50% ಭಾರತದ ಮಹಿಳೆಯರು ಮುಟ್ಟಿನ ವೇಳೆ ಬಟ್ಟೆ ಧರಿಸುತ್ತಾರೆ : ಎನ್ಎಫ್ಎಚ್ಎಸ್ ವರದಿ

ನವದೆಹಲಿ : ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ 15-24 ವರ್ಷದ 50% ಮಹಿಳೆಯರು ಋತುಸ್ರಾವದ ವೇಳೆ ಬಟ್ಟೆಯನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ.

ಈ ಸಮಯದಲ್ಲಿ  ಶುಚಿತ್ವ ಇಲ್ಲದಂತಹ ಬಟ್ಟೆ ಧರಿಸುವುರಿಂದ ಸೋಂಕುಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಜಾಗೃತಿ ಮೂಡಿಸಬೇಕೆಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಹೇಳಿಕೆ ನೀಡಿದೆ.

64% ಮಹಿಳೆಯರು ಭಾರತದಲ್ಲಿ  ಸ್ಯಾನಿಟರಿ ನ್ಯಾಪಕಿನ್ಸ್  ಬಳಸುತ್ತಾರೆ.50% ಬಟ್ಟೆ,15% ಸ್ಥಳೀಯ ಸ್ಥಳಗಳಲ್ಲಿ ತಯಾರಿಸಿದ ಸ್ಯಾನಿಟರಿ ನ್ಯಾಪ್ಕಿನ್ ಧರಿಸುತ್ತಾರೆ78% ಮಹಿಳೆಯರು ಮಾತ್ರ ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತಾರೆ.

ಸ್ಥಳೀಯಪ್ರದೇಶಗಳಲ್ಲಿ ತಯಾರಾದ ,ಸ್ಯಾನಿಟರಿ ನ್ಯಾಪ್ಕಿನ್,ಮೆನ್ಸಟ್ರಲ್ ಕಪ್ ಮತ್ತು ಟ್ಯಂಪೋನ್ ಗಳನ್ನು ಉಪಯೋಗಿಸುವುದರಿಂದ ದೇಹದಲ್ಲಿ ಹೆಚ್ಚಾಗು ಸೋಂಕನ್ನು ತಡೆಯಿಡುಯುತ್ತವೆ ಹಾಗೆಯೇ ಇವುಗಳ ಬಳಕೆಯು ಸಹ ಕ್ರಮ ಬದ್ಧವಾಗಿರಬೇಕು ಹಾಗಾದಾಗ ಮಾತ್ರ ಋತುಸ್ರಾವದ ಸಮಯದಲ್ಲಿ ನೈರ್ಮಲ್ಯ ಕಾಪಾಡಲು ಸಾಧ್ಯ.

ಎನ್ಎಫ್ಎಚ್ಎಸ್ ವರದಿಯು 12 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಶಾಲಾ ಶಿಕ್ಷಣವನ್ನು ಹೊಂದಿರುವ ಮಹಿಳೆಯರು ಯಾವುದೇ ಶಾಲಾ ಶಿಕ್ಷಣವಿಲ್ಲದ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ನೈರ್ಮಲ್ಯ ವಿಧಾನವನ್ನು ಬಳಸುತ್ತಾರೆ  (90%  ಮತ್ತು 44%) ಎಂದು ಹೇಳಿದೆ. ಗ್ರಾಮೀಣ ಮಹಿಳೆಯರಲ್ಲಿ ಎಪ್ಪತ್ತಮೂರು ಪ್ರತಿಶತದಷ್ಟು ಮಹಿಳೆಯರು ಮುಟ್ಟಿನ ರಕ್ಷಣೆಯ ನೈರ್ಮಲ್ಯ ವಿಧಾನವನ್ನು ಬಳಸುತ್ತಾರೆ.ಅದರಲ್ಲಿ90 ರಷ್ಟು ನಗರ ಮಹಿಳೆಯರು, ”ಎಂದು ಅದು ಹೇಳಿದೆ.

ಬಿಹಾರ 59%, ಮಧ್ಯಪ್ರದೇಶ 61% ಮತ್ತು ಮೇಘಾಲಯದಲ್ಲಿ 65% ಕಡಿಮೆ ಶೇಕಡಾವಾರು ಮಹಿಳೆಯರು ಮುಟ್ಟಿನ ರಕ್ಷಣೆಯ ನೈರ್ಮಲ್ಯ ವಿಧಾನವನ್ನು ಬಳಸುತ್ತಾರೆ.

ಪಾಪುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕಿ ನಿರ್ದೇಶಕಿ ಪೂನಂ ಮುತ್ರೇಜಾ, ಶಿಕ್ಷಣ, ಸಂಪತ್ತು ಮತ್ತು ಮುಟ್ಟಿನ ರಕ್ಷಣೆಯ ನೈರ್ಮಲ್ಯ ವಿಧಾನಗಳ ನಡುವಿನ ನೇರ ಸಂಪರ್ಕವನ್ನು ಎನ್ಎಫ್ಎಚ್ಎಸ್ -5 ತೋರಿಸುತ್ತದೆ ಎಂದು ಹೇಳಿದರು.

80% ನಷ್ಟು ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ ಎಂದು ವರದಿ ಮಾಡಿದರೆ, 12 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಶಾಲಾ ಶಿಕ್ಷಣ ಹೊಂದಿರುವ 35.2% ಮಹಿಳೆಯರು ಮಾತ್ರ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ, ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ 57.2% ಋತಸಾವ್ರದ ರಕ್ಷಣೆಗಾಗಿ ಬಟ್ಟೆಯ ಬಳಕೆ ಹೆಚ್ಚು ಎಂದು ಅವರು ಹೇಳಿದರು

ಶ್ರೀಮಂತ ಮಹಿಳೆಯರಿಗಿಂತ  ಬಡ ಹೆಣ್ಣುಮಕ್ಕಳು ಬಟ್ಟೆಯನ್ನು ಬಳಸುವ ಸಾಧ್ಯತೆ ಸುಮಾರು 3.3% ಪಟ್ಟು ಹೆಚ್ಚು. ಹೀಗಾಗಿ, ಸಾಮಾಜಿಕ ಹಿನ್ನೆಲೆಯು ಸರಿಯಾದ ಮುಟ್ಟಿನ ನೈರ್ಮಲ್ಯದ ಪ್ರವೇಶವನ್ನು ನಿರ್ಧರಿಸುತ್ತದೆ ಎಂದು ಮುತ್ರೇಜಾ ಹೇಳಿದರು.

ಮುಟ್ಟಿನ ನೈರ್ಮಲ್ಯವನ್ನು ಸುಧಾರಿಸಲು ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಹೂಡಿಕೆಯ ಅಗತ್ಯವಿರುತ್ತದೆ, ಜೊತೆಗೆ ಸಾಮಾಜಿಕ ನಿಯಮಗಳು ಮತ್ತು ನಡವಳಿಕೆಗಳನ್ನು ಬದಲಾಯಿಸಲು ವ್ಯಾಪಕವಾದ ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಯ ಸಂವಹನ ಅಭಿಯಾನಗಳು, ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಮತ್ತು ಸಾಮಾಜಿಕ ಸಂಶೋಧನಾ ಕೇಂದ್ರದ ನಿರ್ದೇಶಕಿ ರಂಜನಾ ಕುಮಾರಿ ಮಾತನಾಡಿ, ಮುಟ್ಟಿನ ಎರಡು ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ – ಒಂದು ಮುಟ್ಟಿಗೆ ಸಂಬಂಧಿಸಿದ ಅವಮಾನ ಮತ್ತುಹೆಣ್ಣೂಮಕ್ಕಳು ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಪಡುವ ನಾಚಿಕೆಅಥವಾ ಭಯ ನ್ನಬಹುದು.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ದೇಶಾದ್ಯಂತ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಪ್ರತಿ ಪ್ಯಾಡ್‌ಗೆ ಕನಿಷ್ಠ 1 ರೂಪಾಯಿಗೆ ಲಭ್ಯವಾಗುವಂತೆ ಮಾಡಿದ್ದಾರೆ,”ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ 1ನ್ಯಾಪ್‌ಕಿನ್‌ಗೆ ಸರ್ಕಾರದ ಲಭ್ಯತೆ. ರೂ 1 ಆದ್ದರಿಂದ 12 ನ್ಯಾಪ್‌ಕಿನ್‌ಗಳ ಅಗತ್ಯವಿದ್ದರೂ ಸಹ ಪೋಷಕರಿಂದ ರೂ 12 ಕೇಳಬೇಕು ಮತ್ತು ತಿಳಿಸಲು ಸಂಕೋಚಪಡುತ್ತಾರೆ.

ಅಲ್ಲದೆ, ಪೋಷಕರು ಇದನ್ನು ನಿಷ್ಪ್ರಯೋಜಕ ಖರ್ಚು ಎಂದು ಭಾವಿಸುತ್ತಾರೆ, ಆದ್ದರಿಂದ ಹೆಣ್ಣುಮಕ್ಕಳ ಆರೋಗ್ಯದ ಅವಶ್ಯಕತೆ ಇದೆ ಎಂದು ಪೋಷಕರಿಗೆ ಸಲಹೆ ನೀಡುವುರ ಅಗತ್ಯತೆ ಅಪಾರವಾಗಿದೆ. ಸರ್ಕಾರವು 1 ರು ನ್ಯಾಪ್ಕಿನ್ಗಳನ್ನು ನೀಡುತ್ತಿದ. ಇದಕ್ಕೆ ಸಮುದಾಯ ಮತ್ತು ಜನರು, ಸಂವೇದನಾಶೀಲತೆಯೊಂದಿಗೆ ಕೈಜೋಡಿಸಬೇಕು” ಎಂದು ಕುಮಾರಿ ಹೇಳಿದರು.

2019-21 ರ ನಡುವೆ ನಡೆಸಲಾದ NFHS-5 ಅನ್ನು ದೇಶದ 707 ಜಿಲ್ಲೆಗಳಿಂದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 6.37 ಲಕ್ಷ ಮಾದರಿ ಕುಟುಂಬಗಳಲ್ಲಿ ನಡೆಸಲಾಗಿದ್ದು, 7,24,115 ಮಹಿಳೆಯರು ಮತ್ತು 1,01,839 ಪುರುಷರನ್ನು ಒಳಗೊಂಡಿದೆ. ರಾಷ್ಟ್ರೀಯ ಮಟ್ಟದ ವರದಿಯು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆ ಗುಣಲಕ್ಷಣಗಳ ಮೂಲಕ ಅಂಕಿ-ಅಂಶವನ್ನು ಒದಗಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *