ನವದೆಹಲಿ, ಫೆ. 09: ಕೇಂದ್ರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಮುಂಜಾನೆ ದೆಹಲಿಯಲ್ಲಿರುವ ನ್ಯೂಸ್ ಕ್ಲಿಕ್ ಕಚೇರಿ ಹಾಗೂ ಸಿಬ್ಬಂದಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಮಾಲೀಕ ಪ್ರಬೀರ್ ಪುರ್ಕಯಸ್ಥ ಮತ್ತು ಸಂಪಾದಕ ಪ್ರಂಜಲ್ ಅವರ ಮನೆ ಮೇಲೆ ದಾಳಿಯಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಪ್ರಕಟಿಸಿದೆ.
ಇದನ್ನು ಓದಿ : ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಹಿರಿಯ ಪತ್ರಕರ್ತರ ಮೇಲೆ ರಾಜದ್ರೋಹದ ಎಫ್.ಐ.ಆರ್.
ವಿದೇಶ ಸಂಸ್ಥೆಯೊಂದರಿಂದ ಹಣ ವರ್ಗಾವಣೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿಯನ್ನು ಮುಂದುವರಿಸಿದ್ದಾರೆ. ‘ ಬೆಳಗ್ಗೆಯಿಂದ ನಮ್ಮ ಕಚ್ಚೇರಿ ಮತ್ತು ಮನೆಗಳ ಮೇಲೆ “ಇಡಿ” ದಾಳಿ ಮುಂದುವರಿಯುತ್ತಿದೆ, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ, ನಾವು ಎಲ್ಲಾ ರೀತಿ ಸಹಕರಿಸುತ್ತಿದ್ದೇವೆ’ ಎಂದು ಸಂಪಾದಕ ಪ್ರಂಜಲ್ ಹೇಳಿದರು.
ಇನ್ನೂ ಈ ಜಾರಿ ನಿರ್ದೇಶನಾಲಯ ದಾಳಿಯನ್ನು ಪತ್ರಕರ್ತರು ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಪತ್ರಿಕಾ ಧರ್ಮದ ಮೇಲೆ ದಾಳಿಮಾಡುತ್ತಿದ್ದು, ವಾಕ್ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತಿದೆ ಎಂದು ಪತ್ರಕರ್ತರು ಟ್ವೀಟರ್ ಖಾತೆಯ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಗೋದಿ ಮೀಡಿಯಾ ನೊಣಗಳು ಹೂವನ್ನು ತೊರೆದು ಹೊಲಸು ವಾಸನೆಯತ್ತ ಹಾರಿದ್ದೇಕೆ?
ಗೋದಿ ಮೀಡಿಯಾ ಗಳನ್ನು ಸಾಕಿರುವ ಸರಕಾರ ತನ್ನ ಹಸಿ ಬಿಸಿ ಸುಳ್ಳು ಸಾಧನೆಗಳನ್ನು ಗೋದಿ ಮೀಡಿಯಾ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದೆ. ಸರಕಾರದ ವಾಸ್ತವ ಉದ್ದೇಶ, ಗುರಿಗಳನ್ನು ಅದರ ಕೋಮುವಾದಿ ಅಜೆಂಡಾಗಳನ್ನು ನ್ಯೂಸ್ ಕ್ಲಿಕ್ ನಂತಹ ಜನರ ಮಾಧ್ಯಮಗಳ ಎಳೆ ಎಳೆಯಾಗಿ ಬಿಚ್ಚಿಡುತ್ತಿವೆ. ಹಾಗಾಗಿ ಇವು ಜನರ ಮಾಧ್ಯಮವಾಗಿ ಮೆಚ್ಚುಗೆ ಗಳಿಸುತ್ತಿವೆ. ಇದನ್ನು ಸಹಿಸದ ಕೇಂದ್ರ ಸರಕಾರ ಈ ರೀತಿಯ ದಾಳಿಗಳನ್ನು ನಡೆಸುತ್ತಿದೆ ಎಂದು ಜನಪರ ಮಾಧ್ಯಮಗಳು ಆಕ್ರೋಶ ವ್ಯಕ್ತ ಪಡಿಸಿವೆ.