ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಮಂಡಿಸಿದ 2026-27 ನೇ ಸಾಲಿನ ಅಯ್ಯವ್ಯಯದಲ್ಲಿ ‘ಕಾರ್ಮಿಕ ವರ್ಗದ ಕಲ್ಯಾಣಕ್ಕೆ’ ಅರೆಕಾಸಿನ ನೆರವು ನೀಡದ ಕಾರ್ಮಿಕ ವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿ ಕೇವಲ ಬಂಡವಾಳಿಗರ ಹಿತವನ್ನು ಓಲೈಸಿದ ಬಜೆಟ್ ಇದಾಗಿದೆ ಎಂದು ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮಿತಿ ತೀವ್ರವಾಗಿ ಟೀಕಿಸಿದೆ. ನಿರ್ಲಕ್ಷ್ಯ
ರಾಜ್ಯದ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ರಾಜ್ಯದ ಉತ್ಪಾದನಾ ವಲಯದ ಬೆನ್ನೆಲುಬಾಗಿದ್ದಾರೆ. ನಿರ್ಮಾಣ, ಕೃಷಿ ಮತ್ತು ಸೇವಾ ವಲಯಗಳಲ್ಲಿನ ಕಾರ್ಮಿಕ ವರ್ಗದ ಕೊಡುಗೆ ಅಪಾರವಾಗಿದೆ. ರಾಜ್ಯದ ಮೂಲಸೌಕರ್ಯ, ಆರ್ಥಿಕ ಪ್ರಗತಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಬುನಾದಿಯಾಗಿದೆ. ನಿರ್ಲಕ್ಷ್ಯ
ಬೆಂಗಳೂರಿನಂತಹ ನಗರಗಳ ಐಟಿ/ಬಿಟಿ ಬೆಳವಣಿಗೆಯಿಂದ ಹಿಡಿದು ಗ್ರಾಮೀಣ ಭಾಗದ ಕೃಷಿಯವರೆಗೆ, ಕಾರ್ಮಿಕರು ಜತೆಗೆ ನಗರೀಕರಣಕ್ಕೆ ಅಗತ್ಯವಾದ ಸೇವೆಗಳನ್ನು, ಸಾರಿಗೆಯನ್ನು ಮತ್ತು ದೈನಂದಿನ ಅವಶ್ಯಕತೆಗಳನ್ನು ಪೂರೈಸುವಲ್ಲಿ ಅಸಂಘಟಿತ ಕಾರ್ಮಿಕರು ಅತ್ಯಂತ ಮಹತ್ವದ ಪಾತ್ರವಹಿಸುತ್ತಾ ರಾಜ್ಯದ ಅಭಿವೃದ್ದಿಗೆ ಮಹತ್ತರ ಪಾತ್ರವಹಿಸುತ್ತಿದ್ದಾರೆ ಆದರೆ ರಾಜ್ಯ ಸರ್ಕಾರದ ಬಜೆಟ್ ಇಂತಹ ಎಲ್ಲ ಕಾರ್ಮಿಕ ವಿಭಾಗಗಳಿಗೂ ನ್ಯಾಯ ಸಲ್ಲಿಸದೇ ಅನ್ಯಾಯವೆಸಗಿದೆ.
ಇದನ್ನೂ ಓದಿ: Karnataka Budget 2026 Live Updates : ರಾಜ್ಯ ಬಜೆಟ್ 2026-27 | ಬಜೆಟ್ ಗಾತ್ರ 4 ಲಕ್ಷ ಕೋಟಿ
ಲೇಬರ್ ಕೋಡ್ ಕೋಡ್ ಗಳಿಗೆ ಮಣಿ ಹಾಕಿದ ಬಜೆಟ್ :
2025 ನವೆಂಬರ್ 21 ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಲೇಬರ್ ಕೋಡ್‌ಗಳು ಜಾರಿಗೊಂಡರೇ ಇದುವರೆಗೂ ಅಸ್ತಿತ್ವದಲ್ಲಿರುವ ಹಕ್ಕು ಹಾಗೂ ಸೌಲಭ್ಯಗಳು ಅಪಾಯಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಈ ಕಾಯ್ದೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಎನ್ನುವುದು ಒಟ್ಟಾರೆ ಕಾರ್ಮಿಕ ವರ್ಗದ ಆಗ್ರಹವಾಗಿತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ನಾಯಕರೇ ಇಂಡಿಯಾ ಬ್ಲಾಕ್ ನೇತೃತ್ವದಲ್ಲಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಆದರೆ ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರ ಅವುಗಳಿಗೆ ಅವಸರಲ್ಲಿ ಅಧಿಸೂಚನೆ ಹೊರಡಿಸಿ ಅವುಗಳ ಜಾರಿಗೆ ಮುಂದಾಗಿದೆ ಮಾತ್ರವಲ್ಲ ಈ ಬಜೆಟ ನಲ್ಲಿ ಕರ್ನಾಟಕ ನಿರಪರಾಧಿಕರಣ(ಉಪಬಂಧಗಳ ತಿದ್ದುಪಡಿ) ಅಧಿ ನಿಯಮ 2025 ಎಂದು ರೂಪಿಸಿ ಅದರ ೧೩ ಅಧಿನಿಯಮಗಳಡಿಯಲ್ಲಿನ 278 ಅನುಚ್ಚೇಧಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಇದು ಕೈಗಾರಿಕಾ ಮಾಲೀಕರಿಗೆ ಸುಲಲಿತ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುವ ಘೋಷಣೆಯನ್ನು ಸ್ವತ:ಮುಖ್ಯಮಂತ್ರಿಗಳು ಮಾಡಿದ್ದಾರೆ ಇದರಿಂದ ರಾಜ್ಯದ ಲಕ್ಷಾಂತರ ಕಾರ್ಮಿಕರು ವರ್ಗ ತೀವ್ರ ಶೋಷಣೆಗೆ ಒಳಗಾಗಲಿದೆ. ನಿರ್ಲಕ್ಷ್ಯ
ಕಾರ್ಮಿಕ ಸಮ್ಮೇಳನ ಪ್ರಸ್ತಾಪವಿಲ್ಲ. ನಾಲ್ಕು ಲೇಬರ್ ಕೋಡ್ ಗಳ ಸಾಧಕ ಬಾಧಕಗಳನ್ನು ಚರ್ಚಿಸಲು ತ್ರೀಪಕ್ಷೀಯ ಕರ್ನಾಟಕ ಕಾರ್ಮಿಕ ಸಮ್ಮೇಳನ (ಕೆ.ಎಲ್.ಸಿ) ನಡೆಸಬೇಕು. ಕೇರಳ ಸರ್ಕಾರದ ರೀತಿಯಲ್ಲಿ ಈ ಕೋಡ್ ಗಳಿಗೆ ಪರ್ಯಾಯ ಕಾನೂನುಗಳನ್ನು ರಾಜ್ಯದ ಸರ್ಕಾರಕ್ಕಿರುವ ಸಂವಿಧಾನಬದ್ದ ಅವಕಾಶ ಬಳಸಿ ರೂಪಿಸಬೇಕೆಂದು ಸಿಐಟಿಯು ಸೇರಿ ಇತರೆ ಕೇಂದ್ರ ಕಾರ್ಮಿಕ ಸಂಘಗಳು ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಆಗ್ರಹಿಸಿದ್ದವು. ಆದರೆ ಆ ಬಗ್ಗೆ ಯಾವ ಬಜೆಟ್ ನಲ್ಲಿ ಪ್ರಸ್ತಾಪವಿಲ್ಲ. ಮಾತ್ರವಲ್ಲ ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯದ ಹಲವು ಕೈಗಾರಿಕೆಗಳಲ್ಲಿ ಸಂಭವಿಸಿದ ಅಪಘಾತಗಳಿಂದ ಹತ್ತಾರು ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಆದರೆ ಕೆಲಸದ ಸ್ಥಳಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮ ಹಾಗೂ ಜೀವಗಳ ರಕ್ಷಣೆ ಮಾಡುವ ಬಗ್ಗೆ ಈ ಬಜೆಟ್ ಯಾವುದೇ ರೀತಿಯಲ್ಲಿ ಪ್ರಸ್ತಾಪಿಸದಿರುವುದು ದುರದೃಷ್ಟಕರ. ನಿರ್ಲಕ್ಷ್ಯ
ಖಾಸಗಿ ರಂಗ ಮಹಿಳೆಯರಿಗೆ ಮುಟ್ಟಿನ ರಜೆ ಭಾಗ್ಯವಿಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸುವ ಮುಟ್ಟಿನ ರಜೆ ಖಾಸಗಿ ಉದ್ಯಮಗಳಿಗೂ ಅನ್ವಹಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ರಾಜ್ಯದಲ್ಲಿನ ಸರ್ಕಾರಿ ನೌಕರರನ್ನೊಳಗೊಂಡಂತೆ ವಿವಿಧ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನದ ವೇತನ ಸಹಿತ ರಜೆಯನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಲಕ್ಷಾಂತರ ಸಂಖ್ಯೆಯ ಮಹಿಳಾ ಉದ್ಯೋಗಿಗಳು ಖಾಸಗೀ ರಂಗದಲ್ಲಿ ದುಡಿಯುತ್ತಿದ್ದಾರೆ ಮುಟ್ಟಿನ ರಜೆಯನ್ನು ಅಲ್ಲಿನ ಅನ್ವಯಿಸುವ ಪ್ರಸ್ತಾಪ ಬಜೆಟ್ ನಲ್ಲಿ ಪ್ರಕಟ ಮಾಡುವ ದೈರ್ಯವನ್ನು ಮುಖ್ಯಮಂತ್ರಿಗಳು ಮಾಡಲಿಲ್ಲ ಇದಕ್ಕೆ ಖಾಸಗಿ ಕೈಗಾರಿಕ ಮಾಲೀಕರ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ನಿರ್ಲಕ್ಷ್ಯ
ಕನಿಷ್ಟ ವೇತನದ ಬಗ್ಗೆ ಮೌನ: ಹೈಕೋರ್ಟ ಅದೇಶದ ಅನ್ವಯ ರಾಜ್ಯ ಕನಿಷ್ಟ ವೇತನ ಸಲಹಾ ಸಮಿತಿಯು ೧೯ ಸಾವಿರ ಕನಿಷ್ಟ ವೇತನವೆಂದು ಪ್ರಸ್ತಾಪಿಸಿದೆ ಆದರೆ ಕಾರ್ಮಿಕ ಸಂಘಟನೆಗಳು ರಾಜ್ಯದಲ್ಲಿ ಜೀವನೋಪಾಯ ಮಟ್ಟ ಆಧಾರಿಸಿ ೩೩ ಸಾವಿರ ಕನಿಷ್ಟ ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಅದಕ್ಕೆ ಸ್ಪಂದಿಸಿಲ್ಲ. ನಿರ್ಲಕ್ಷ್ಯ
ಇದರಲ್ಲದೆ ರಾಜ್ಯದಲ್ಲಿ ಲಕ್ಷಾಂತರ ಅಂಗನವಾಡಿ, ಬಿಸಿಯೂಟ, ಆಶಾ ಸೇರಿ ಇತರೆ ಗೌರವಧನದ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಕನಿಷ್ಟ ವೇತನ ಘೋಷಣೆ ಮಾಡಬೇಕೆಂಬ ಬೇಡಿಕೆಗೂ ಈ ಬಜೆಟ್ ನಲ್ಲಿ ನ್ಯಾಯ ಸಿಕ್ಕಿಲ್ಲ. ಗುತ್ತಿಗೆ ಹೊರ ಹುತ್ತಿಗೆ ಆಧಾರದಲ್ಲಿ ಲಕ್ಷಾಂತರ ನೌಕರರು ಸರ್ಕಾರಿ,ಅರೆ ಸರ್ಕಾರಿ ಖಾಸಗಿ ರಂಗದಲ್ಲಿ ಅತ್ಯಂತ ಶೋಷಣೆಗೊಳಗಾಗಿದ್ದಾರೆ. ಅವರಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರ ಕರಡು ರೂಪಿಸಿದ್ದರೂ ಆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಪ್ರಸ್ತಾಪಿಸಿಲ್ಲ.
ಅಸಂಘಟಿತರ ಕಲ್ಯಾಣಕ್ಕೆ ಅನುದಾವಿಲ್ಲ. ರಾಜ್ಯದಲ್ಲಿ 20 ಲಕ್ಷ ವಾಣಿಜ್ಯ ಸಾರಿಗೆ ಕಾರ್ಮಿಕರು ಸೇರಿ ಮನೆಗೆಲಸ, ಹಮಾಲಿ, ಬೀದಿಬದಿ, ಟೈರ್ಸ್, ಮ್ಯಾಕಾನಿಕ್‌ಗಳು, ದಿನಪತ್ರಿಕೆ ವಿತರಕರು, ಗಿಗ್, ಹೊಟೇಲ್, ಸಿನಿಮಾ, ಮನರಂಜನೆ ಇತ್ಯಾಧಿ 93 ವಲಯಗಳಲ್ಲಿ ಸುಮಾರು 2 ಕೋಟಿಗಿಂತ ಅಧಿಕ ಕಾರ್ಮೀಕರು ಅಸಂಘಟಿತ ಕ್ಷೇತ್ರದಲ್ಲಿ ಯಾವೊಂದು ಸೇವಾ ಸೌಲಭ್ಯ, ಉದ್ಯೋಗ ಭದ್ರತೆಗಳಿಲ್ಲದೆ ದುಡಿಯುತ್ತಿದ್ದರಾರೆ. ಆದರೆ ಇವರಿಗೆ ಕನಿಷ್ಟ ಪಿಂಚಣಿ, ವೈದ್ಯಕೀಯ ಸೌಲಭ್ಯ, ವಸತಿ, ಸೌಲಭ್ಯಗಳಿಗಾಗಿ ರಾಜ್ಯ ಸರ್ಕಾರ ತಮಿಳುನಾಡು, ಕೇರಳದಂತೆ ತನ್ನ ಅನುದಾನ ಒದಗಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಿರತರಾಗಿದ್ದಾರೆ. ಆದರೆ ಇವರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಗಳು ಯಾವುದೇ ಘೋಷಣೆ ಮಾಡದೇ ಕೇವಲ ಕೌಶಲ್ಯಾಧಾರಿತ ಉದ್ಯೋಗ ಒದಗಿಸಲು’ ಕಾಯಕ’ ಆನ್‌ಲೈನ್ ಕೇಂದ್ರ ಸ್ಥಾಪನೆಗೆ ೫ ಕೋಟಿ ಒದಗಿಸಿರುವುದು ಅತ್ಯಂತ ಹಾಸ್ಯಸ್ಪದವಾಗಿದೆ.
ಕಟ್ಟಡ ಕಾರ್ಮಿಕರ ನಿಧಿ ದುರ್ಬಳಕೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ೬೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಉಖಿಖಿಅ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿರುವುದನ್ನು ಮುಂದಾಗಿದೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ದುರುಪಯೋಗಕ್ಕೆ ಸ್ಟಷ್ಟ ನಿದರ್ಶನವಾಗಿದೆ.
ಶ್ರಮಿಕ ವಸತಿ ಶಾಲೆಗಳ ನಿರ್ಮಾಣ ಹಾಗೂ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿರುವ ಕೌಶಲ್ಯ ಅಭಿವೃದ್ಧಿ ಅಕಾಡೆಮಿಗಳನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯನ್ನು ಬಳಸಿ ನಿರ್ಮಾಣ ಮಾಡುವ ಬಜೆಟ್ ಪ್ರಸ್ತಾಪವು ೧೯೯೬ರ ಕಟ್ಟಡ ಕಾರ್ಮಿಕರ ಕಾಯ್ದೆಯ ಉದ್ದೇಶವನ್ನು ಬುಡಮೇಲು ಮಾಡುವುದಾಗಿದೆ.ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಮಾಡಬೇಕಾದ ಯೋಜನೆಗಳನ್ನು ಬಡ ಕಾರ್ಮಿಕರ ನಿಧಿಯನ್ನು ಬಳಸಿ ಮಾಡುತ್ತಿರುವುದು ಸರಿಯಲ್ಲ.
ಹಳೆ ಕಾರ್ಯಕ್ರಮ ಹೊಸ ಘೋಷಣೆ: ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಅವಲಂಬಿತರಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಡಿ ಒಟ್ಟು 43,936 ಅರ್ಹ ಫಲಾನುಭವಿಗಳಿಗೆ ಒಟ್ಟು 39 ಕೋಟಿ ರೂ. ಗಳ ಧನಸಹಾಯ ನೀಡಲಾಗಿದೆ.
ಇದು ಕಲ್ಯಾಣ ಮಂಡಳಿ ನಿಧಿಯಿಂದ ಮಾಡಲಾದ ವೆಚ್ಚವೇ ಹೊರತು ರಾಜ್ಯ ಬಜೆಟ್ ಅನುಧಾನವಲ್ಲ. ಆಶಾದೀಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 5,062 ಅಭ್ಯರ್ಥಿಗಳ ಪರವಾಗಿ 18 ಕೋಟಿ ರೂ. ಗಳನ್ನು ಅರ್ಹ ಉದ್ಯೋಗದಾತರಿಗೆ ಮರುಪಾವತಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಇದು ಕೈಗಾರಿಕಾ ಮಾಲೀಕರಿಗೆ ರಾಜ್ಯ ಸರ್ಕಾರ ಜನರ ತೆರಿಗೆ ಹಣದಿಂದ ಮಾಡುತ್ತಿರುವ ಅನುಕೂಲವೇ ಹೊರತು ಕಾರ್ಮಿಕ ವರ್ಗಕ್ಕೆ ಅಲ್ಲ.
ಸೂಸೈಟಿ ನಿಯಂತ್ರಣಕ್ಕೆ ಇಎಸ್‌ಐ: ಕಾರ್ಮಿಕ ರಾಜ್ಯ ವಿಮಾ ಸೊಸೈಟಿಯ ರಚನೆಯಿಂದಾಗಿ ಪ್ರಸ್ತುತ ನೀಡಲಾಗುತ್ತಿರುವ ವೈದ್ಯಕೀಯ ಸೇವೆಗಳನ್ನು ೫೦ ಲಕ್ಷ ವಿಮಾದಾರರಿಗೆ ಹಾಗೂ ೧೫೦ ಲಕ್ಷ ಅವಲಂಬಿತರಿಗೆ ಒದಗಿಸಲಾಗುವುದು. ಈ ಸೊಸೈಟಿಯ ಮುಖಾಂತರ ಹಲುವ ಯೋಜನೆಗಳನ್ನು ಜಾರಿಗೊಸುವ ಪ್ರಸ್ತಾಪವು ಹಾಲಿ ಇರುವ ತ್ರೀಪಕ್ಷೀಯ ವ್ಯವಸ್ಥೆಯನ್ನು ಸೂಸೈಟಿ ನಿಯಂತ್ರಣಕ್ಕೆ ಒಪ್ಪಿಸುವ ಹುನ್ನಾರಾಗಿದೆ.
ಬಜೆಟ್ ಆರಂಭದಲ್ಲೇ ಮಾನ್ಯ ಮುಖ್ಯಮಂತ್ರಿಗಳು ‘ಮಾನವ ಅಭಿವೃದ್ದಿಯಲ್ಲಿನ ಹೊಡಿಕೆಯನ್ನು ನಿರ್ಲಕ್ಷಿಸಿದ ಆರ್ಥಿಕ ಅಭಿವೃದ್ದಿಯು ಅಸ್ಥಿರ ಮಾತ್ರವಲ್ಲ ಅದು ಅನೈತಿಕವಾದುದ್ದು ಎಂದು ವ್ಯಾಖ್ಯಾನಿಸಿದ್ದಾರೆ.ಮಾತ್ರವಲ್ಲ ಬುದ್ದನ ಕರುಣೆ, ಬಸವಣ್ಣನ ಕಾಯಕ ಹಾಗೂ ಡಾ: ಬಾಬಾ ಸಾಹೇಬ ಅಂಬೇಡ್ಕರ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜ್ಯವನ್ನು ಅಭಿವೃದ್ದಿಗೊಳಿಸುವ ಘೋಷಣೆ ಮಾಡಿದ್ದಾರೆ.
ಆದರೆ ಇನ್ನೊಂದು ಕಡೆ ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಅಭಿವೃದ್ದಿಯಲ್ಲಿ ಅತ್ಯಂತ ಮಹತ್ವ ಪಾತ್ರವನ್ನು ವಹಿಸಿರುವ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಯಾವುದೇ ಹಣಕಾಸಿನ ನೆರವನ್ನು ಪ್ರಕಟಿಸದೇ ನಿರ್ಲಕ್ಷ್ಯೆ ವಹಿಸಿ ಕರ‍್ಪೋರೇಟ್ ಕಂಪನಿಗಳ ಒತ್ತಡಗಳಿಗೆ ಮಣೆ ಹಾಕಿದ್ದಾರೆ. ರಾಜ್ಯ ಸರ್ಕಾರದ ಈ ನೀತಿಗಳ ವಿರುದ್ದ ಕಾರ್ಮಿಕ ವರ್ಗ ಐಕ್ಯ ಹೋರಾಟ ನಡೆಸದೇ ಪರ್ಯಯ ದಾರಿಗಳಿಲ್ಲ ಎನುವುದು ಸಿಐಟಿಯು ಸ್ಪಷ್ಟ ಅಭಿಪ್ರಾಯವಾಗಿದೆ.
ಇದನ್ನೂ ನೋಡಿ: ಗಾಂಧಿ, ನೆಹರೂ ವಿಚಾರಗಳ ಮೇಲೆ ದಾಳಿ: ಉಗ್ರಪ್ಪ ಆರೋಪJanashakthi Media
