ಕೋಲ್ಕತ್ತಾ: ‘ಕೋವಿಡ್ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಿಂದಾಗಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ತುಂಬಾ ತೊಂದರೆಗಳು ಎದುರಾಗಿವೆ. ಶಾಲೆಗಳನ್ನು ಮತ್ತೆ ತೆರೆದರೆ ಮಕ್ಕಳ ಆರೋಗ್ಯದ ಬಗ್ಗೆ ಇರುವ ಕಾಳಜಿಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯದಿರುವುದೇ ಸೂಕ್ತʼ ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹೇಳಿದ್ದಾರೆ.
ಶಿಕ್ಷಣ ಉತ್ತೇಜನ ಮತ್ತು ಬಡತನ ಹೋಗಲಾಡಿಸಲು ಅಮರ್ತ್ಯ ಸೇನ್ ಅವರು ಸ್ಥಾಪಿಸಿರುವ ‘ಪ್ರತಿಚಿ‘ ಎನ್‌ಜಿಓ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನು ಓದಿ: 18 ತಿಂಗಳ ಬಳಿಕ ಶಾಲಾ ಕಾಲೇಜ್ ಆರಂಭ
“ಶಾಲೆಗಳ ಆರಂಭದ ಬಗ್ಗೆ ಅಮೇರಿಕಾದಲ್ಲಿ ಎರಡು ಗುಂಪುಗಳ ನಡುವೆ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ, ಬಿರ್ಭೂಮ್‌ನ ಪೂರ್ವದಲ್ಲಿ ಅನ್ವಯಿಸಬಹುದಾದದ್ದು, ಬಂಕುರಾ ಪಶ್ಚಿಮದಲ್ಲಿ ಕೆಲಸ ಮಾಡದಿರಬಹುದು. ಪ್ರತ್ಯುತ್ತರ ಸಿದ್ದ ಉತ್ತರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಸೇನ್ ಹೇಳಿದ್ದಾರೆ.
“ನಾವು ಮೌಲ್ಯಮಾಪನಕ್ಕೆ ಒತ್ತು ನೀಡಿದರೂ ಅದು ಕೊನೆಯ ವಿಷಯ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಜ್ಞಾನವನ್ನು ಪಡೆದುಕೊಳ್ಳುವುದು ಮತ್ತು ಹಂಚಿಕೊಳ್ಳುವುದು ಮೊದಲ ಆದ್ಯತೆಯಾಗಬೇಕಿದೆ. ಈ ಸಮಸ್ಯೆಯನ್ನು ವಿವಿಧ ಕಡೆಯಿಂದ ಮತ್ತು ದೃಷ್ಟಿಕೋನದಿಂದ ನೋಡಬೇಕು” ಎಂದರು.