ಪ್ರಧಾನಿ ಮೋದಿ ಭೇಟಿಯಾದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್

ನವ ದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ನಾಯಕ ಶರದ್‍ಪವಾರ್ ಇಂದು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ ಶರದ್‍ಪವಾರ್ ಅವರು, ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯೂ ಒಂದು ಗಂಟೆಗಳ ಕಾಲ ನಡೆದಿದೆ ಎಂದು ಹೇಳಲಾಗುತ್ತಿದೆ.

ಎನ್​ಸಿಪಿ, ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಒಂದು ಪಕ್ಷವಾಗಿದೆ.  ಅಕ್ರಮವಾಗಿ ಹಣ ವಸೂಲಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಎನ್‍ಸಿಪಿ ನಾಯಕರಾಗಿದ್ದ ಅನಿಲ್‍ದೇಶ್‍ಮುಖ್ ಗೃಹ ಸಚಿವ ಸ್ಥಾವನ್ನು ತೊರೆಯಬೇಕಾಯಿತು. ಆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕೈಗೊಂಡಿದೆ. ಪ್ರಧಾನಿ ಭೇಟಿ ವೇಳೆ ಶರದ್ ಪ್ರವಾರ್ ಹಲವಾರು ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.  ಸಹಕಾರ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯದ ಬಗ್ಗೆಯೂ ಚರ್ಚೆ ನಡೆದುದರ ಬಗ್ಗೆ ಮಾಹಿತಿ ಇದೆ.

ರಾಜ್ಯಸಭೆ ಸದಸ್ಯರೂ ಆಗಿರುವ ಶರದ್​ ಪವಾರ್​, 2022ರಲ್ಲಿ ನಡೆಯಲಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪರ ಅಭ್ಯರ್ಥಿ ಎಂಬ ಊಹೆಯೊಂದು ಎದ್ದಿದೆ. ಆದರೆ ಶರದ್​ ಪವಾರ್ ಆ ವರದಿಯನ್ನು ಅಲ್ಲಗಳೆದಿದ್ದಾರೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್​ ಇತ್ತೀಚೆಗೆ ಶರದ್​ ಪವಾರ್​ ಹಾಗೂ ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯವರೊಟ್ಟಿಗೆ ಹಲವು ಸುತ್ತಿನ ಸಭೆ ನಡೆಸಿದ ಬೆನ್ನಲ್ಲೇ ಇಂಥದ್ದೊಂದು ಮಾತು ಕೇಳಿಬಂದಿತ್ತು. ಈಗ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

ಜುಲೈ 19ರಿಂದ ಸಂಸತ್ ಚಳಗಾಲ ಅಧಿವೇಶನ ಆರಂಭವಾಗಲಿದ್ದು, (Monsoon session of Parliament) .  ಅಧಿವೇಶನ ಆರಂಭಕ್ಕೆ ಎರಡು ದಿನ ಬಾಕಿಯಿರುವಾಗಲೇ ಶರದ್ ಪವಾರ್ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಕೇವಲ ಮಹಾರಾಷ್ಟ್ರಕ್ಕಷ್ಟೆ ಸೀಮಿತವಾಗಿದೆಯಾ ಅಥವಾ ಮುಂದಿನ ರಾಜಕೀಯ ಚಿತ್ರಣದ ಭೇಟಿಯಾ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *