ನ್ಯಾಯಾಂಗವನ್ನು ದೂಷಿಸುವುದು ಸರ್ಕಾರದ ಹೊಸ ಪ್ರವೃತ್ತಿ; ಸಿಜೆಐ ಅಸಮಾಧಾನ

ನವದೆಹಲಿ: ನ್ಯಾಯಮೂರ್ತಿಗಳನ್ನು ದೂಷಿಸುವ ಸರ್ಕಾರದ ಹೊಸ ಪ್ರವೃತ್ತಿ ಆರಂಭವಾಗುತ್ತಿರುವುದು ದುರದೃಷ್ಟಕರ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಹೇಳಿದ್ದಾರೆ. ಈ ಹಿಂದೆ ನ್ಯಾಯಾಧೀಶರ ಮೇಲೆ ಅಪಪ್ರಚಾರ ಮಾಡುವ ಯತ್ನಗಳು ಖಾಸಗಿ ವ್ಯಕ್ತಿಗಳಿಂದ ಮಾತ್ರ ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಸರ್ಕಾರವೂ ಇದರಲ್ಲಿ ಸೇರಿಕೊಂಡಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನ್ಯಾಯಮೂರ್ತಿಗಳ ಹೆಸರಿಗೆ ಸರ್ಕಾರ ಮಸಿ ಬಳಿಯುವುದು ಈಗ ಹೊಸ ಪ್ರವೃತ್ತಿಯಾಗಿದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದ್ದು, ಇದನ್ನು ನಾವೀಗ ನ್ಯಾಯಾಲಯದಲ್ಲಿ ಕಾಣುತ್ತಿದ್ದೇವೆ. ಈ ಹಿಂದೆ ಖಾಸಗಿ ವ್ಯಕ್ತಿಗಳು ಮಾತ್ರ ಅದನ್ನು ಮಾಡುತ್ತಿದ್ದರು. ಈಗ ಪ್ರತಿದಿನವೂ ನಾವು ಅದನ್ನು ಕಾಣುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಛತ್ತೀಸ್ ಗಢದ ಮಾಜಿ ಪ್ರಧಾನ ಕಾರ್ಯದರ್ಶಿ ವಿರುದ್ಧದ ಭ್ರಷ್ಟಾಚಾರ ಕಾಯಿದೆಯಡಿ ದಾಖಲಿಸಿದ್ದ ಎಫ್‌ಐಆರ್ ರದ್ದತಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ, ಹೈಕೋರ್ಟ್ ಆದೇಶವನ್ನು  ವಕೀಲರೊಬ್ಬರು ಪ್ರಶ್ನಿಸಿದ ನಂತರ ನ್ಯಾಯಮೂರ್ತಿ ಎನ್‌.ವಿ.ರಮಣ ಸರ್ಕಾರಗಳ ನಡೆಯ ಬಗ್ಗೆ ಹೇಳಿದ್ದಾರೆ.

ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ದವೆ ಅವರು “ಇದನ್ನು ಒಪ್ಪಲಾಗದು” ಎಂದರು. ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

Donate Janashakthi Media

Leave a Reply

Your email address will not be published. Required fields are marked *