ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 4 ದಿನಗಳಲ್ಲಿ 3 ವಿದ್ಯಾರ್ಥಿಗಳ ಆತ್ಮಹತ್ಯೆ

ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಎಸ್‍ಎಫ್‍ಐ ಆಗ್ರಹ

ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಎನ್‍ಐಟಿಗಳಲ್ಲಿ ಫೆಬ್ರವರಿ 12ರಿಂದ 15 ರ ನಡುವೆ ಮೂರು ವಿದ್ಯಾರ್ಥಿಗಳ ಆತ್ಮಹತ್ಯೆಗಳ ತಲ್ಲಣಗೊಳಿಸುವ ವರದಿಗಳು ಬಂದಿವೆ,

ಫೆಬ್ರವರಿ 12 ರಂದು ಮುಂಬೈ ಐಐಟಿಯಲ್ಲಿ ದರ್ಶನ್‍ ಸೋಲಂಕಿ, 13ರಂದು ಮದ್ರಾಸ್‍ ಐಐಟಿಯಲ್ಲಿ ಸ್ಟೆಫಾನ್‍ ಸನ್ನಿ ಮತ್ತು 15ರಂದು ಎನ್‍ಐಟಿ ಕೊಝಿಕೋಡ್‍ನಲ್ಲಿ ನಿತಿನ್‍ ಶರ್ಮ ಆತ್ಮ ಹತ್ಯೆಗೆ ಶರಣಾದ ವಿದ್ಯಾರ್ಥಿಗಳು.

ಇದನ್ನು ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ವಿದ್ಯಾರ್ಥಿಗಳ ವಿರುದ್ಧ ಈಗಲೂ ತಾರತಮ್ಯ -ಡಾ.ಶಿವದಾಸನ್

ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಕೊಲ್ಲುವ ಸಂರಚನಾ ಅಸಮಾನತೆಗಳು, ತಾರತಮ್ಯ ಮತ್ತು ತೀವ್ರ ಶೈಕ್ಷಣಿಕ ಒತ್ತಡದ ಸಮಸ್ಯೆಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆ  ಎಸ್‌ಎಫ್‌ಐ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‍ಗಳಲ್ಲಿ ಿನ್ನಷ್ಟುಆತ್ಮಹತ್ಯೆಗಳು ನಡೆಯಬಾರದು, ಇದಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಎಫ್‍ಐ ಆಗ್ರಹಿಸಿದೆ.

18ವರ್ಷದ ದರ್ಶನ್‍ ಸೋಲಂಕಿ ‍3 ತಿಂಗಳ ಹಿಂದೆಯಷ್ಟೇ ಬಿ.ಟೆಕ್‍ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದ. ಈ ಶಿಕ್ಷಣ ಸಂಸ್ಥೆಯಲ್ಲಿರುವ ಜಾತಿ ತಾರತಮ್ಯದ ವಾತಾವರಣ ಮತ್ತು ಈ ಕುರಿತು  ಸಂಸ್ಥೆಯ ನಿರ್ವಾಹಕರ ತಿರಸ್ಕಾರದ ನಿಲುವು ಈವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಯಥಾಪ್ರಕಾರ  ಐಐಟಿಯ ಉನ್ನತ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ. 24 ವರ್ಷದ ಸ್ಟೆಫಾನ್ ಸನ್ನಿ ಎಂಎಸ್‍ಸಿ ವಿದ್ಯಾರ್ಥಿ ಮತ್ತು 20ವರ್ಷದ ನಿತಿನ್‍ ಶರ್ಮ ಬಿ.ಟೆಕ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *