ಇಂದಿನಿಂದ `ನೈಟ್ ಕರ್ಫ್ಯೂ’ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಬೆಂಗಳೂರುರಾಜ್ಯ ಸರ್ಕಾರದಿಂದ ಕೊರೋನಾ  ಹಾಗೂ ಓಮಿಕ್ರಾನ್ ನಿಯಂತ್ರಣಕ್ಕೆ ತಡೆ ನೀಡೋ ಕಾರಣದಿಂದಾಗಿ ಡಿಸೆಂಬರ್ 28, 2021 ರಿಂದ ಜನವರಿ 7, 2022  ರವರೆಗೆ ಜಾರಿಗೆ ಬರುವಂತೆ ನೈಟ್ ಕರ್ಪ್ಯೂ  ಜಾರಿಗೊಳಿಸಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಹೊಸವರ್ಷಕ್ಕೆ ಹೊಸ ನಿಯಮ ಜಾರಿಯಾಗಲಿದೆ.  ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧ ಮಾಡಲಾಗಿದೆ. ಈ ನೈಟ್​ ಕರ್ಫ್ಯೂ ವೇಳೆ ಏನೆಲ್ಲ ಸೌಲಭ್ಯವಿರುತ್ತೆ ಎಂಬುದು ಇಲ್ಲಿದೆ.

ನೈಟ್ ಕರ್ಪ್ಯೂ ವೇಳೆಯಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಓಡಾಡಬಹುದು.

ತುರ್ತು ಸೇವೆಗಳು ಓಪನ್ ಇರಲಿದೆ

ಕಂಪನಿ ನೌಕರರು,‌ ಕಾರ್ಖಾನೆಯ ಕಾರ್ಮಿಕರು ಐಡಿ ಕಾರ್ಡ್ ತೋರಿಸಿ ಓಡಾಡಬಹುದು

ಗೂಡ್ಸ್ ಸೇವೆ ಇರಲಿದೆಬಸ್ , ರೈಲು, ವಿಮಾನ ಸೇವೆ ಇರಲಿದೆ

ಬಸ್ ಟಿಕೆಟ್ ತೋರಿಸಿ ಓಡಾಟ ನಡೆಸಬಹುದು

ಎಲ್ಲಾ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ಇದನ್ನೂ ಓದಿ : ನೈಟ್​ಕರ್ಫ್ಯೂ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ

ಅಗತ್ಯ ಸೇವೆ ಒದಗಿಸುವ ವಾಹನಕ್ಕೆ ಅನುಮತಿ

ಫುಡ್​ ಹೋಂ ಡೆಲಿವರಿಗೆ ಅನುಮತಿ

ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ

ದೂರ ಪ್ರಯಾಣದ ಬಸ್​ಗಳಿಗೆ ಅನುಮತಿ

ಆಟೋ, ಕ್ಯಾಬ್​ಗೆ ಅವಕಾಶ

ನೈಟ್​ಕರ್ಪ್ಯೂ ವೇಳೆ ಬಾರ್, ಪಬ್ ಬಂದ್

ಲೇಟ್​ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್

ಎಲ್ಲಾ ಫುಡ್ ಸ್ಟ್ರೀಟ್​​ಗಳು ಬಂದ್

ಪಬ್,ಬಾರ್, ಕ್ಲಬ್​​, ಹೋಟೆಲ್​ಗಳ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ

ಸಿನೆಮಾ ಥಿಯೇಟರ್ ಬಂದ್

ನೈಟ್‌ ಕರ್ಪ್ಯೂಗೆ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದಲ್ಲಿ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ನೈಟ್‌ ಕರ್ಫ್ಯೂ ವಿರೋಧಿಸಬೇಡಿ ಸಹಕರಿಸಿ ಎಂದು ಸಚಿವ ಸುಧಾಕರ್‌ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *