ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ ಶ್ರದ್ಧಾಂಜಲಿ ಸಭೆ

ಬೆಂಗಳೂರು: ಬಂಡಾಯ ಸಾಹಿತಿ, ಕವಿ, ನಾಟಕಕಾರ, ಚಳುವಳಿಗಾರ ಪ್ರೊ. ಚಂದ್ರಶೇಖರ ಪಾಟೀಲ(ಚಂಪಾ) ಅವರು 2022ರ ಜನವರಿ 10ರಂದು ನಿಧನ ಹೊಂದಿದರು. ಅವರ ವಿಚಾರಗಳು ಮತ್ತು ಸಾಹಿತ್ಯಿಕ ಕೃತಿಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡವರು. ಸಾಹಿತ್ಯ ವಲಯದಲ್ಲಿ ಬಂಡಾಯ ಸಂಘಟನೆ ಹುಟ್ಟು ಹಾಕಿದವರು ಚಂಪಾ ಅವರು, ಹಲವು ಮಹತ್ವದ ನಾಟಕಗಳನ್ನು ನೀಡಿದ್ದಾರೆ.

ಚಂಪಾ ಅವರಿಗೆ ಬೆಂಗಳೂರು ನಗರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನ, ಲಂಡನ್‌ ಇವರ ವತಿಯಿಂದ 2022ರ ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿದ್ದಾರೆ.

ಆನ್‌ಲೈನ್‌ ನಡೆಯುವ ಸಭೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗೌರವ ಸಲಹೆಗಾರರಾದ ಡಾ. ಗೊ.ರು. ಚನ್ನಬಸಪ್ಪ ಪುಷ್ಪನಮನ ಸಲ್ಲಿಸಲಿದ್ದಾರೆ. ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ, ಡಾ. ಕೆ.ವೈ. ನಾರಾಯಣಸ್ವಾಮಿ, ಜಿ.ಎನ್‌. ಮೋಹನ್‌, ಶ್ರೀಮತಿ ಸುಕನ್ಯ ಮಾರುತಿ ಅವರು ನುಡಿನಮನ ಸಲ್ಲಿಸಲಿದ್ದಾರೆ.

ಕಾವ್ಯ ನಮನವನ್ನು ಆರ್‌.ಜಿ. ಹಳ್ಳಿ ನಾಗರಾಜ್‌, ಡಾ. ಮಮತ ಜಿ. ಸಾಗರ್‌, ಸಿ.ಕೆ. ಗುಂಡಣ್ಣ, ಶಶಿಧರ ಭಾರಿಘಾಟ್‌, ಮಲ್ಲಿಕಾರ್ಜುನ ಮಹಾಮನೆ ಅವರು ಸಲ್ಲಿಸಲಿದ್ದಾರೆ.

ಆನ್‌ಲೈನ್‌ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು

ಝೂಮ್‌ ಸಭೆಯ ಲಿಂಕ್‌ ವಿಳಾಸ

https://us02web.zoom.us/j/81563923285?pwd=bXduZ1hlVEVlZ1FjRlZ6L2FFU2JVQT09

ಸಭೆಯ ಲಾಗಿನ್‌ ಐಡಿ: 815 6392 3285

ಪಾಸ್‌ವರ್ಡ್‌ : 2021

ಅಲ್ಲದೆ, ಶರಣ ಸಾಹಿತ್ಯ ಪರಿಷತ್ ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌‌ ನಲ್ಲಿಯೂ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದಾಗಿದೆ. ಎಂದು ಕೆ.ವಿ. ನಾಗರಾಜಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *