ಬೆಂಗಳೂರು: 60 ವರ್ಷ ಪೂರ್ಣಗೊಂಡಿದೆ ಎಂಬ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ರಾಜ್ಯದಲ್ಲಿನ ಸುಮಾರು 12000 ಬಿಸಿಯೂಟ ನೌಕರರನ್ನು ಸೇವೆ ವಜಾ ಮಾಡುವ ರಾಜ್ಯ ಸರ್ಕಾರ ನಿರ್ಧಾರಕ್ಕೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 50 ಲಕ್ಷ ಮಕ್ಕಳಿಗೆ ದಿನ ನಿತ್ಯ ಸ್ವಚ್ಛ ಮತ್ತು ಬಿಸಿ ಬಿಸಿ ಅಡುಗೆ ಮಾಡಿ ಮಕ್ಕಳಿಗೆ ತಾಯ್ತನದ ಊಟವನ್ನು ಬಡಿಸುವ ವ್ಯವಸ್ಥೆ ಜಾರಿಗೆ ಬಂದಿದ್ದು, ಈ ಯೋಜನೆ 2001-02ರಂದು ಜಾರಿಯಲ್ಲಿದೆ. ಅಲ್ಲದೆ ಈ ಯೋಜನೆಯಡಿ ರಾಜ್ಯದಲ್ಲಿ 1 ಲಕ್ಷ 18 ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.
ಆದರೆ ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಅಂತಹ ಯಾವುದೇ ಪ್ರಯತ್ನಗಳನ್ನು ಮಾಡದೇ ನಿವೃತ್ತಿ ಪರಿಹಾರ ಕೊಡದೇ ಏಕಾಏಕಿ ಸುಮಾರು 12000 ಜನರನ್ನು ಮಾರ್ಚ್ 31ರಿಂದ ಕೆಲಸದಿಂದ ವಜಾ ಮಾಡುತ್ತಿರುವ ಕ್ರಮವನ್ನು ಖಂಡಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರದ ಅಮಾನವೀಯ ನಡೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ ಅವರು ಕೆಲಸಕ್ಕೆ ತೆಗೆದುಕೊಳ್ಳುವಾಗ ವಯಸ್ಸಿನ ಮಿತಿ ಹಾಕುವ ಸರ್ಕಾರ ಕೆಲಸದಿಂದ ತೆಗೆಯಲು ವಯಸ್ಸಿನ ಮಿತಿ ಹಾಕುವುದಿಲ್ಲ. ಅಲ್ಲದೆ, ಅಕ್ಷರ ದಾಸೋಹ ಸಂಘ 2016ರಿಂದಲೂ ವಯೋಮಿತಿ ಆಧಾರದ ಮೇಲೆ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಹಲವಾರು ಬಾರಿ ಸರ್ಕಾಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಯಾವುದೇ ಕ್ರಮವನ್ನು ವಹಿಸಿಲ್ಲ ಎಂದು ಹೇಳಿದ್ದಾರೆ.
ಈಗ ಕೆಲಸದಿಂದ ವಜಾವಾಗುತ್ತಿರುವ ಬಹುತೇಕ ಬಿಸಿಯೂಟ ನೌಕರರು ಕೆಲಸಕ್ಕೆ ತೆಗೆದುಕೊಳ್ಳುವಾಗ ಇದ್ದ ವೇತನ ತಿಂಗಳಿಗೆ 300-650 ರೂಪಾಯಿ ಮಾತ್ರ. ಈಗ ನೌಕರರ ಸಂಘಟಿತ ಹೋರಾಟದಿಂದ 3600-3700ರೂ ಸಂಬಳ ಪಡೆಯುತ್ತಿದ್ದಾರೆ. ಅಧಿಕಾರಕ್ಕೆ ಬಂದಂತಹ ಯಾವುದೇ ಶಿಕ್ಷಣ ಮಂತ್ರಿಗಳು, ಸರ್ಕಾರಗಳು ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯುವ ಪ್ರಸ್ತಾಪಗಳು ಬಂದಾಗ ನಿವೃತ್ತಿ ಸೌಲಭ್ಯ ಕೊಡಲು ಪ್ರಯತ್ನ ಮಾಡುತ್ತಿದ್ದವು ಎಂದು ಹೇಳಿದ್ದಾರೆ.
ತಿಂಗಳಿಗೆ ರೂ.2600 (ಬಜೆಟ್ನಲ್ಲಿ ಘೋಷಣೆಯಾದ ರೂ.1000 ಇನ್ನು ಅನ್ವಯವಾಗಿಲ್ಲ.) ರೂ.ಗಳ ಸಂಬಳಕ್ಕೆ ಈ ಮಹಿಳೆಯರು ದುಡಿಯುತ್ತಾರೆ. ಅಂದರೆ ಇವರ ಕುಟುಂಬಗಳ ಮುಂದಿನ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಲಿದೆ. ಹಾಗಾಗಿ ಸರ್ಕಾರ ನೌಕರರ ಭವಿಷ್ಯಕ್ಕೆ ನಿರ್ದಿಷ್ಟ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.