ಶಾಲಾ ಶಿಕ್ಷಕರನ್ನು ‘ಸರ್’, ‘ಮೇಡಂ’ ಎನ್ನುವ ಬದಲು ‘ಟೀಚರ್‌‌’ ಎಂದು ಸಂಬೋಧಿಸಬೇಕು: ಕೇರಳ ಮಕ್ಕಳ ಹಕ್ಕು ಆಯೋಗ

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಹೊಸ ನಿರ್ದೇಶನವೊಂದನ್ನ ನೀಡಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಶಿಕ್ಷಕರನ್ನ ‘ಸರ್’, ‘ಮೇಡಂ’ ಎಂದು ಕರೆಯಬಾರದು ಎಂದು ತಿಳಿಸಿದೆ.

ಕೇರಳದ ತಿರುವನಂತಪುರಂ ನಲ್ಲಿ ಈ ರೀತಿಯಾದ ನಿಯಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶಿಸಿದೆ. ʼಸರ್‌ʼ, ʼಮೇಡಂʼ ಎನ್ನುವುದಕ್ಕಿಂತ ʼಟೀಚರ್‌ʼ ಅನ್ನುವ ಪದ ʼಲಿಂಗ ತಟಸ್ಥʼವಾಗಿರುವುದರಿಂದ ಈ ಪದವನ್ನೇ ಬಳಕೆ ಮಾಡಬೇಕು. ಶಿಕ್ಷಕರನ್ನು ಲಿಂಗದ ಆಧಾರದ ಮೇಲೆ ಸಂಬೋಧನೆ ಮಾಡಬಾರದು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ : ಎಸ್‌ಎಫ್‌ಐ ಬೇಡಿಕೆಗೆ ಸ್ಪಂದನೆ: ವಿದ್ಯಾರ್ಥಿನೀಯರಿಗೆ ಋತುಚಕ್ರದ ರಜೆಗೆ ಅವಕಾಶ ಕಲ್ಪಿಸಿದ ಕೇರಳದ ವಿಶ್ವವಿದ್ಯಾಲಯ

ಹೊಸ ಸಮಾಜಗಳನ್ನು ರಚಿಸಲು ಶಿಕ್ಷಕರು ದಾರಿ ಮಾಡಿಕೊಡುತ್ತಾರೆ. ‘ಸರ್’ ಮತ್ತು ‘ಮೇಡಂ’ ಎಂಬಂತಹ ಪದಗಳು ‘ಟೀಚರ್‌’ ಎಂಬ ಪದಕ್ಕೆ ಸಮಾನವಾಗುವುದಿಲ್ಲ ಎಂದು ಆಯೋಗದ ಆದೇಶವು ಹೇಳಿದೆ. ‘ಟೀಚರ್‌’ ಎಂಬ ಪದವನ್ನು ಬಳಸುವುದರಿಂದ ಸಮಾನತೆಯನ್ನು ಕಾಪಾಡಿಕೊಳ್ಳಲು ಮತ್ತು ಮಕ್ಕಳಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ. ಶಿಫಾರಸುಗಳನ್ನು ಆಧರಿಸಿದ ಕ್ರಿಯಾ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

ಸಮಿತಿಯ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಮತ್ತು ಸದಸ್ಯ ಸಿ. ವಿಜಯಕುಮಾರ್ ಅವರನ್ನೊಳಗೊಂಡ ಪೀಠ ಸಾಮಾನ್ಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ. ಇತ್ತೀಚಿಗಷ್ಟೇ ಕೇರಳದ ಶಾಲೆಯೊಂದರಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಏಕ ರೂಪದ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *