ಅಧಿಕಾರಕ್ಕೆ ಬಂದ್ರೆ ಕಾಶ್ಮೀರದಲ್ಲಿ ಮತ್ತೆ 370 ಜಾರಿ! 12 ‘ಗ್ಯಾರಂಟಿ’ ಘೋಷಿಸಿದ ಫಾರುಕ್ ಅಬ್ದುಲ್ಲಾ

ಫಾರುಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು, ತಾವು ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಯನ್ನು ಮರುಸ್ಥಾಪನೆ ಮಾಡಲಾಗುವುದು ಎಂಬ ಭರವಸೆ ನೀಡಿದೆ. ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಮತ್ತು 2000 ದಲ್ಲಿ ಹಿಂದಿನ ಅಸೆಂಬ್ಲಿ ಅಂಗೀಕರಿಸಿದ ಸ್ವಾಯತ್ತತೆಯ ನಿರ್ಣಯದ ಅನುಷ್ಠಾನವು ಮುಂಬರುವ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷ ನೀಡಿರುವ 12 ಭರವಸೆಗಳಲ್ಲಿ ಆರ್ಟಿಕಲ್ 370 ಪುನರ್ ಸ್ಥಾಪಿಸುವುದು ಕೂಡ ಸೇರಿದೆ.

ಫಾರುಖ್‌ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ  ರಾಜ್ಯದಲ್ಲಿ ಜಾರಿಯಲ್ಲಿರುವ 1978ರ ಸಾರ್ವಜನಿಕ ಭದ್ರತಾ ಕಾಯ್ದೆ ರದ್ದು, ಕಾಶ್ಮೀರಿ ಪಂಡಿತರ ಗೌರವಪೂರ್ವ ವಾಪಸ್‌ಗೆ ಕ್ರಮ, ಪಾಸ್‌ಪೋರ್ಟ್ ಪರಿಶೀಲನೆ ಪ್ರಕ್ರಿಯೆ ಸರಳ, ನ್ಯಾಯಸಮ್ಮತವಲ್ಲದ ಅಧಿಕಾರಿಗಳ ವಜಾ ರದ್ದು, ಹೆದ್ದಾರಿಗಳಲ್ಲಿ ತಪಾಸಣೆ ಹೆಸರಲ್ಲಿ ನಡೆಯುವ ಕಿರಿಕಿರಿಗೆ ಬ್ರೇಕ್‌, 1ಲಕ್ಷ ಉದ್ಯೋಗ ಸೃಷ್ಟಿ, ಆರ್ಥಿಕವಾಗಿ ಹಿಂದುಳಿದವರಿಗೆ ವಾರ್ಷಿಕ 6 ಉಚಿತ ಸಿಲಿಂಡರ್, ಅಲ್ಪಸಂಖ್ಯಾತ ಆಯೋಗ ರಚನೆ ಸೇರಿದೆ.

ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಗೆದ್ದು ಅಧಿಕಾರಕ್ಕೆ ಬಂದರೆ ಎಲ್ಲಾ ರಾಜಕೀಯ ಕೈದಿಗಳಿಗೆ ಕ್ಷಮಾದಾನ ನೀಡುವುದಾಗಿ ಮತ್ತು ಕಣಿವೆಗೆ ಕಾಶ್ಮೀರಿ ಪಂಡಿತರನ್ನು ಘನತೆಯಿಂದ ಹಿಂದಿರುಗಿಸುವುದಾಗಿ ಭರವಸೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2014 ರಲ್ಲಿ ವಿಧಾನಸಭೆ  ಚುನಾವಣೆ  ನಡೆದ ಬಳಿಕ ಇದೇ ಮೊದಲ ಭಾರಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ  ನಿರ್ಧರಿಸಿದೆ. ಈಗಾಲೇ ಚುನಾವಣೆಯ ದಿನಾಂಕ ನಿಗದಿಪಡಿಸದ್ದು. ರಾಜಕೀಯ ಪಕ್ಷಗಳಲ್ಲಿ ಗೆಲುವು ಸೋಲಿನ ಲೆಕ್ಕಾಚಾರಗಳು ಆರಂಭವಾಗಿದೆ.

 

Donate Janashakthi Media

Leave a Reply

Your email address will not be published. Required fields are marked *