ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿತ್ತು 62 ಸ್ಪೂನ್ಸ್ : ಕಕ್ಕಾಬಿಕ್ಕಿಯಾದ ವೈದ್ಯರು

ಉತ್ತರ ಪ್ರದೇಶ: ಕೆಲವೊಂದಿಷ್ಟು ವಿಚಿತ್ರ ಮನುಷ್ಯರು ಬ್ಯಾಟರಿಗಳನ್ನು ತಿನ್ನುವುದು, ನಾಣ್ಯಗಳನ್ನು ನುಂಗುವುದು ಈ ರೀತಿಯ ಅನೇಕ ವಿಚಿತ್ರ ವಿಷಯಗಳನ್ನು ನಾವು ಕೇಳಿರುತ್ತೇವೆ. ಆದರೆ ಉತ್ತರ ಪ್ರದೇಶದ  ಮುಜಾಫರ್‌ನಗರದಲ್ಲಿ ವಾಸವಿರುವ 32 ವರ್ಷದ ರೋಗಿಯೊಬ್ಬ ಬರೊಬ್ಬರಿ 62 ಸ್ಪೂನ್ಸ್‌ ಗಳನ್ನು ನುಂಗಿರುವಂತಹ ಘಟನೆ ನಡೆದಿದೆ.

ಆರೋಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು  ವಿಜಯ್‌ ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಅವರ ಹೊಟ್ಟೆಯಲ್ಲಿ  62 ಸ್ಪೂನ್‌ಗಳು ಇರುವುದು ತಿಳಿದು ಬಂದಿದೆ. ವೈದ್ಯರು ಕೇಳಿದಾಗ ಸ್ವತಃ ತಾನೇ ಸ್ಪೂನ್‌ಗಳನ್ನು ನುಂಗಿರುವುದಾಗಿ ವಿಜಯ್‌ ಒಪ್ಪಿಕೊಂಡಿದ್ದಾರೆ. 2 ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಿ ಸ್ಪೂನ್‌ಗಳನ್ನು ಹೊರಗೆ ತೆಗೆದಿದ್ದು,  ಸದ್ಯಕ್ಕೆ ರೋಗಿಯ ಪರಿಸ್ಥಿತಿ ಇನ್ನು ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಪಾರಾ ಗ್ರಾಮದ ನಿವಾಸಿ ವಿಜಯ್ ಮಾದಕ ವ್ಯಸನಿಯಾಗಿದ್ದರು ಎಂದು ವರದಿಯಾಗಿದೆ. ಆತನ ಕುಟುಂಬದವರು ಅವನನ್ನು ಮಾದಕ ವ್ಯಸನ ಕೇಂದ್ರಕ್ಕೆ ದಾಖಲಿಸಿದ್ದರು. ವರದಿಯ ಪ್ರಕಾರ, ವಿಜಯ್ ಅವರಿಗೆ ಡಿ-ಅಡಿಕ್ಷನ್ ಸೆಂಟರ್‌ನ ಸಿಬ್ಬಂದಿ ಬಲವಂತವಾಗಿ ಆ ಚಮಚಗಳನ್ನು ತಿನ್ನಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲವಾದರೂ, ಈ ಚಮಚಗಳು ಮನುಷ್ಯನ ಹೊಟ್ಟೆಯನ್ನು ಹೇಗೆ ತಲುಪಿದವು ಎಂಬುದು ನಿಗೂಢವಾಗಿಯೇ ಉಳಿದಿದ್ದು ಪೋಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *