ಜೆಎನ್‌ಯುನಲ್ಲಿ ಹೊಸ ನಿಯಮ ಜಾರಿ; ಧರಣಿ ನಡೆಸಿದರೆ ರೂ.20000 ದಂಡ-ಪ್ರವೇಶ ರದ್ದು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು)ದಲ್ಲಿ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದು, ಸದ್ಯ ಹೊಸ ನಿಯಮಾವಳಿಯನ್ನು  ವಿವಿ ಆಡಳಿತ ಮಂಡಳಿ ಜಾರಿಗೊಳಿಸಿದೆ.

ʻಜೆಎನ್‌ಯು ವಿದ್ಯಾರ್ಥಿಗಳ ಶಿಸ್ತಿನ ನಿಯಮಗಳು ಮತ್ತು ಸರಿಯಾದ ನಡವಳಿಕೆ  ಎಂದು ಹೊಸ ನಿಯಮ ಫೆಬ್ರವರಿ 3ರಂದು ಜಾರಿಗೆ ಬಂದಿದ್ದು, 10 ಪುಟಗಳ ನಿಯಮಗಳು ಒಳಗೊಂಡಿರುವ ವರದಿಯನ್ನು ಜಾರಿಗೆ ತರಲಾಗಿದೆ.

ಇದನ್ನು ಓದಿ: ವಿವಿಗಳಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ : ಜೆಎನ್‌ಯು ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ

ವಿವಿ ಆವರಣದಲ್ಲಿ ಧರಣಿಗಳನ್ನು ನಡೆಸಿದ್ದಲ್ಲಿ ವಿದ್ಯಾರ್ಥಿಗಳಿಗೆ ರೂ. 20,000 ವರೆಗೆ ದಂಡ ವಿಧಿಸಬಹುದಾಗಿದೆ. ವಿದ್ಯಾರ್ಥಿಗಳು ಬೆದರಿಕೆ ಅಥವಾ ಅವಮಾನಕರ ನಡವಳಿಕೆಯಲ್ಲಿ ತೊಡಗಿದ್ದಲ್ಲಿ 50,000 ರೂ. ದಂಡವನ್ನು ವಿಧಿಸಬಹುದು. ಬಹಿಷ್ಕಾರ ನಡೆಸಿದರೆ ಅಥವಾ ಹಿಂಸೆ ನಡೆಸಿದ ಆರೋಪ ಎದುರಿಸಿದರೆ ಅವರಿಗೆ ರೂ 30,000 ತನಕ ದಂಡ ವಿಧಿಸಬಹುದಾಗಿದೆ.

ಹೊಸ ನಿಯಮದ ವಿಧಿಸಲಾಗುವ ವಿವಿಧ ಶಿಕ್ಷೆಗಳಲ್ಲಿ ದಾಖಲಾತಿ ರದ್ದತಿ, ಪದವಿ ಹಿಂಪಡೆಯುವಿಕೆ, ನೋಂದಣಿಗೆ ಅನುಮತಿ ನಿರಾಕರಣೆ, ನಾಲ್ಕು ಸೆಮೆಸ್ಟರ್‌ ತನಕ ವಜಾ, ವಿವಿ ಆವರಣದ ಒಂದು ಭಾಗಕ್ಕೆ ಪ್ರವೇಶ ನಿರಾಕರಿಸುವುದು ಇತ್ಯಾದಿಗಳು ಒಳಗೊಂಡಿದೆ.

ಜೂಜಾಟದಲ್ಲಿ ತೊಡಗುವುದು, ವಿದ್ಯಾರ್ಥಿಗಳ ವಸತಿ ಕೊಠಡಿಗಳನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳುವುದು, ನಿಂದನೀಯ ಮತ್ತು ಅವಹೇಳನಕಾರಿ ಭಾಷೆಯ ಬಳಕೆ ಮತ್ತು ನಕಲಿ ಮಾಡುವುದು ಸೇರಿದಂತೆ 17 ಅಪರಾಧಗಳಿಗೆ ಶಿಕ್ಷೆಗಳನ್ನು ಪಟ್ಟಿ ಮಾಡಲಾಗಿದೆ. ದೂರುಗಳ ಪ್ರತಿಯನ್ನು ಪೋಷಕರಿಗೆ ಕಳುಹಿಸಲಾಗುವುದು ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *