ತಾಜ್‌ಮಹಲ್‌ ಕೋಣೆಗಳಲ್ಲಿ ಹಿಂದೂ ದೇವರ ವಿಗ್ರಹಗಳಿಲ್ಲ – ಭಾರತೀಯ ಪ್ರಾಚ್ಯವಸ್ತು ಇಲಾಖೆ ಸ್ಪಷ್ಟನೆ

ಆಗ್ರಾ: ತಾಜ್‌ ಮಹಲ್‌ನೊಳಗಿನ ಮುಚ್ಚಿದ 22 ಕೋಣೆಗಳೊಳಗೆ ಹಿಂದೂ ದೇವರ ವಿಗ್ರಹಗಳಿಲ್ಲ, ಭದ್ರತಾ ಕಾರಣದಿಂದಾಗಿ ಅವುಗಳನ್ನು ಮುಚ್ಚಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ.

ವಿಶ್ವವಿಖ್ಯಾತ ತಾಜ್‌ ಮಹಲ್‌ ಮೂಲತಃ ಶಿವನ ದೇವಸ್ಥಾನ, ಅದರ ಹೆಸರು ತೇಜೋ ಮಹಾಲಯ ಎಂಬ ವಾದವೊಂದು ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಹಾಕಿದ್ದ ಅರ್ಜಿಯೊಂದನ್ನು ಅಲಹಾಬಾದ್‌ ಉಚ್ಚ ನ್ಯಾಯಾಲಯ ಇತ್ತೀಚೆಗಷ್ಟೇ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಅಧಿಕಾರಿಯೊಬ್ಬರು ಪ್ರತಿ ಕ್ರಿಯಿಸಿ, ತಾಜ್‌ ಮಹಲ್‌ನೊಳಗಿನ ಮುಚ್ಚಿದ 22 ಕೋಣೆಗಳೊಳಗೆ ಹಿಂದೂ ದೇವರ ವಿಗ್ರಹಗಳಿಲ್ಲ. ಹಾಗೆಯೇ ಆ ಕೋಣೆಗಳನ್ನು ಶಾಶ್ವತವಾಗಿ ಮುಚ್ಚಿಲ್ಲ. ಕಾಲಕಾಲಕ್ಕೆ ತೆಗೆದು ಕಟ್ಟಡದ ಸಂರಕ್ಷಣೆಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಂಡು ಬರಲಾಗಿದೆ ಎಂದು “ದಿ ಕ್ವಿಂಟ್‌” ವರದಿ ಮಾಡಿದೆ.

ತಾಜ್‌ ಮಹಲ್‌ ಮೂಲತಃ ಶಿವನ ದೇವಸ್ಥಾನ ಎಂಬ ವಾದವನ್ನೂ ಎಎಸ್‌ಐ ಮೂಲಗಳು ಅಲ್ಲಗಳೆದಿವೆ. ತಾಜ್‌ ಮಹಲ್‌ನ ನೆಲಮಾಳಿಗೆಯಲ್ಲಿ ಒಟ್ಟು 100 ಸಾರ್ವಜನಿಕ ಕೋಣೆಗಳಿವೆ. ಇವುಗಳೆಲ್ಲ ವಿವಿಧ ವಿನ್ಯಾಸಗಳನ್ನು ಹೊಂದಿವೆ. ಅವು ಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚ ಲಾಗಿದೆ. ಜನರು ಅಲ್ಲೆಲ್ಲ ಪ್ರವೇಶಿಸಿ ಹಾಳು ಮಾಡಬಾರದೆನ್ನುವುದೇ ಇದರ ಹಿಂದಿನ ಕಾಳಜಿ ಎಂದು ಅಧಿಕಾರಿ ಹೇಳಿದ್ದಾರೆ.

ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮೊಹಮ್ಮದ್‌ ಈ ಬಗ್ಗೆ ಪ್ರತಿ ಕ್ರಿಯಿಸಿ, ತಾನು ಅಲ್ಲಿ ಉಸ್ತುವಾರಿಯಾ ಗಿದ್ದಾಗ ಆ ಕೊಠಡಿಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಕಂಡಿಲ್ಲ ಎಂದಿದ್ದಾರೆ.

 

Donate Janashakthi Media

One thought on “ತಾಜ್‌ಮಹಲ್‌ ಕೋಣೆಗಳಲ್ಲಿ ಹಿಂದೂ ದೇವರ ವಿಗ್ರಹಗಳಿಲ್ಲ – ಭಾರತೀಯ ಪ್ರಾಚ್ಯವಸ್ತು ಇಲಾಖೆ ಸ್ಪಷ್ಟನೆ

  1. ಆ ಪುರಾತತ್ವ ಅಧಿಕಾರಿಗಳು ರಾಜಿನಾಮೆಗೆ ಒತ್ತಡಿಸುಂತಾಗದಿದ್ದರೆ ಸಾಕು.
    ಭಾರತವನ್ನು ಏಕಸಂಸ್ಕೃತಿ ಕೇಂದ್ರವಾಗಿಸುವ ನಾಗಪುರದ ತತ್ವಾಂಜಲಿ ದುರ್ಬಲಗೊಳ್ಳದ‌‌ ಹೊರತು ಈ ನೆಲಕ್ಕೆ ಸುಖವಿಲ್ಲ.

Leave a Reply

Your email address will not be published. Required fields are marked *