ಹೊಸಬರಿಗೆ ಅವಕಾಶ ನೀಡಿದ್ದೇವೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ – ಶೈಲಜಾ ಟೀಚರ್

ತಿರುವನಂತಪುರಂ : ಕಳೆದ ವರ್ಷ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ್ದಕ್ಕಾಗಿ‌ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಹೊಸ ಸಚಿವ ಸಂಪುಟದಿಂದ ಹೊರಗುಳಿದಿರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ.

”ನಾನೊಬ್ಬಳೇ ಅಲ್ಲ. ಇಡೀ ಕ್ಯಾಬಿನೆಟ್ ಅನ್ನು ಬದಲಾಯಿಸಲಾಗಿದೆ. ಇದು ಪಕ್ಷದ ಸಾಮೂಹಿಕ ನಿರ್ಧಾರವಾಗಿತ್ತು. ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಲು ಪಕ್ಷ ನಿರ್ಧರಿಸಿದೆ. ಇದು ಒಳ್ಳೆಯದು. ನಾವು ಖಂಡಿತವಾಗಿಯೂ ಇತರರಿಗೆ ಅವಕಾಶವನ್ನು ನೀಡಬೇಕಾಗಿದೆ. ನನಗೆ ಮಾತ್ರವಲ್ಲ, ಹಿಂದಿನ ಸಂಪುಟದಲ್ಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ” ಎಂದು ಅವರು ಕೇರಳದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಅವಧಿಯಲ್ಲಿ ಕೇರಳ ರಾಜ್ಯ ಸರ್ಕಾರ ನನ್ನನ್ನು ಐದು ವರ್ಷಗಳ ಕಾಲ ಆರೋಗ್ಯ ಸಚಿವೆಯನ್ನಾಗಿ ಮಾಡಿತ್ತು. ಆ ಸಮಯದಲ್ಲಿ ನಾನು ನನ್ನ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸಿದ್ದೇನೆಂಬ ಬಗ್ಗೆ ನನಗೆ ನಂಬಿಕೆ ಇದೆ.  ಎರಡನೇ ಅವಧಿಯಲ್ಲೂ ಶೈಲಜಾ ಟೀಚರ್ ಮಂತ್ರಿಯಾಗಬೇಕು ಎನ್ನುವಂತಹ ವಿಚಾರಗಳು ಸಾಮಾಜಿಕ ಜಾಲತಾನದಲ್ಲಿ ಕೇಳಿಬರುತ್ತಿರುವ ವಿಚಾರವಾಗಿ ಅವರು, ಈ ರೀತಿ ಒತ್ತಡ ಹೇರುವುದರಿಂದ ಯಾವುದೇ ಪ್ರಯೋಜನ ಇಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ನನಗೆ ವಹಿಸಿದ ಜವಬ್ದಾರಿಂದ ನಾನು ವಿಶ್ವದಲ್ಲಿ ಖ್ಯಾತಿಯನ್ನು ಹೊಂದುವಂತಾಯಿತು. ಪಕ್ಷ ಈಗ ಮತ್ತೊಬ್ಬರಿಗೆ ಜವಬ್ದಾರಿ ನೀಡುತ್ತಿದೆ. ಅವರು ನನಗಿಂತ ಉತ್ತಮ ಕೆಲಸ ಮಾಡಲಿದ್ದಾರೆ. ಯಾಕೆಂದರೆ ನಮ್ಮ ಪಕ್ಷದ ನೀತಿ ಅಂತಹದ್ದು ಇದೆ, ಜನ ಕಲ್ಯಾಣಕ್ಕಾಗಿ ನಾವು ಕೆಲಸ ಮಾಡುವವರು ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *