ಕೋಲಾರ ಫೆ 17: ಯುವ ಕಲಾವಿದರನ್ನು ಗುರುತಿಸಲು ಇಂತಹ ರಂಗ ನೇಪಥ್ಯ ಶಿಬಿರಗಳು ಸಹಕಾರಿಯಾಗಿದ್ದು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಡಾ.ನಾಗನಂದ ಕೆಂಪರಾಜ್ ತಿಳಿಸಿದರು.
ನಗರದ ಹೊರವಲಯದ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬುಧವಾರ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಡೆದ ರಂಗ ನೇಪಥ್ಯ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೆಲದ ಸಾಂಸ್ಕೃತಿಕ ನೆಲಗಟ್ಟುನ್ನು ಉಳಿಸಿ ಬೆಳಸಲು ನಾಟಕಗಳು ಸಹಕಾರಿಯಾಗಿದೆ ರಂಗಭೂಮಿಯಲ್ಲಿ ಶ್ರದ್ಧೆಯಿಂದ ಕಲೆಯನ್ನು ಪ್ರದರ್ಶಿಸಿದರೇ ಮಾತ್ರ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಕಲಾವಿದರು ಶಿಬಿರದಲ್ಲಿ ಭಾಗವಹಿಸಬೇಕು ಎಂದರು.
ಪ್ರಾಚೀನ ಕಾಲದಿಂದಲೂ ಪ್ರತಿಭೆಗಳನ್ನು ಬೆಳಸುವಲ್ಲಿ ನಾಟಕ, ಸಂಗೀತ, ನೃತ್ಯ, ಸಾಹಿತ್ಯ ಸೇರಿ ಇತರ ಪ್ರಕಾರಗಳು ಮುಖ್ಯವಾಗಿದ್ದು ನಾಟಕಗಳು ಜನರ ಮನಸ್ಸನ್ನು ನೇರವಾಗಿ ಸೆಳೆಯುತ್ತವೆ ಕಲಾವಿದರ ಅಪಾರವಾದ ಶ್ರಮದಿಂದ ಮಾತ್ರ ಸಾಧ್ಯವಾಗುತ್ತದೆ ಯಾವುದೇ ರಂಗಭೂಮಿಯ ಕಲಾವಿದರನ್ನು ಗುರುತಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಪ್ರಸ್ತುತ ಸಮಾಜವು ಸಾಕಷ್ಟು ಮುಂದುವರೆದಿದ್ದು ಸಿನಿಮಾ ಪ್ರಪಂಚ ಎಲ್ಲವನ್ನೂ ಆವರಿಸಿಕೊಂಡಿದೆ ಜನಕ್ಕೆ ಬೇಕಾದ ನಾಟಕ, ಕಥೆ, ಕಾದಂಬರಿ ಬರೆಯುವ ಸಾಂಸ್ಕೃತಿಕತೆಯೂ ಕುಸಿಯುತ್ತಿರುವ ಕಾಲಘಟ್ಟದಲ್ಲಿದ್ದೇವೆ ಹಿಂದಿನ ದಿನಗಳಲ್ಲಿ ಇದ್ದ ಸಾಂಸ್ಕೃತಿಕ ಪರಂಪರೆಯನ್ನು ಕಳೆದುಕೊಳ್ಳುತ್ತಾ ಇದ್ದು ಯುವಕರು ಇಂತಹ ಸಂದರ್ಭದಲ್ಲಿ ಮುಂದೆ ಬರಬೇಕು ಎಂದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ನಾಟಕಗಳು ರಚನೆ ಮಾಡಿದರೆ ಸಾಲದು ಹೆಚ್ಚು ಹೆಚ್ಚಾಗಿ ಪ್ರದರ್ಶನ ನೀಡಿ ಜನರ ಮಧ್ಯೆ ಪರಿಣಾಮಕಾರಿ ಬೀರಿದಾಗ ಮಾತ್ರ ನಾಟಕಕ್ಕೆ ಬೆಲೆ ಸಿಗುತ್ತದೆ ಶಿಬಿರಗಳಲ್ಲಿ ಹೆಚ್ಚಾಗಿ ಭಾಗವಹಿಸಿ ರಂಗಪ್ರಯೋಗವಿದ್ದರೆ ಮುಂದಿನ ಪ್ರತಿಭೆಗೆ ಸಹಕಾರಿಯಾಗುತ್ತದೆ ಎಂದರು
ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಆದಿಮ ಸಂಸ್ಥೆಯ ಕಾರ್ಯದರ್ಶಿ ಎಂ ಕೊಮ್ಮಣ್ಣ, ಮಾತನಾಡಿ ಈ ನೆಲದ ಸಂಸ್ಕೃತಿಯನ್ನು ಶೋಷಣೆ ದಬ್ಬಾಳಿಕೆ ದಮನಿತ ಜನರ ವೇದಿಕೆಯಾಗಿ ಆದಿಮ ಸಂಸ್ಥೆ ಕೆಲಸ ಮಾಡಿಕೊಂಡು ಮನುಷ್ಯ ಪ್ರೀತಿ ವಿಶ್ವಾಸದ ಸಂಬಂಧಗಳನ್ನು ಹಂಚುವ ಮೂಲಕ ಶಿಬಿರಗಳು ಬಹುಮುಖ್ಯ ಪಾತ್ರವಹಿಸುತ್ತವೆ ನಾಟಕಗಳು ಪರದೆಯಲ್ಲಿ ಇದ್ದರೆ ಸಾಲದು ಪೇಕ್ಷಕರನ್ನು ಸಳೆಯುವಂತಾಗಬೇಕು ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ.ಎಸ್ ಗುಣಶೀಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಬಿರದ ಸಂಚಾಲಕ ಎಸ್.ಮೋಹನ್ ಕುಮಾರ್, ನಾಟಕಕಾರ ನಾವೆಂಕಿ ನಿರೂಪಿಸಿ, ಕೊಂಡರಾಜನಹಳ್ಳಿ ಮಂಜುಳ ಮತ್ತು ಆದಿಮ ನಾರಾಯಣಸ್ವಾಮಿ ಕ್ರಾಂತಿಗೀತೆಗಳನ್ನು ಹಾಡಿದರು, ಸಂಪನ್ಮೂಲ ವ್ಯಕ್ತಿ ನವೀನ್ ಶಕ್ತಿ ಮುಂತಾದವರು ಇದ್ದರು