ಹೊಸ ವರ್ಷಾಚರಣೆ, ಕ್ರಿಸ್​ಮಸ್​ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

ಬೆಳಗಾವಿ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ  ಜನರು ಗುಂಪುಗೂಡದಂತೆ ನಿರ್ಬಂಧದ ಆದೇಶ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುವರ್ಣ ಸೌಧದಲ್ಲಿ ಹೇಳಿಕೆ ನೀಡಿದರು. ಹೊಸವರ್ಷದ ಸಂಭ್ರಮಾಚರಣೆಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ ಕ್ರಿಸ್​ಮಸ್​ ಹಬ್ಬದಲ್ಲಿ   ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಜನ ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗುವುದು ಎಂದು ಸುವರ್ಣಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಗುಂಪುಗೂಡದಂತೆ ನಿಯಮ ವಿಧಿಸಲಾಗುವುದು. ಡಿ 30ರಿಂದ ಜ 2ರವರೆಗೆ ಸಾಮೂಹಿಕ ಸಮಾರಂಭಗಳಿಗೆ ನಿರ್ಬಂಧ ಇರುತ್ತದೆ. ಗುಂಪುಗೂಡಿ ಹೊಸ ವರ್ಷಾಚರಣೆ ಮಾಡಲು ಅವಕಾಶವಿಲ್ಲ. ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್​ಗಲ್ಲಿ ಅರ್ಧದಷ್ಟು ಜನರಿಗೆ ಸೇವೆ ಒದಗಿಸಬಹುದು. ಎಲ್ಲಾ ಸಿಬ್ಬಂದಿಗೆ 2 ಡೋಸ್​ ಕೊರೊನಾ ಲಸಿಕೆ ಹಾಕಿಸಿರಬೇಕು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಈ ಸಂಬಂಧ ನಡೆದ ವಿಡಿಯೊ ಕಾನ್ಫರೆನ್ಸ್​ನಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.

 

ಪ್ರಮುಖ ಮಾರ್ಗಿಸೂಚಿ ಈ ಕೆಳಗಿನಂತಿವೆ

  • ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಎಂದರೆ ಮೊದಲು ಹೈಲೈಟ್‌ ಆಗುವುದು ಎಂಜಿರಸ್ತೆ ಮತ್ತು ಬ್ರಿಗೆಡ್‌ ರಸ್ತೆ. ಆದರೆ ಈ ಬಾರಿಯೂ ಕಳೆದ ವರ್ಷದಂತೆ ಸಾಮೂಹಿಕವಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಇವಿಷ್ಟೇ ಅಲ್ಲದೇ, ರಾಜ್ಯದ ಯಾವುದೇ ಭಾಗಗಳಲ್ಲಿ ಹೊಸ ವರ್ಷಕ್ಕೆಂದು ಜನರು ಗುಂಪುಗೂಡುವಂತಿಲ್ಲ.
  • ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಡಿಸ್ಕೋ ಜಾಕಿ (ಡಿಜೆ), ಇತ್ಯಾದಿ ಅಬ್ಬರದ ಸಂಗೀತಗಳಿಗೆ ನಿಷೇಧ ಹೇರಲಾಗಿದೆ.
  • ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಇರುವ ಕೆಪ್ಯಾಸಿಟಿಗಿಂತ ಶೇ.50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಲಾಗಿದೆ. ಶೇ.50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಸೇರುವಂತಿಲ್ಲ.
  • ಅ‍ಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸಾಮೂಹಿಕವಾಗಿ ಪಾರ್ಟಿ ಮಾಡುವಂತಿಲ್ಲ, ಡಿಸ್ಕೋ ಜಾಕಿ ಇತ್ಯಾದಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇವುಗಳ ಜವಾಬ್ದಾರಿಯನ್ನು ಆಯಾ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಡಿಕೊಳ್ಳಬೇಕು.
  • ಇವೆಲ್ಲವೂ ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ. ಆದರೆ 25ರಂದು ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಅವುಗಳಿಗೂ ಕೆಲವೊಂದು ನಿಯಮ ಮಾಡಲಾಗಿದೆ. ಕ್ರಿಸ್‌ಮಸ್‌ ಯಾವುದೇ ಬಹಿರಂಗ ಪಾರ್ಟಿ ಮಾಡುವಂತಿಲ್ಲ.
  • ಕ್ರಿಸ್‌ಮಸ್‌ ಸಂದರ್ಭದಲ್ಲಿ ಆಂತರಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ, ಸೆನಿಟೈಸರ್‌ ಎಲ್ಲವನ್ನೂ ಕಾಪಾಡಬೇಕು. ಕ್ಲಬ್‌ಗೆ ಬರುವವರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಅಲ್ಲಿರುವ ಸಿಬ್ಬಂದಿಗೆ ಪರೀಕ್ಷೆ ಮಾಡಿಸಬೇಕು.
Donate Janashakthi Media

Leave a Reply

Your email address will not be published. Required fields are marked *