ಅಯೋಧ್ಯ: ಅಯೋಧ್ಯೆಯಲ್ಲೇ ಬಿಜೆಪಿ ಹಿನ್ನೆಡೆ ಕಂಡಿದೆ. ಅಯೋಧ್ಯೆ ನಗರವನ್ನು ಹೊಂದಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದ್ದು ಬಿಜೆಪಿ ಹಿಂದೆ ಬಿದ್ದಿದೆ.
ಇಡೀ ಉತ್ತರ ಪ್ರದೇಶ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯಾಗಿದ್ದು, ಇಂಡಿಯಾ ಒಕ್ಕೂಟ ಬಹುದೊಡ್ಡ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಹಿಂಪಡೆದಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮೂರನೇ ಸ್ಥಾನದಲ್ಲಿ ಕೆ.ಎಸ್.ಈಶ್ವರಪ್ಪ ಇತ್ತ ಮೈಸೂರಿನಲ್ಲಿ ಯದುವೀರ್ ಮುನ್ನಡೆ
ಸಮಾಜವಾದಿ ಪಕ್ಷದಿಂದ ಅವಧೇಶ್ ಪ್ರಸಾದ್ ಕಣಕ್ಕಿಳಿದಿದ್ದು, ಬಿಜೆಪಿಯಿಂದ ಲಲ್ಲುಸಿಂಗ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈಗ ಅವಧೇಶ್ ಪ್ರಸಾದ್ ಲಲ್ಲುಸಿಂಗ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ನೋಡಿ: ಲೋಕಮತ 2024| ಉತ್ತರದಲ್ಲಿ, ದಕ್ಷಿಣದಲ್ಲಿ ತೀವ್ರ ಪೈಪೋಟಿ, ಬಿಜೆಪಿಗೆ ಹಿನ್ನಡೆ Janashakthi Media