ಬೆಂಗಳೂರು: ರಾಜ್ಯದಲ್ಲಿ ‘ಆನ್’ಲೈನ್ ಬೆಟ್ಟಿಂಗ್’ ದಂಧೆ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು, ಆನ್ಲೈನ್ ಗೇಮಿಂಗ್ ಫೆಡರೇಶನ್ಗಳ ಸದಸ್ಯರು ಮತ್ತು ಉದ್ಯಮ ತಜ್ಞರೊಂದಿಗೆ ಉನ್ನತ ಮಟ್ಟದ ವಿಸ್ತೃತ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಹೇಳಿದ್ದಾರೆ
ರಾಜ್ಯದಲ್ಲಿ ‘ಆನ್’ಲೈನ್ ಬೆಟ್ಟಿಂಗ್’ ದಂಧೆ ನಿಯಂತ್ರಣಕ್ಕೆ ಹೊಸ ಕಾನೂನು ತರಬಹುದಾ ಎಂದು ಯೋಚಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಭಾರತದಲ್ಲಿ ಕಾನೂನುಬದ್ಧ ಆನ್ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಉದ್ಯಮವು $4 ಬಿಲಿಯನ್ ಮೌಲ್ಯದ ಉದಯೋನ್ಮುಖ ವಲಯವಾಗಿದ್ದು, ₹12,000 ಕೋಟಿ ತೆರಿಗೆ ಪಾವತಿಸುತ್ತಿದೆ ಮತ್ತು 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
ಇದನ್ನೂ ಓದಿ: ರಾಯಚೂರು| ಐವರ ಕೊಲೆ ಪ್ರಕರಣ: ಮೂವರಿಗೆ ಮರಣದಂಡನೆ
ಕರ್ನಾಟಕವು ಮಾರುಕಟ್ಟೆಯ 25% ಮತ್ತು ವಾರ್ಷಿಕ ತೆರಿಗೆ ಕೊಡುಗೆಗಳಲ್ಲಿ ₹1,350 ಕೋಟಿಯಷ್ಟು ಪಾಲನ್ನು ಹೊಂದಿದ್ದು, ರಾಜ್ಯವನ್ನು ಪ್ರಮುಖ ಕೇಂದ್ರವನ್ನಾಗಿಸಿದೆ.
ಆದರೆ ಈ ಕಾನೂನುಬದ್ಧ ವಲಯದ ಜೊತೆಗೆ, ಗಡಿಯಾಚೆಗಿನ ಜೂಜಾಟ ಮತ್ತು ಅಕ್ರಮ ಬೆಟ್ಟಿಂಗ್ನ ಸದೃಶ ಭೂಗತ ಮಾರುಕಟ್ಟೆಯೂ ಇದೆ. ಇದು ಅನೈತಿಕ ಹಣ ಸಂಗ್ರಹ ಪದ್ಧತಿಗಳು, ಸಂಶಯಾಸ್ಪದ ನಕಲಿ ಕಂಪನಿಗಳು, ಹಣಕಾಸು ವಂಚನೆ, ಡೇಟಾ ಉಲ್ಲಂಘನೆ ಮತ್ತು ಸೈಬರ್ ಅಪರಾಧಗಳಂತಹ ಅಪಾಯಗಳನ್ನು ಇನ್ನಷ್ಟು ವೇಗವಾಗಿ ಹೆಚ್ಚಿಸುತ್ತಿದೆ.
ನ್ಲೈನ್ ಜೂಜಾಟ/ಬೆಟ್ಟಿಂಗ್ ಮತ್ತು ಅದೃಷ್ಟದ ಆಟಗಳನ್ನು ನಿಗ್ರಹಿಸುವುದು ಮತ್ತು ಗ್ರಾಹಕರನ್ನು ವಂಚನೆಯಿಂದ ರಕ್ಷಿಸುವುದು, ಕೌಶಲ್ಯ ಆಧಾರಿತ ಗೇಮಿಂಗ್ ಉದ್ಯಮದ ನಾವೀನ್ಯತೆ ಹಾಗೂ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವುದು ಈ ಶಾಸನದ ಉದ್ದೇಶವಾಗಿದೆ ಎಂದರು.
ಇದನ್ನೂ ನೋಡಿ: ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ಯಾಕೆ? ಯಾವುದು ವಕ್ಫ್ ಆಸ್ತಿ? ವಕ್ಫ್ ಬೋರ್ಡ್ ಯಾಕೆ ಬೇಕು?Janashakthi Media