ನವದೆಹಲಿ : ಮೋದಿ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾನೂನುಗಳನ್ನು ವಿರೋಧಿಸಿ ಒಂದು ವರ್ಷದಿಂದ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಝೀ ನ್ಯೂಸ್ ವಿರುದ್ಧ ರಾಷ್ಟ್ರೀಯ ಪ್ರಸಾರ ಮತ್ತು ಡಿಜಿಟಲ್ ಗುಣಮಟ್ಟ ಪ್ರಾಧಿಕಾರ ಛೀಮಾರಿ ಹಾಕಿದೆ. ಪ್ರಸಾರ ನೀತಿಸಂಹಿತೆ ಮತ್ತು ವರದಿಗಾರಿಕೆಯ ನಿರ್ದಿಷ್ಟ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಎಲ್ಲ ವೀಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಝಿ ನ್ಯೂಸ್ ಗೆ ನಿರ್ದೇಶಿಸಿದೆ.
ಇಂದ್ರಜೀತ್ ಘೋರ್ಪಡೆ ಎಂಬವರು ಸಲ್ಲಿಸಿದ ದೂರಿನಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದ ಪ್ರಾಧಿಕಾರವು ಈ ಆದೇಶವನ್ನು ನೀಡಿದ್ದು, ವಿಡಿಯೊ ಡಿಲಿಟ್ ಮಾಡುವಂತೆ ಈಗಾಗಲೇ ಸೂಚನೆಯನ್ನು ನೀಡಿದೆ.
ರೈತರ ಹೋರಾಟವನ್ನು ದೇಶದ್ರೋಹ, ಖಲಿಸ್ತಾನಿಗಳ ಕುಮ್ಮಕಿನಿಂದ ನಡೆಯುತ್ತಿರುವ ಹೋರಾಟ ಎಂದು ಹೇಳಿ ಝಿ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿ ರೈತರ ಹೋರಾಟಕ್ಕೆ ಕಳಂಕ ತರುವ ಹುನ್ನಾರ ಮಾಡಿತ್ತು. ಝಿ ನ್ಯೂಸ್ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿ ದೂರು ದಾಖಲುಸಿದ್ದರು.
ದೂರಿನ ಅನ್ವಯ NBDSA ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾಧ್ಯಮಗಳಿಗೆ ಈ ರೀತಿಯ ಸೂಕ್ಷ್ಮ ವರದಿಗಳ ಪ್ರಸಾರ ಮಾಡುವಾಗ ನೀಡುವ ಟ್ಯಾಗ್‌ಲೈನ್‌ಗಳು, ಹ್ಯಾಶ್‌ಟ್ಯಾಗ್‌ಗಳ ಪ್ರಸಾರ/ಪ್ರಕಟಣೆ ಮತ್ತು ಚಿತ್ರಗಳು/ಛಾಯಾಚಿತ್ರಗಳ ಬಳಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲು ನಿರ್ಧರಿಸಲಾಗಿದ್ದು ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಚಾನಲ್‌ನ ವೆಬ್‌ಸೈಟ್, ಅಥವಾ ಯೂಟ್ಯೂಬ್, ಅಥವಾ ಯಾವುದೇ ಇತರ ಲಿಂಕ್‌ಗಳಲ್ಲಿ ಈ ವರದಿಯು ಇನ್ನೂ ಲಭ್ಯವಿದ್ದರೆ, ಪ್ರಸಾರದ ವೀಡಿಯೊವನ್ನು ತಕ್ಷಣವೇ ತೆಗೆದುಹಾಕುವಂತೆ ಝಿ ನ್ಯೂಸ್ ಗೆ ನಿರ್ದೇಶಿಸಿದೆ.