ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿಯೇ ನಾವು ಫಾಜಿಲ್ ಹತ್ಯೆ ಮಾಡಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿಕೆ ನೀಡಿದ್ದಾರೆ.
ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಶರಣ್ ಪಂಪ್‌ವೆಲ್, ಜಿಲ್ಲೆಯ ಒಬ್ಬ ಹಿಂದೂ ಕಾರ್ಯಕರ್ತನ ಬಲಿದಾನಕ್ಕೆ ಬೇಸರಪಟ್ಟ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್ನಲ್ಲಿ ಹೊಡೆದ ವಿಡಿಯೋವನ್ನು ನೀವು ಎಲ್ಲರು ನೋಡಲೇಬೇಕು ಎಂದಿದ್ದಾರೆ.
ಇದನ್ನು ಓದಿ: ಪ್ರವೀಣ್ ನೆಟ್ಟಾರ್ ಕೊಲೆ ಹಿಂದಿನ ರಹಸ್ಯ ಬಹಿರಂಗವಾಗಲಿ: ಮುನೀರ್ ಕಾಟಿಪಳ್ಳ
ಪ್ರವೀಣ್ ನೆಟ್ಟಾರು ಮಾತ್ರವಲ್ಲ ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರು ಪಿಎಫ್ಐ ಪಟ್ಟಿಯಲ್ಲಿದೆ ಎಂದು ಎನ್ಐಎ ಹೇಳಿದೆ. ಆ ಸಂಘಟನೆ ನಿಷೇಧ ಆಗಿದ್ದರೂ ಕಾರ್ಯಕರ್ತರೂ ಇನ್ನೂ ಜೀವಂತ ಇದ್ದಾರೆ. ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು. ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡುತ್ತಿದ್ದೇವೆ ಎಂದರು.
ಇದನ್ನು ಓದಿ: ಬಜರಂಗದಳದ ಹಲ್ಲೆಕೋರರ ಮೇಲೆ ಕಠಿಣ ಮೊಕದ್ದಮೆ ಹೂಡಿ ಬಂಧಿಸಿ: ಮುನೀರ್ ಕಾಟಿಪಳ್ಳ
ಗುಜರಾತ್ ನಲ್ಲಿ ಹಿಂದೂಗಳ ಪರಾಕ್ರಮ
ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರಣ್ ಪಂಪ್‌ವೆಲ್, ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಒಂದು ಸಲ ಗುಜರಾತಿನ ಘಟನೆಯನ್ನು ನೆನೆಪು ಮಾಡಿಕೊಳ್ಳಿ. 2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದಿದ್ದು ನರಮೇಧವಲ್ಲ, ಅದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ ಎಂದಿರುವ ಶರಣ್, 59 ಕರಸೇವಕರ ಹತ್ಯೆಯ ಪ್ರತೀಕಾರಕ್ಕೆ 2 ಸಾವಿರ ಜನರ ಹತ್ಯೆ ಹಿಂದೂಗಳು ನಪುಂಸಕರಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯನವರು ನಮ್ಮ ನೆಲ ಮಂಗಳೂರಿಗೆ ಬಂದು ಹೇಳುತ್ತಾರೆ ʻದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ಫ್ಯಾಕ್ಟರಿ ಆಗಿದೆ ಅಂತಾʼ ಸಿದ್ದರಾಮಯ್ಯನವರೇ ನೆನಪಿರಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಕೂಡ ಹಿಂದುತ್ವದ ಫ್ಯಾಕ್ಟರಿ ಮಾಡಲಿದ್ದೇವೆ. ಬಜರಂಗದಳ ಶೌರ್ಯ ಯಾತ್ರೆ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ ಎಂದು ಘೋಷಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ