ಬೆಂಗಳೂರು : ಮುಖ್ಯಮಂತ್ರಿಗಳು ಈ ಕೂಡಲೇ ಸರ್ಕಾರಕ್ಕೆ ಸೇರಿದ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಅನುಮತಿ ಕೊಡಬಾರದು ಎನ್ನುವ ಆದೇಶ ಹೊರಡಿಸಬೇಕೆಂದು ಜಾಗೃತ ನಾಗರಿಕರು ಕರ್ನಾಟಕ ಒತ್ತಾಯಿಸಿದೆ. ಆರ್ಎಸ್ಎಸ್
ಕುರಿತು ಚಿಂಕರು, ಸಾಹಿತಿಗಳು, ಹೋರಾಟಗಾರರಾದ ಡಾ. ಜಿ. ರಾಮಕೃಷ್ಣ,ಪ್ರೊ. ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ,ಡಾ.ವಿಜಯಾ, ಮಾವಳ್ಳಿ ಶಂಕರ್, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಬಿ. ಶ್ರೀಪಾದ ಭಟ್, ರುದ್ರಪ್ಪ ಹನಗವಾಡಿ, ವಿಮಲಾ.ಕೆ.ಎಸ್, ಡಾ. ಮೀನಾಕ್ಷಿ ಬಾಳಿ, ಟಿ. ಸುರೇಂದ್ರ ರಾವ್, ಡಾ.ವಸುಂಧರಾ ಭೂಪತಿ, ಡಾ.ಎನ್.ಗಾಯತ್ರಿ ಜಂಟಿ ಹೇಳಿಕೆ ನೀಡಿದ್ದಾರೆ.
ಸಚಿವರಾದ ಪ್ರಿಯಾಂಕ್ ಖರ್ಗೆಯವರು ‘ಸರ್ಕಾರ, ಮುಜರಾಯಿ ಸ್ಥಳಗಳಲ್ಲಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಅನುಮತಿ ಕೊಡಬಾರದು’ ಎಂದು ಹೇಳಿರುವುದು ಸಂವಿಧಾನದ ಆಶಯಕ್ಕೆ ಪೂರಕವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಆರ್ಎಸ್ಎಸ್ ಪಥ ಸಂಚಲನದಲ್ಲಿ ಪಿಡಿಒ ಭಾಗಿ; ಸಾರ್ವಜನಿಕ ವಲಯದಲ್ಲಿ ಆಕ್ರೋಶ ಆರ್ಎಸ್ಎಸ್
ಆದರೆ ಖರ್ಗೆಯವರ ಹೇಳಿಕೆಯನ್ನು ತಿರುಚಿದ ಬಿಜೆಪಿ ಪಕ್ಷದ ಮುಖಂಡರು ‘ಆರೆಸ್ಸಸ್ ನಿಷೇಧಿಸಬೇಕು ಎಂದು ಹೇಳಿದ್ದಾರೆಂದು’ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.ಆದರೆ ಇಂತಹ ಅಪಪ್ರಚಾರವನ್ನು ಖಂಡಿಸುತ್ತೇವೆ. ಮತ್ತು ಪ್ರಿಯಾಂಕ್ ಖರ್ಗೆಯವರ ನಿಲುವನ್ನು ಬೆಂಬಲಿಸುತ್ತೇವೆ ಎಂದು ಜಾಗೃತ ನಾಗರಿಕರು ಕರ್ನಾಟಕ ತಿಳಿಸಿದೆ.
ಹಾಗೆಯೇ ಯಾವುದೇ ಸಂಘಟನೆ ದೊಣ್ಣೆಯೂ ಸೇರಿದಂತೆ ಯಾವುದೇ ಆಯುಧ ಹಿಡಿದು ಅಥವಾ ಹಿಂಸೆಗೆ ಪ್ರಚೋದಿಸುವ ಘೋಷಣೆ ಕೂಗುತ್ತಾ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಅನುಮತಿ ನೀಡಬಾರದು ಎಂದಿದೆ.
ಇದರ ಜೊತೆಗೆ ಆರೆಸ್ಸೆಸ್ ಸಂಘಟನೆ ಅಧಿಕೃತವಾಗಿ ನೊಂದಾಯಿಸಿಕೊಳ್ಳಬೇಕು ಮತ್ತು ಅದರ ಎಲ್ಲಾ ಲೆಕ್ಕಪತ್ರಗಳ ವ್ಯವಹಾರವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ಆಗ್ರಹಿಸಿದೆ.
ಇದನ್ನೂ ನೋಡಿ : RSS ದೇಶದ್ರೋಹಿ ಸಂಘಟನೆ – ಬಿ.ಕೆ. ಹರಿಪ್ರಸಾದ್ Janashakthi Media
