ಹೊರಗುತ್ತಿಗೆ ನೌಕರರ ಒಕ್ಕೂಟದ ನೂತನ ತಾಲ್ಲೂಕು ಸಮಿತಿಗೆ ಚಾಲನೆ: ಅಧ್ಯಕ್ಷ ಕೆ. ಭರತ್

ಮೂಡಿಗೆರೆ:  ʻಎರಡು ದಶಕಗಳಿಂದ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಲು ಸರ್ಕಾರ ಸೂಚನೆ ನೀಡಿದೆ. ಆದರೆ, ಇದನ್ನು ತಡೆಯಲು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ’ ಎಂದುರಾಜ್ಯ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ. ಭರತ್  ದೂರಿದರು.

ರಾಜ್ಯ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಒಕ್ಕೂಟದ ನೂತನ ತಾಲ್ಲೂಕು ಸಮಿತಿಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು,‘ರಾಜ್ಯ ಸರ್ಕಾರ ಈಗಾಗಲೇ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ಪತ್ರ ಹೊರಡಿಸಿದೆ. ಆದರೆ, ಗುತ್ತಿಗೆದಾರರು ಹಾಗೂ ಕೆಲವು ಅಧಿಕಾರಿಗಳು ಕೆಲಸದ ಅನುಭವವಿರುವ ನೌಕರರನ್ನು ಹೊರಗಿಟ್ಟಿದ್ದಾರೆ. ಗುತ್ತಿಗೆ ಆಧಾರದಿಂದ ನೇಮಕಗೊಂಡವರನ್ನು 5 ವರ್ಷ ಮಾತ್ರ ದುಡಿಸಿಕೊಂಡು ನಂತರ ಅವರನ್ನು ಕೈಬಿಟ್ಟು ತಮಗೆ ಬೇಕಾದ ನೌಕರರಿಗೆ ಖಾಯಂ ಮಾಡಲು ಸಂಚು ರೂಪಿಸಲಾಗಿದೆ’ ಎಂದು ಆರೋಪಿಸಿದರು.

ಇದನ್ನೂ ಓದಿ: ಧರ್ಮಸ್ಥಳ ಸಂಘ | ಕೂಟ್ಟೆ ಸಾಲಕ್ಕೆ ಬಡವರಿಂದ 40% ರಷ್ಟು ಬಡ್ಡಿ ವಸೂಲಿ – ಶಾಸಕ ನರೇಂದ್ರ ಸ್ವಾಮಿ ಅರೊಪ

‘ನೈಜ ನೌಕರರಿಗೆ ಕೆಲಸ ಕಾಯಂಗೊಳಿಸುವ ಉದ್ದೇಶದಿಂದ ಮತ್ತು ಸರ್ಕಾರಕ್ಕೆ ಗುತ್ತಿಗೆದಾರರಿಂದಾಗುವ ಹೊರೆಯನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಟಿಸಿಎಲ್ ಗುತ್ತಿಗೆ ನೌಕರರನ್ನು ಕಾಯಂ ಮಾಡಲು ಹೊರಟಿರುವುದು ಉತ್ತಮ ನಡೆಯಾಗಿದೆ. ಅದರ ವಿರುದ್ಧ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈಗ ತಾಲ್ಲೂಕು ಸಮಿತಿ ರಚಿಸಲಾಗಿದೆ. ಕೆಪಿಟಿಸಿಎಲ್ ತಾಲ್ಲೂಕು ವ್ಯಾಪ್ತಿಯ 67 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರನ್ನೂ ಕಾಯಂಗೊಳಿಸಬೇಕಿದೆ’ ಎಂದರು.

ತಾಲ್ಲೂಕು ಸಮಿತಿ ನೂತನ ಅಧ್ಯಕ್ಷ ಕಿರುಗುಂದ ಕೆ.ಕೆ. ಚಂದ್ರಪ್ಪ, ಗೌರವ ಅಧ್ಯಕ್ಷ ಜಿ.ಸಿ.ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಚ್. ಅಶೋಕ್, ಬಿ.ಟಿ. ಶಂಕರ್, ಪ್ರಧಾನ ಕಾರ್ಯದರ್ಶಿ ಆರ್. ಆನಂದ್‍ರಾವ್, ಎಂ.ಎಚ್. ಶಶಿ, ಮರ್ಕಲ್ ಚಂದ್ರೇಶ್, ಸಹ ಕಾರ್ಯದರ್ಶಿ ಆರ್. ನಾಗೇಶ್, ಎಸ್.ಕೆ. ಮಹೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎ.ಎನ್. ಸವಿನ್, ಕೆ.ಎಲ್. ಪಾಲಕ್ಷ, ರಜತ್, ಖಜಾಂಚಿ ಕೆ.ಎನ್. ಸತೀಶ್, ಪದಾಧಿಕಾರಿ ಎಸ್. ಇಂದ್ರೇಶ್, ಎಚ್.ಎಂ. ಆದರ್ಶ, ಪ್ರವೀಣ್ ಬಕ್ಕಿ, ಹೊನ್ನಯ್ಯ, ಸಂತೋಷ್, ಕೃಷ್ಣಪ್ಪ ಇದ್ದರು.

ಇದನ್ನೂ ನೋಡಿ: ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media

Donate Janashakthi Media

Leave a Reply

Your email address will not be published. Required fields are marked *