‘ಮೋದಿ ಸರ್ಕಾರ’ ಬೇಡ, ಎನ್ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು

ವೇದರಾಜ ಎನ್‌ಕೆ
18ನೇ ಲೋಕಸಭಾ ಚುನಾವಣೆಗಳಲ್ಲಿ ಮತದಾರರ ತೀರ್ಪಿಗೆ ಎಲ್ಲೆಡೆ ಸ್ವಾಗತ ದೊರೆತಿದೆ. ಇದು ಪ್ರಜಾ ಪ್ರುಪ್ರಭುತ್ವವಾದಿಗಳೆಲ್ಲರೂ ಭಾರತದ ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಒಂದು ‘ಐತಿಹಾಸಿಕ ಹೆಜ್ಜೆ’  ಎಂದು ಹೇಳಿದ್ದಾರೆ. ತಮ್ಮ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ ಮೋದಿಯವರು ಕೂಡ ಇದು ‘ಚಾರಿತ್ರಿಕ ಗೆಲುವು’ಎಂದು ಹೇಳಿರುವುದಾಗಿ ವರದಿಯಾಗಿದೆ. ಆದರೆ ಈ ಚುನಾವಣೆಗಳಲ್ಲಿ ಮತದಾರರು ಬಿಜೆಪಿಗೆ 63 ಸ್ಥಾನಗಳನ್ನು ಕಡಿತ ಮಾಡಿ ಕಳೆದ ಎರಡು ಚುನಾವಣೆಗಳಲ್ಲಿ ನೀಡಿದ್ದ ಸ್ಪಷ್ಟ ಬಹುಮತವನ್ನು ಈ ಬಾರಿ ನಿರಾಕರಿಸಿದ್ದಾರೆ. ಎನ್ಡಿಎಗೆ ಈ ಬಾರಿ 400 ಕ್ಕಿಂತಲೂ ಹೆಚ್ಚು ಸ್ಥಾನಗಳು ದೊರೆಯುತ್ತವೆ ಎಂದು ಮೋದಿ-ಷಾಡಂಗುರಕ್ಕೆ ಪ್ರತಿಯಾಗಿ ಭಾರತದ ಮತದಾರರು ಅದು 300ನ್ನೂ ದಾಟದಂತೆ ನೋಡಿಕೊಂಡಿದ್ದಾರೆ. ಆದರೆ ಇದರಲ್ಲಿ ಬಿಜೆಪಿಯೇ ತರ ಎನ್ಡಿಎ ಪಕ್ಷಗಳ ಬಲ ಕಳೆದ ಬಾರಿಯ  50 ರಿಂದ ಈ  ಬಾರಿ 53ಕ್ಕೇರಿದೆ. ಅಂದರೆ ಮತದಾರರು ಎನ್‍ಡಿಎಗೆ ಬಹುಮತ ನೀಡಿದರೂ ಬಿಜೆಪಿಗೆ ಬಹುಮತವನ್ನು ನಿರಾಕರಿಸಿದ್ದಾರೆ. ಮೋದಿ ಗ್ಯಾರಂಟಿ’ಗಳಿಗೆ ತಕ್ಕ ಉತ್ತರ ನೀಡಿದ್ದಾರೆ.  ಮೋದಿ-ಷಾ ಈ ಚುನಾವಣೆಯನ್ನು ತಮ್ಮ ವೈಯಕ್ತಿಕ ಪ್ರಾಜೆಕ್ಟ್ ಎಂಬಂತೆ ಮಾಡಿದ್ದರು.

ಚುನಾವಣಾ ಫಲಿತಾಂಶಗಳ ಸಾರಾಂಶ ಹೀಗಿದೆ:

  • ಬಿಜೆಪಿ ಯ 240 ಸೇರಿದಂತೆ ಎನ್ಡಿಎ ಪಡೆದಿರುವ ಒಟ್ಟು ಸ್ಥಾನಗಳು 293. ಇಂಡಿಯ ಮೈತ್ರಿಕೂಟ ಪಡೆದಿರುವ ಸ್ತಾನಗಳು ಕಾಂಗ್ರೆಸಿನ 99 ಸೇರಿದಂತೆ 233 ಎಂದು ವರದಿಯಾಗಿದೆ. ಇತರರು 17 ಸ್ಥಾನಗಳಲ್ಲಿ ಗೆದ್ದಿದ್ದಾರೆ.
  • ಮತ ಪಾಲಿನಲ್ಲಿಎನ್ಡಿಎ ಹಿಂದಿ ಪ್ರದೇಶ ಮತ್ತು ಪಶ್ಚಿಮ ಭಾರತದಲ್ಲಿ 17ನೇ ಲೋಕಸಭೆಗೆ ಹೋಲಿಸಿದರೆ ಅನುಕ್ರಮವಾಗಿ 2.3% ಮತ್ತು 14.4&ಕಡಿಮೆ ಮತ ಪಡೆದಿದೆ. ಈಶಾನ್ಯ ಭಾರತದಲ್ಲಿ 1.5% ಕಡಿಮೆಯಾಗಿದೆ. ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ತೆಲುಗು ದೇಶಂ ನೆರವಿನಿಂದ 7.6% ಹೆಚ್ಚಿದೆ. ಪೂರ್ವ ಭಾರತದಲ್ಲಿ 0.7% ಏರಿಕೆ ಕಂಡಿದೆ. ಇಂಡಿಯ ಮೈತ್ರಿಕೂಟ ಎಲ್ಲ ಪ್ರದೇಶಗಳಲ್ಲೂ ಮತಪಾಲನ್ನು ಹೆಚ್ಚಿಸಿಕೊಂಡಿದೆ. ಮುಖ್ಯವಾಗಿ ಹಿಂದಿ ಪ್ರದೇಶದಲ್ಲಿ 11.2% ಮತ್ತು ಪಶ್ಚಿಮ ಭಾರತದಲ್ಲಿ 12.4% ಉಳಿದಂತೆ ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾರತಗಳಲ್ಲಿ ಅನುಕ್ರಮವಾಗಿ 1%, 2.5% ಮತ್ತು 4.2% ಏರಿಕೆ ಕಂಡಿದೆ.
  • ಎನ್ಡಿಎ ಮತ ಪಾಲು ಅರೆ-ಗ್ರಾಮೀಣ ಪ್ರದೇಶಗಳನ್ನು ಬಿಟ್ಟು ಬೇರೆಲ್ಲ ಕಡೆಗಳಲ್ಲಿ 2019ಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ಅತಿ ಹೆಚ್ಚು ಇಳಿಕೆ ಕಂಡಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಇಂಡಿಯ ಮೈತ್ರಿಕೂಟ ಎಲ್ಲ ಪ್ರದೇಶಗಳಲ್ಲಿ ಒಟ್ಟಾಗಿ ಸುಮಾರು 8% ದಷ್ಟು ಹೆಚ್ಚು ಮತಗಳನ್ನು ಗಳಿಸಿದೆ.
  • ಒಂದು ಗಮನಾರ್ಹ ಸಂಗತಿಯೆಂದರೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 131 ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಬಾರಿ 77ಸ್ಥಾನಗಳನ್ನು ಪಡೆದಿತ್ತು. ಅದೀಗ 55ಕ್ಕಿಳಿದಿದೆ- ಕಳೆದ ಬಾರಿ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಸ್ಥಾನಗಳಲ್ಲಿ 45ನ್ನು ಬಿಜೆಪಿ ಪಡೆದಿತ್ತು. ಅದೀಗ 30ಕ್ಕಿಳಿದಿದೆ. ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳ ಸಂಖ್ಯೆ 32 ರಿಂದ  25ಕ್ಕಿಳಿದಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ಅವ್ಯವಹಾರಗಳು – ಡಿಕೆಶಿ ಆರೋಪ

ಅಂದರೆ ಇಂಡಿಯ ಮೈತ್ರಿಕೂಟದ ಸರಕಾರ ಬಂದರೆ ಅದು ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ಇರುವ ಮೀಸಲಾತಿಯನ್ನು ಅವರಿಂದ ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತದೆ ಎಂಬ ಮೋದಿಯವರ ಮಾತನ್ನು ಮತದಾರರು ಎಳ್ಳಷ್ಟೂ ನಂಬಿಲ್ಲ, ಇದು ಮೋದಿಯವರ ಅಪಪ್ರಚಾರ ಎಂದೇ ಭಾವಿಸಿರುವುದಾಗಿ ತೋರಿಸಿಕೊಟ್ಟಿದ್ದಾರೆ.

ಈ ಸುಳ್ಳುಗಳನ್ನು ಮೋದಿಯವರು ಆರಂಭಿಸಿದ್ದು ಬಂಸ್ವಾರ ಕ್ಷೇತ್ರದಲ್ಲಿ; ಅಲ್ಲಿಯೇ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದಾರೆ, ಭಾರತೀಯ ಆದಿವಾಸಿ ಪಾರ್ಟಿಯ ಅಭ್ಯರ್ಥಿ ಗೆದ್ದಿದ್ದಾರೆ.

ಇದಲ್ಲದೆ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿರುವುದನ್ನು ಪ್ರತಿ ಪಕ್ಷಗಳನ್ನು ಟೀಕಿಸಲು ಒಂದು ಪ್ರಬಲ ಅಸ್ತ್ರವಾಗಿ ಬಳಸಿದರೂ, ಕೆಲವೆಡೆ ಅದರ ಪ್ರಯೋಜನಗಳನ್ನು ಪಡೆದಿರಬಹುದಾದರೂ ,ಆ ಆಯೋಧ್ಯೆಯಿರು ಫೈಜಾಭಾದ್ ‌ಕ್ಷೇತ್ರದಲ್ಲಿಯೇ  ಈ ಬಾರಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ! ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ.

ಲಖಿಂಪುರಖೇರಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ ಕೊಂದ ಘಟನೆಯಲ್ಲಿ ಪಾತ್ರವಹಿಸಿದವರೆಂಬ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ಮಂತ್ರಿ ಅಜಯ್‍ ಮಿಶ್ರಥೇಣಿಯವರನ್ನು ಸಂಪುಟದಿಂದ ಕೈ ಬಿಡಬೇಕು ಎಂಬ ರೈತರ ಆಗ್ರಹವನ್ನು ಮೋದಿಯವರು ನಿರ್ಲಕ್ಷಿಸುತ್ತಲೇ ಬಂದಿದ್ದರು, ಈ ಚುನಾವಣೆಗಳಲ್ಲಿ ಅವರಿಗೆ ಸೀಟನ್ನೂ ನೀಡಿದರು. ಆದರೆ ಈ ಚುನಾವಣೆಗಳಲ್ಲಿ ಅಲ್ಲಿನ ಮತದಾರರೇ ಅವರನ್ನು ಸೋಲಿಸಿ ಅವರಿಗೂ, ಮೋದಿಯವರಿಗೂ ಪಾಟ ಕಲಿಸಿದ್ದಾರೆ.

ಮತದಾರರು ಪಾಟಕಲಿಸಿದ್ದು ಇವರೊಬ್ಬ ಮಂತ್ರಿಗೆ ಮಾತ್ರವಲ್ಲ, ಇವರೂ ಸೇರಿದಂತೆ ಮೋದಿ ಸಂಪುಟದ 15 ಮಂತ್ರಿಗಳು ಚುನಾವಣೆಗಳಲ್ಲಿ ಸೋತಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಮೋದಿ ರಾಮಮಂದಿರ, ಮುಸ್ಲಿಮ್ –ವಿರೋಧಿ ಅರೆ ಸುಳ್ಳುಗಳು ಮತ್ತು ಹಸಿಸುಳ್ಳುಗಳನ್ನೇ ಅವಲಂಬಿಸಿದರೇ ಹೊರತು ನಿರುದ್ಯೋಗ , ಬೆಲೆಯೇರಿಕೆ ಮುಂತಾದ ಜನರ ದೈನಂದಿನ ಬದುಕಿನ ಪ್ರಶ‍್ನೆಗಳ ಬಗ್ಗೆ ಚಕಾರವೆತ್ತಿರಲಿಲ್ಲ, ತಮ್ಮ ಸುಳ್ಳುಗಳನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸಿನ ಚುನಾವಣಾ ಪ್ರಣಾಳಿಕೆಯನ್ನು ಅಪಾರ್ಥಗೊಳಿಸಿ ಬಳಸಿಕೊಂಡರೇ ಹೊರತು ಬಿಜೆಪಿಯ ಪ್ರಣಾಳಿಕೆಯ ಪ್ರಸ್ತಾಪವೇ ಇರಲಿಲ್ಲ, ಕೇವಲ ‘ಮೋದಿ ಗ್ಯಾರಂಟಿ’ಗಳ ಮಂತ್ರ ಜಪ ಇರುತ್ತಿತ್ತು.

ಆದರೆ,ಈ  ವೈಯಕ್ತಿಕ ‘ಗ್ಯಾರಂಟಿ’ಗಳು ಎಳ್ಳಷ್ಟೂ ನಂಬಲರ್ಹವಲ್ಲ ಎಂದು ಮೋದಿ ಮತ್ತು ಬಿಜೆಪಿಗೆ ಪಾಠಗಳನ್ನು ಕಲಿಸಲೆಂದೇ ಮತದಾರರು, ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನಿರಾಕರಿಸಿದಂತೆ ಕಾಣುತ್ತದೆ.

ಚುನಾವಣಾ ಆಯೋಗ ಮತ್ತು ಮಾಧ್ಯಮಗಳ ಪಾತ್ರ

ವಾಸ್ತವವಾಗಿ ಈ ಲೋಕಸಭಾ ಚುನಾವಣೆ ಅತ್ಯಂತ ಅಸಮಾನ ಪಾತಳಿಯಲ್ಲಿ ನಡೆದಿರುವ ಚುನಾವಣೆ. ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶ ಕಲ್ಪಿಸುವ ತನ್ನ ಕರ್ತವ್ಯವನ್ನು ಪಾಲಿಸಿದ್ದರೆ,  ಮುಖ್ಯವಾಗಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಮಾಡಿದ್ದರೆ, ಕೊನೆಗೂ ಸುಪ್ರಿಂ ಕೋರ್ಟ್‍ ರದ್ದು ಮಾಡಿದ ಚುನಾವಣಾ ಬಾಂಡುಗಳಿಂದ ಸಂಗ್ರಹಿಸಿದ ಸಾವಿರ ಕೋಟಿ ಗಟ್ಟಲೆ ಹಣಬಲವನ್ನು ಮತ್ತು ಇ.ಡಿ., ಸಿಬಿಐ ಮುಂತಾದ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವದನ್ನು ತಡೆಯುವ ವ್ಯವಸ್ಥೆಯಿದ್ದಿದ್ದರೆ ಸತತ ಮೂರನೇ ಬಾರಿ ಸರಕಾರ ನಡೆಸುವ ‘ಚಾರಿತ್ರಿಕ ಅವಕಾಶ’ ವೇಮೋದಿಯವರಿಗೆ ಸಿಗುತ್ತಿರಲಿಲ್ಲವೇನೋ.

ಕಳೆದ 10 ವರ್ಷಗಳಲ್ಲಿಅಧಿಕಾಸ್ಥರ ಬೋಪರಾಕು ಹೇಳಿ ‘ಗೋದಿ ಮೀಡಿಯ’ ಎಂದೇ ಕುಖ್ಯಾತಿಗಳಿಸಿರುವ ಕಾರ್ಪೊರೇಟ್‍ ಮಾಧ್ಯಮಗಳಂತೂ ಈ ಬಾರಿ ಭಾರೀ ಅವಮಾನಕ್ಕೊಳಗಾಗಿವೆ. ಚುನಾವಣಾ ಪ್ರಚಾರದ ವೇಳೆಯಲ್ಲಿ 80ಕ್ಕೂ ಹೆಚ್ಚು ‘ಮೋದಿ ಸಂದರ್ಶನ ’ಗಳನ್ನು ಪ್ರಸಾರ ಮಾಡಿ, ಅವುಗಳಲ್ಲಿ ಮೋದಿ ಬಾಯಿಂದ ಉದುರಿದ ನುಡಿ ಮುತ್ತುಗಳನ್ನು ಭಕ್ತಿಯಿಂದ ಪ್ರಚಾರ ಮಾಡಿದವು. ಅವು ಎಷ್ಟು ಆಭಾಸಕಾರಿಯಾದರೂ, ಹಸಿಸುಳ್ಳುಗಳಾದರೂಅವನ್ನುಪ್ರಶ‍್ನಿಸದೆಪ್ರಸಾರಮಾಡಿದವು. ಇದುಅವುಗಳುಜೂನ್ 1ರಂದು ಕೊನೆಯ ಹಂತ ಮುಗಿಯುತ್ತಿದ್ದಂತೆ ಪ್ರಸಾರ ಮಾಡಿದ‘ ಎಕ್ಸಿಟ್‍ ಪೋಲ್‍’ಗಳಲ್ಲಿ ತಾರಕ್ಕೇರಿತು.ಎನ್ಡಿಎ ಯ ಸ್ಥಾನಗಳನ್ನು 400ರ ಹತ್ತಿರಕ್ಕೆ ತರುವ ಪ್ರಯತ್ನದಲ್ಲಿ ಅವು ಪರಸ್ಪರ ಸ್ಪರ್ಧೆಗಿಳಿದಂತೆ ಕಾಣುತ್ತಿತ್ತು. ಆದರೆ ಜೂನ್‍4 ರಂದು ನಿಜ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಇವೆಲ್ಲವುಗಳೂ ಧೂಳೀ ಪಟವಾಗಿ ಈ ಮಾಧ್ಯಮಗಳು ಹಿಂದೆಂದೂ ಕಾಣದ ಅವಮಾನಕ್ಕೊಳಗಾಗಿವೆ.

ಮುಂದೇನು?

ಈ ಬಾರಿತನ್ನ ‘ಐತಿಹಾಸಿಕ’ ಸರಕಾರವನ್ನು ರಚಿಸಲು ಮೋದಿ ಮತ್ತು ಬಿಜೆಪಿಯವರು ತೆಲುಗು ದೇಶಂ ಮತ್ತು ಜೆಡಿ(ಯು) ಪಕ್ಷಗಳನ್ನುಅವಲಂಬಿಸಲೇ ಬೇಕಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ವಿಳಂಬ ಮಾಡದೆ ಎನ್ಡಿಎ ಮೋದಿಯವರನ್ನು ತಮ್ಮ ನಾಯಕರನ್ನಾಗಿ ಆರಿಸಿದೆ ಎಂಬ ಸುದ್ದಿ ಬಂದಿದೆ.  ಆದರೆ ತಮ್ಮ ಪಕ್ಷದ ಮುಖಂಡರನ್ನೇ ಮೂಲೆಗೆ ತಳ್ಳಿರುವ, ಪ್ರಾದೇಶಿಕ ಪಕ್ಷಗಳನ್ನು ಒಡೆದಾಳುವ ತಂತ್ರವನ್ನು ಅನುಸರಿಸಿ ಬಂದಿರುವ ಮೋದಿ-ಷಾ ಜೋಡಿ ಈ ಹೊಸ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬ ಸಂದೇಹವನ್ನು ಹಲವು ರಾಜಕೀಯ ವೀಕ್ಷಕರು ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ, ಮೋದಿ ಸರಕಾರದ ಸರ್ವಾಧಿಕಾರ ಶಾಹೀ ಆಳ್ವಿಕೆಗೆ ಈಗ ಭಾರತದ ಮತದಾರರು ಅಂಕುಶ ಹಾಕಿರುವುದಂತೂ ನಿಜ. ಇನ್ನು ಮುಂದೆ, ಮೋದಿ-ಷಾ ಹಿಂದಿನ ರೀತಿಯಲ್ಲಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಹಾಗೆ ಮಾಡಿದರೆ ಬಿಜೆಪಿಯ ಗತಿಯೇ ತಮಗೂ ಬಂದೀತು ಎಂಬ ಎಚ್ಚರ ಎನ್ಡಿಎ ಮೈತ್ರಿಕೂಟದ ಬಿಜೆಪಿಯೇ ತರ ಮುಖಂಡರಲ್ಲೂ ಇರುತ್ತದೆ.

ಹೊಸ ಸರಕಾರವನ್ನು ರಚಿಸುವ ಮೋದಲೇ ಮೋದಿಯವರು ಎನ್ಡಿಎ ತನ್ನ ಮೂರನೇ ಅಧಿಕಾರವಧಿಯಲ್ಲಿ ದೊಡ್ಡ ನಿರ್ಣಯಗಳನ್ನು ಕೈ ಗೊಳ್ಳಲಿದೆ ಎಂದಿದ್ದಾರೆ. ಲೋಕಸಭಾ ಚುನಾವಣೆಗಳ ಮತದಾನ ಅಂತ್ಯವಾಗುತ್ತಿದ್ದಂತೆಯೇ ರಸ್ತೆ ಟೋಲ್‍ ತೆರಿಗೆಯಲ್ಲಿ ಸಾರಾಸಗಟು 5ರೂ ಹೆಚ್ಚಳವನ್ನು ಘೋಷಿಸಲಾಗಿದೆ. ಅಮುಲ್‍ ಮತ್ತು ಮದರ್ ರ್ಡೈರಿಯ‌ ಹಾಲಿನ ಬೆಲೆಯನ್ನು ಲೀಟರಿಗೆ 2 ರೂ. ಗಳಷ್ಟು ಏರಿಸಲಾಗಿದೆ. 400+  ಸೀಟುಗಳು ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಈ  ಏರಿಕೆಗಳನ್ನು ಮಾಡಲಾಗಿದೆಯೋ ಗೊತ್ತಿಲ್ಲ. ಒಂದು ವೇಳೆ ಹೊಸದಾಗಿ ರಚನೆಗೊಳ್ಳ ಬಹುದಾದ ಎನ್‍ಡಿಎ ಸರಕಾರ ಈ ತನ್ನ ಹಿಂದಿನ ಧೋರಣೆಗಳನ್ನೆ ಮುಂದುವರೆಸಿದರೆ, ಅದರ ವಿರುದ್ಧ ವಿಭಿನ್ನ ಜನವಿ ಭಾಗಗಳ ಪ್ರತಿರೋಧ ಇನ್ನಷ್ಟು ತೀವ್ರಗೊಳ್ಳುತ್ತದೆ ಎಂದು ಸಹಜವಾಗಿಯೇ ನಿರೀಕ್ಷಿಸಬಹುದು.

ಇದನ್ನೂ ನೋಡಿ: ಬಿಜೆಪಿಯನ್ನು ಕೈ ಬಿಟ್ಟ ಐದು ರಾಜ್ಯಗಳು Janashakthi Media

Donate Janashakthi Media

Leave a Reply

Your email address will not be published. Required fields are marked *