ರಗೊಳ್ಳುತ್ತಿರುವ ಈ ಹೊತ್ತಿನಲ್ಲೇ ಶಾಸಕರು ವಿದೇಶ ಪ್ರವಾಸ ಹೋಗುವುದಕ್ಕೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೂಡ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ನೋಡಿ: ಗುತ್ತಿಗೆ ಜೀವನಕ್ಕೆ ಅಂತ್ಯ ಬೇಕು – ಫೆ 12ಕ್ಕೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ | ಎಸ್ ವರಲಕ್ಷ್ಮಿ

Donate Janashakthi Media

Leave a Reply

Your email address will not be published. Required fields are marked *