ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಮುಖ ಸುದ್ದಿ ಏಜೆನ್ಸಿ ‘ಇಂಡೋ ಏಷ್ಯನ್ ನ್ಯೂಸ್ ಸರ್ವಿಸ್'(ಐಎಎನ್‌ಎಸ್)ನ 50.5% ಪಾಲನ್ನು ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಮಾಲೀಕತ್ವದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಸುದ್ದಿ ಸೇವೆಗಳಿಗೆ ಹೆಸರುವಾಸಿಯಾಗಿರುವ ಐಎಎನ್‌ಎಸ್ ಇನ್ನು ಮುಂದೆ ಎನ್‌ಡಿಟಿವಿಯಂತೆಯೆ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
ಈ ಹಿಂದೆ ಎನ್‌ಡಿಟಿವಿಯ ಪಾಲನ್ನು ಕೂಡಾ ಅದಾನಿ ಗ್ರೂಪ್ ಇದೇ ರೀತಿ ಪಡೆದುಕೊಂಡಿತ್ತು, ನಂತರ ಎನ್‌ಡಿಟಿವಿಯನ್ನು ತನ್ನದಾಗಿಸಿಕೊಂಡಿತ್ತು. ಐಎಎನ್‌ಎಸ್‌ನೊಂದಿಗೆ ಷೇರುದಾರರ ಒಪ್ಪಂದಕ್ಕೆ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಸಹಿ ಹಾಕಿದ್ದು, ಕಂಪನಿಯಲ್ಲಿ ಮತದಾನದ ಹಕ್ಕುಗಳನ್ನು ಸಹ ಪಡೆದುಕೊಂಡಿದೆ. ಸ್ವಾಧೀನವು “ಕಾರ್ಯತಂತ್ರದ ಸ್ವರೂಪ” ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ನಗರದಲ್ಲಿ ಹೆಚ್ಚುತ್ತಿದೆ ಅನಧಿಕೃತ ‘ಬೋರ್ ವೆಲ್’ಗಳು; ನಿಯಮ ಉಲ್ಲಂಘಿಸುತ್ತಿರುವ ಭೂ ಮಾಲೀಕರು
ಎನ್‌ಡಿಟಿವಿಯನ್ನು ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಪ್ರತಿಕೂಲವಾಗಿ ಸ್ವಾಧೀನಪಡಿಸಿಕೊಂಡ ಸುಮಾರು ಒಂದು ವರ್ಷದ ನಂತರ ಅದೇ ಸಂಸ್ಥೆ ಇದೀಗ ಮತ್ತೊಂದು ಸುದ್ದಿ ಸಂಸ್ಥೆಯನ್ನು ಅದೇ ರೀತಿಯಲ್ಲಿ ಸ್ವಾಧೀನ ಪಡಿಸಿಕೊಂಡಿದೆ. ಕಳೆದ ಒಂದು ವರ್ಷಗಳಲ್ಲಿ ಎನ್‌ಡಿಟಿವಿಯ ವೀಕ್ಷಕರ ಸಂಖ್ಯೆ ಕ್ಷೀಣಿಸುತ್ತಲೇ ಇದೆ ಎಂದು ವರದಿಗಳು ಉಲ್ಲೇಖಿಸಿವೆ.
ಅದಾನಿ ಗ್ರೂಪ್ ಎನ್‌ಡಿಟಿವಿ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಡಿಸೆಂಬರ್‌ನಲ್ಲಿ 45 ಮಿಲಿಯನ್ ವೀಕ್ಷಣೆ ಕಡಿಮೆಯಾಗಿದೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ. ಅದಕ್ಕೂ ಒಂದು ತಿಂಗಳ ಮೊದಲು 98 ಮಿಲಿಯನ್ ವೀಕ್ಷಣೆ ಎನ್‌ಟಿವಿ ಆಗುತ್ತಿತ್ತು ಎಂದು ವರದಿ ಉಲ್ಲೇಖಿಸಿದ್ದು, ಇದು 54% ದಷ್ಟು ಇಳಿಕೆ ಕಂಡಿದೆ ಎಂದು ಅದು ಹೇಳಿದೆ.
ಅದೇ ರೀತಿಯ ಟ್ರೆಂಡ್ ಎನ್‌ಡಿಟಿವಿ ನೆಟ್‌ವರ್ಕ್‌ನ ಇಂಗ್ಲಿಷ್ ಮಾಧ್ಯಮ NDTV 24×7 ಕೂಡಾ ಕಂಡು ಬಂದಿದೆ ಎಂದು ವರದಿ ಹೇಳಿದೆ. ಎನ್‌ಡಿಟಿವಿಯ ಈ ಹಿಂದಿನ ಮಾಲಿಕರಾದ ರಾಯ್ ದಂಪತಿಗಳು ಮತ್ತು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ನಿರ್ಗಮನದ ನಂತರ ಎನ್‌ಡಿಟಿವಿಯಲ್ಲಿ ವೀಕ್ಷಣೆ ಕಡಿಮೆಯಾಗಿದೆ ಎಂದು ಅದು ತನ್ನ ನ್ಯೂಸ್ ಲಾಂಡ್ರಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ವಿಡಿಯೊ ನೋಡಿ: ಸಾಮರಸ್ಯದ ಬದುಕು ನಮ್ಮದಾಗಬೇಕು ಅದಕ್ಕೆ ಬಹುತ್ವ ಮೂಲಮಂತ್ರವಾಗಬೇಕು – ಡಾ. ಅರವಿಂದ ಮಾಲಗತ್ತಿ Janashakthi Media