ನವದೆಹಲಿ | ಎನ್‌ಸಿಆರ್‌ಬಿ ವರದಿ ಪ್ರಕಟ 2023ರಲ್ಲಿ ಬಾಲ್ಯ ವಿವಾಹ 6 ಪಟ್ಟು ಹೆಚ್ಚಳ : 17,000 ಬಾಲಕಿಯರ ಅಪಹರಣ

Please follow and like us:
ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಇತ್ತೀಚಿನ ದತ್ತಾಂಶದ ಪ್ರಕಾರ 2023ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚಾಗಿದೆ. ಒಟ್ಟು ಪ್ರಕರಣಗಳ ಪೈಕಿ ಅಸ್ಸಾಂನಲ್ಲೇ ಸುಮಾರು ಶೇ 90ರಷ್ಟು ಪ್ರಕರಣ ದಾಖಲಾಗಿವೆ. ನವದೆಹಲಿ

ಇದನ್ನೂ ಓದಿ : ಪದವಿ ಪರೀಕ್ಷೆಯನ್ನು ಮುಂದೂಡಿ: ವಿದ್ಯಾರ್ಥಿಗಳು ಪ್ರತಿಭಟನೆ

2023ರಲ್ಲಿ 16,737 ಬಾಲಕಿಯರು ಮತ್ತು 129 ಬಾಲಕರನ್ನು ಮದುವೆಗಾಗಿ ಅಪಹರಿಸಲಾಗಿದೆ ಎಂದು ಎನ್‌ಸಿಆರ್‌ಬಿ ದತ್ತಾಂಶವು ಬಹಿರಂಗಪಡಿಸಿದೆ.

2022ರಲ್ಲಿ 1,002 ಪ್ರಕರಣಗಳು ಮತ್ತು 2021ರಲ್ಲಿ 1,050 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಯಡಿಯಲ್ಲಿ 6,038 ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

ಈ ಪೈಕಿ ಅಸ್ಸಾಂನಲ್ಲಿ 5,267 ಪ್ರಕರಣಗಳು ವರದಿಯಾಗಿವೆ. ಇದು ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ ತಮಿಳುನಾಡು (174), ಕರ್ನಾಟಕ (145) ಮತ್ತು ಪಶ್ಚಿಮ ಬಂಗಾಳ (118) ನಂತರದ ಸ್ಥಾನದಲ್ಲಿವೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಛತ್ತೀಸಗಢ, ನಾಗಲ್ಯಾಂಡ್, ಲಕ್ಷದ್ವೀಪ ಮತ್ತು ಲಡಾಕ್‌ಗಳಲ್ಲಿ 2023ರಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

18 ವರ್ಷದೊಳಗಿನ ಬಾಲಕಿಯರು ಮತ್ತು 21 ವರ್ಷದೊಳಗಿನ ಬಾಲಕರ ವಿವಾಹ ತಡೆ ದೃಷ್ಟಿಯಿಂದ 2006ರಲ್ಲಿ ಈ ಕಾಯ್ದೆ ಜಾರಿಗೆ ತರಲಾಗಿತ್ತು.

ಇದನ್ನೂ ನೋಡಿ : ಗಾಂಧೀಜಿ ಪರಿಕಲ್ಪನೆ ಇಂದಿಗೂ ಪ್ರಸ್ತುತ – ನಾ ದಿವಾಕರ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *