ಡೊಮಿನಿಕನ್ ರಿಪಬ್ಲಿಕ್‌ನ ರಾಜಧಾನಿ ಸ್ಯಾಂಟೋ ಡೊಮಿಂಗೋದಲ್ಲಿರುವ ಪ್ರಸಿದ್ಧ ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ಏಪ್ರಿಲ್ 8, 2025ರಂದು ಛಾವಣಿ ಕುಸಿದ ಪರಿಣಾಮ ಕನಿಷ್ಠ 98 ಜನರು ಸಾವನ್ನಪ್ಪಿದ್ದು, 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ದುರಂತ ಸಂಭವಿಸಿದಾಗ ಮೆರೆಂಗ್ಯೂ ಸಂಗೀತಗಾರ ರಬ್ಬಿ ಪೆರೇಸ್ ಅವರ ಸಂಗೀತ ಕಚೇರಿ ನಡೆಯುತ್ತಿತ್ತು. ಅವರು ಸಹ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.
ಇದನ್ನು ಓದಿ : ಸೌಜನ್ಯಶೂನ್ಯ ಸಮಾಜ- ಅಂತಿಮ ನ್ಯಾಯದ ಕನಸು
ಮಾಜಿ ಮೆಜರ್ ಲೀಗ್ ಬೇಸ್ಬಾಲ್ ಆಟಗಾರರಾದ ಆಕ್ಟೇವಿಯೊ ಡೋಟೆಲ್ ಮತ್ತು ಟೋನಿ ಬ್ಲಾಂಕೊ ಸಹ ಈ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ನಂತರ, ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಸುಮಾರು 138 ಜನರನ್ನು ಅವಶೇಷಗಳಿಂದ ಬದುಕುಳಿಸಲಾಗಿದೆ. ಆದಾಗ್ಯೂ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಈ ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಯು.ಎಸ್ ಸಾಮ್ರಾಜ್ಯದ ಅವನತಿ ತಡೆಯಲು ಟ್ರಂಪ್ ಹೊಸ ಫಾರ್ಮುಲಾ?
ಡೊಮಿನಿಕನ್ ರಿಪಬ್ಲಿಕ್ ಅಧ್ಯಕ್ಷ ಲೂಯಿಸ್ ಅಬಿನಾದರ್ ಈ ದುರಂತದ ಹಿನ್ನೆಲೆಯಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಿದ್ದಾರೆ.