ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಾಳೆ (ಆಗಸ್ಟ್-8) ಲೋಕಸಭೆಯಲ್ಲಿ ಪ್ರಾರಂಭವಾಗಲಿರುವ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ:ಮಣಿಪುರಕ್ಕೆ ತೆರಳಿರುವ ರಾಹುಲ್ ಗಾಂಧಿ ಅವರನ್ನು ತಡೆದ ಪೋಲಿಸರು
ಮಾನಹಾನಿ ಪ್ರಕರಣದಲ್ಲಿ ಅನರ್ಹಗೊಂಡು,ಇದೀಗ ಸದಸ್ಯತ್ವ ಪುನಃಸ್ಥಾಪಿಸಿದ ಬಳಿಕ ಲೋಕಸಭೆಯಲ್ಲಿ ಅವರು ಮಾಡುವ ಮೊದಲ ಭಾಷಣ ಇದಾಗಲಿದೆ. ಈ ಬಗ್ಗೆ ನಾಳಿಯಿಂದ ಆಗಸ್ಟ್-10ರ ವರೆಗೆ ಚರ್ಚೆ ನಡೆಯಲಿದೆ. ಚರ್ಚೆಯ ಕೊನೆಯ ದಿನ ಅಂದರೆ ಆಗಸ್ಟ್ 10ರಂದು ಪ್ರಧಾನಿ ಮೋದಿ ಉತ್ತರ ನೀಡುವ ಸಾಧ್ಯತೆ ಇದೆ.
ಮಣಿಪುರ ವಿಷಯದ ಬಗ್ಗೆ ಸದನದೊಳಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೇಳಿಕೆ ಪಡೆಯಲು ವಿರೋಧ ಪಕ್ಷಗಳು,ಈ ಅಸ್ತ್ರ ಪ್ರಯೋಗಿಸಿವೆ.