ಕೋಟಾ: ನೀಟ್ ಆಕಾಂಕ್ಷಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೋಟಾ: ಒಡಿಶಾದ ನೀಟ್ ಆಕಾಂಕ್ಷಿಯೊಬ್ಬರು ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟಾದ ಹಾಸ್ಟೆಲ್‌ವೊಂದರಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ನೀಟ್

ಗುರುವಾರ ರಾತ್ರಿ ವಿಜ್ಞಾನ ನಗರ ಪ್ರದೇಶದ ಅಂಬೇಡ್ಕರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ತಮಿಳುನಾಡು: ಜಲ್ಲಿಕಟ್ಟು ಮತ್ತು ಸಂಬಂಧಿತ ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ ಜೀವ ಕಳೆದುಕೊಂಡ ಏಳಕ್ಕೂ ಹೆಚ್ಚು ಮಂದಿ

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯವರಾದ 18 ವರ್ಷದ ಅಭಿಜೀತ್ ಗಿರಿ ಎಂಬುವವರು 2024ರ ಏಪ್ರಿಲ್‌ನಿಂದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಮೆಸ್ ಕೆಲಸಗಾರ ಅಭಿಜೀತ್ ಅವರ ಕೋಣೆಗೆ ಆಹಾರ ನೀಡಲು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಷ್ಟು ಕೂಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಮೆಸ್ ಕೆಲಸಗಾರ ಮತ್ತು ಹಾಸ್ಟೆಲ್‌ನಲ್ಲಿನ ಇತರರು ಬಾಗಿಲು ಒಡೆದು ನೋಡಿದಾಗ ಆತ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ ಎಂದು ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ಎಎಸ್‌ಐ) ಲಾಲ್ ಸಿಂಗ್ ತನ್ವಾರ್ ಹೇಳಿದ್ದಾರೆ.

ಇದನ್ನೂ ನೋಡಿ : ಬಳ್ಳಾರಿ ವಿಶ್ವವಿದ್ಯಾಲಯ : ಕಿರುಕುಳಕ್ಕೆ ಹಂಗಾಮಿ ನೌಕರ ಆತ್ಮಹತ್ಯೆ – ಎಸ್ಎಫ್ಐ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *