ನೇಜಾರು ಹತ್ಯಾಕಾಂಡ | ಆರೋಪಿ ವಿರುದ್ಧ 2,250 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಉಡುಪಿ: ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಜಿಲ್ಲೆಯ ನೇಜಾರ್‌ನ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪ್ರವೀಣ್ ಅರುಣ್ ಚೌಗಲೆ ವಿರುದ್ಧ ಪೊಲೀಸರು 15 ಸಂಪುಟಗಳಲ್ಲಿ 2,250 ಪುಟಗಳ ಚಾರ್ಜ್ ಶೀಟ್ ಅನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಉಡುಪಿ ನಗರದ ನೇಜಾರು ಪ್ರದೇಶದಲ್ಲಿರುವ ತೃಪ್ತಿ ಲೇಔಟ್‌ನಲ್ಲಿ 2023ರ ನವೆಂಬರ್ 12ರಂದು ಈ ಘಟನೆ ನಡೆದಿತ್ತು.

ಏರ್ ಇಂಡಿಯಾ ಉದ್ಯೋಗಿಯಾಗಿರುವ ಆರೋಪಿ 39 ವರ್ಷದ ಪ್ರವೀಣ್ ಅರುಣ್ ಚೌಗಲೆ ತನ್ನ ಸಹೋದ್ಯೋಗಿಯಾದ 21 ವರ್ಷದ ಐನಾಜ್ ಮೇಲಿನ ಗೀಳಿನ ಕಾರಣಕ್ಕೆ ಈ ಅಪರಾಧ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಉಡುಪಿ|ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್​​​​ ಅರುಣ್​​​ ಚೌಗಲೆ ಬಂಧನ

ಆರೋಪಿಗಳ ವಿರುದ್ಧ ಪೊಲೀಸರು 300 ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಿದ್ದಾರೆ. ಕುಟುಂಬಸ್ಥರು, ನೆರೆಹೊರೆಯವರು ಹಾಗೂ ಸಾರ್ವಜನಿಕರ ಹೇಳಿಕೆಯನ್ನೂ ಸಂಗ್ರಹಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು, ಫೋನ್ ಕರೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಗಳನ್ನು ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಲಾಗಿದೆ.

ಮೃತ ಐನಾಜ್ ಅವರ ತಾಯಿ ಹಸೀನಾ (46), ಸಹೋದರಿ ಅಫ್ನಾನ್ (23) ಮತ್ತು ಸಹೋದರ ಅಸೀಮ್ (12) ಅವರನ್ನು ಆರೋಪಿ ಅರುಣ್ ಚೌಗಲೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ತಂದೆ ಮೊಹಮ್ಮದ್ ನೂರ್ ಹಲವಾರು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಐನಾಝ್ ನನ್ನು ಹುಡುಕಿಕೊಂಡು ಮನೆಗೆ ನುಗ್ಗಿ ಭೀಕರ ಕೊಲೆ ಮಾಡಿದ್ದನು.

ಆರೋಪಿ ಮತ್ತು ಐನಾಜ್ ಸ್ನೇಹಿತರಾಗಿದ್ದರು. ಆದರೆ ಆರೋಪಿಯಿಂದ ಐನಾಜ್ ದೂರವಾಗಿ ಅವನೊಂದಿಗೆ ಎಲ್ಲಾ ಸಂವಹನವನ್ನು ನಿಲ್ಲಿಸಿದ ನಂತರ ದ್ವೇಷ ಬೆಳೆಸಿಕೊಂಡಿದ್ದನು. ಸಂತ್ರಸ್ತರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಮಸ್ಯೆ ಕೋಮು ತಿರುವು ಪಡೆದುಕೊಂಡಿತ್ತು. ಆರೋಪಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ವಿಡಿಯೊ ನೋಡಿ:ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *