ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿ ರಾಷ್ಟ್ರೀಯ ವಿಚಾರ ಸಂಕಿರಣ | 12 ಸಾವಿರ ಜನರ ಭಾಗಿ!

ಏಕರೂಪ ನಾಗರಿಕ ಸಂಹಿತೆಯ ವಿರೋಧವೆಂದರೆ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಸಂರಕ್ಷಣೆಗಾಗಿ ನಡೆಯುತ್ತಿರುವ ಯುದ್ಧವೆಂದು ಯೆಚೂರಿ ಏಕರೂಪ ನಾಗರಿಕ ಸಂಹಿತೆಪ್ರತಿಪಾದಿಸಿದ್ದಾರೆ

ಕೋಯಿಕ್ಕೋಡ್: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್‌ವಾದಿ (ಸಿಪಿಐಎಂ) ಆಯೋಜಿಸಿದ್ದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿ ರಾಷ್ಟ್ರೀಯ ವಿಚಾರ ಸಂಕಿರಣವು ಶನಿವಾರ ಕ್ಯಾಲಿಕಟ್ ಟ್ರೇಡ್ ಸೆಂಟರ್‌ನಲ್ಲಿ ನಡೆದಿದ್ದು, ಭಾರಿ ಯಶಸ್ವಿ ಕಂಡಿದೆ. ಪಕ್ಷದ ಮುಖಂಡರು, ಸಚಿವರು, ದಲಿತ ಮುಖಂಡರು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧಾರ್ಮಿಕ ನಾಯಕರನ್ನು ಒಟ್ಟುಗೂಡಿಸಿದ ಈ ಕಾರ್ಯಕ್ರಮವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಉದ್ಘಾಟಿಸಿದರು. 12,000 ಕ್ಕೂ ಹೆಚ್ಚು ಜನರು ಈ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಏಕರೂಪತೆಯನ್ನು ಸಮಾನತೆಗೆ ಸಮಾನಾರ್ಥಕವಾಗಿ ಸಿಪಿಐಎಂ ನೋಡುವುದಿಲ್ಲ ಎಂದು ಸೀತಾರಾಮ್ ಯೆಚೂರಿ ಸಂಕಿರಣದಲ್ಲಿ ಒತ್ತಿ ಹೇಳಿದ್ದಾರೆ. ಜಾತಿ, ಧರ್ಮ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಪಕ್ಷದ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ.

ಇದನ್ನೂಓದಿ: ಏಕರೂಪ ನಾಗರಿಕ ಸಂಹಿತೆಯು ಬಹುತ್ವವನ್ನು ಭ್ರಷ್ಟಗೊಳಿಸುತ್ತದೆ –

ಯಾವುದೇ ಸಮುದಾಯದೊಳಗೆ ವೈಯಕ್ತಿಕ ಅಥವಾ ಸಾಂಪ್ರದಾಯಿಕ ಕಾನೂನುಗಳನ್ನು ಸುಧಾರಿಸುವಾಗ ನಿರ್ದಿಷ್ಟ ಸಮುದಾಯಗಳನ್ನು ಸಮಾಲೋಚಿಸುವ ಮತ್ತು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಯೆಚೂರಿ ಹೇಳಿದ್ದು, “2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಯುಸಿಸಿ ಘೋಷಣೆಯನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಅವರು ವಾದಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರದ ಹಿಂದಿನ ಘಟನೆಗಳನ್ನು ಉಲ್ಲೇಖಿಸಿದ ಯೆಚೂರಿ, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಯುಸಿಸಿಯನ್ನು ದುರುಪಯೋಗ ಪಡಿಸುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದರು. “ಆರ್ಟಿಕಲ್ 370 ರ ರದ್ದತಿ, ಜಮ್ಮು ಕಾಶ್ಮೀರದ ವಿಸರ್ಜನೆ, ಲವ್ ಜಿಹಾದ್ ಆರೋಪ ಮತ್ತು ಅಂತರ್-ಧರ್ಮೀಯ ವಿವಾಹಗಳ ವಿರುದ್ಧದ ಕಾನೂನುಗಳು, ಗೋಸಂರಕ್ಷಣಾ ನಿಯಮಗಳು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಮರ ವಿರುದ್ಧ ಗುರಿಪಡಿಸಿದ ಕೃತ್ಯಗಳು” ಎಂದು ಅವರು ಉಲ್ಲೇಖಿಸಿದ್ದಾರೆ.

ಯುಸಿಸಿಯ ವಿರೋಧವೆಂದರೆ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಸಂರಕ್ಷಣೆಗಾಗಿ ನಡೆಯುತ್ತಿರುವ ಯುದ್ಧವೆಂದು ಯೆಚೂರಿ ಪ್ರತಿಪಾದಿಸಿದ್ದಾರೆ.

ಇದನ್ನೂಓದಿ: ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಬಿಜೆಪಿಯ ಯುಸಿಸಿ ಪ್ರಸ್ತಾವನೆಯನ್ನು ಮತ್ತಷ್ಟು ಟೀಕಿಸಿ, “ಇದು ದೇಶವನ್ನು ಜಾತಿವಾದಿ ಚಾತುರ್ವರ್ಣ ವ್ಯವಸ್ಥೆಗೆ ಮತ್ತು ಮನುಸ್ಮೃತಿಯಿಂದ ಪ್ರಭಾವಿತವಾದ ಸಂವಿಧಾನಕ್ಕೆ ಹಿಂದಿರುಗಿಸುವ ಗುರಿಯಾಗಿದೆ. ಇದರಿಂದಾಗಿ ದೇಶದ ವೈವಿಧ್ಯತೆಗೆ ಧಕ್ಕೆಯಾಗಲಿದ್ದು, ಸವರ್ಣ ಕಾರ್ಪೊರೇಟ್ ಶಕ್ತಿಗಳಿಗೆ ಈಗಿನ ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತತೆಯ ಹಣೆಪಟ್ಟಿ ಲಾಭವಾಗಲಿದೆ” ಎಂದು ಎಚ್ಚರಿಸಿದ್ದಾರೆ.

ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್‌ ಇಂಜಿನ್‌ ಸರ್ಕಾರ! 

Donate Janashakthi Media

Leave a Reply

Your email address will not be published. Required fields are marked *