ನಾಟಕ ಬೆಂಗ್ಳೂರು-23: ಹದಿನೈದನೇ ವರ್ಷದ ರಂಗ ಸಂಭ್ರಮ

ಪ್ರತಿವರ್ಷ ಹವ್ಯಾಸಿ ರಂಗತಂಡಗಳು ಸೇರಿಕೊಂಡು ತಮ್ಮದೇ ಹೊಸ ನಾಟಕಗಳನ್ನು ಪ್ರದರ್ಶನದ ವೇದಿಕೆಯಾಗಿ ರೂಪುಗೊಂಡಿರುವುದು ʻನಾಟಕ ಬೆಂಗ್ಳೂರುʼ. ಈ ಮೂಲಕ ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನೀಡುವ ಮೂಲಕ ರಂಗಭೂಮಿ ಸಂಭ್ರಮಕ್ಕೆ ವೇದಿಕೆ ಸಿದ್ದಗೊಂಡಿದೆ.

ಕಳೆದ 14 ವರ್ಷಗಳು ನಾಟಕಗಳು ಪ್ರದರ್ಶನ ನಡೆದಿದ್ದು, ಈ ಬಾರಿ 15ನೇ ವರ್ಷದ ರಂಗಪ್ರಯೋಗಗಳು ಪ್ರದರ್ಶನವಾಗುತ್ತಿವೆ. ಹವ್ಯಾಸಿ ತಂಡಗಳು ತಮ್ಮ ತಂಡದ ಮೂಲಕ ಹೊಸ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಂದು ನಾಟಕಗಳು ಸಾಕಷ್ಟು ವರ್ಷಗಳ ಹಿಂದೆ ಪ್ರಯೋಗ ಕಂಡಿದ್ದರೂ, ಈ ಬಾರಿ ಪ್ರದರ್ಶನ ನೀಡುತ್ತಿರುವ ತಂಡಕ್ಕೆ ಈ ನಾಟಕಗಳು ಹೊಸ ಪ್ರಯೋಗವಾಗಿದೆ.

ರಂಗ ಪ್ರದರ್ಶನಕ್ಕೂ ಮುನ್ನ ರಂಗತಾಲೀಮ ಹಮ್ಮಿಕೊಂಡು ಸಿದ್ದಮಾಡಿಕೊಳ್ಳುವ ರಂಗತಂಡಗಳು ತಮ್ಮ ಪ್ರದರ್ಶನವನ್ನು ನೀಡಲಿದೆ.

ಈ ಬಾರಿ ನಾಟಕ ಬೆಂಗ್ಳೂರು 2022ರ ಡಿಸೆಂಬರ್‌ 05 ರಿಂದ 08 ಹಾಗೂ 12 ರಿಂದ 18ರವರೆಗೆ, 2023ರ ಜನವರಿ 05ರಿಂದ 14ರವರೆಗೆ ಸರಿಸುಮಾರು ಇಪ್ಪತ್ತೊಂದು ದಿನಗಳ ನಾಟಕ ಪ್ರದರ್ಶನಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ವೇದಿಕೆ ಸಜ್ಜಾಗಿದೆ. ನಾಟಕ ಪ್ರದರ್ಶನ ಪ್ರತಿದಿನ ಸಂಜೆ 7.00 ಗಂಟೆಗೆ ಆರಂಭವಾಗಲಿದೆ. ಪ್ರವೇಶ ದರ ರೂ. 100 ಇದೆ.

ಉದ್ಘಾಟನಾ ಸಮಾರಂಭ:

ಡಿಸೆಂಬರ್‌ 05ರ ಸಂಜೆ 6.15ಕ್ಕೆ ನಾಟಕ ಬೆಂಗ್ಳೂರು ಉದ್ಘಾಟನೆಗೊಳ್ಳಲಿದೆ. ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ ರಾಯಪುರ ಅವರು ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ರಂಗಗೌರವ ಸಲ್ಲಿಸಲಾಗುತ್ತಿದೆ. ರಂಗಕರ್ಮಿಗಳಾದ ಅಬ್ಬೂರು ಜಯತೀರ್ಥ, ಎನ್‌.ಕೆ. ರಾಮಕೃಷ್ಣ, ಪುರುಷೋತ್ತಮ ತಳವಾಟ, ರಾಜಗುರು ಹೊಸಕೊಟೆ, ಜಾನಪದ ಕಲಾವಿದರಾದ ಗರ್ತಿಕೆರೆ ರಾಘಣ್ಣ, ಮರೆಪ್ಪ ಚೆನ್ನಣ್ಣನವರ್‌, ಲಕ್ಷ್ಮೀದೇವಮ್ಮ, ಗೊಂಬೆಯಾಟ ಕಲಾವಿದ ಎಸ್‌.ರಾವೇಂದ್ರ ಅವರಿಗೆ ರಂಗಗೌರವ ಸಲ್ಲಿಸಲಾಗುತ್ತಿದೆ.

ಮುಖ್ಯ ಅತಿಥಿಗಳಾಗಿ, ಮುಖ್ಯಮಂತ್ರಿ ಚಂದ್ರು, ಜೆ. ಲೋಕೇಶ್‌, ಸಿ.ಕೆ.ಗುಂಡಣ್ಣ, ಕೆ.ವಿ.ನಾಗರಾಜಮೂರ್ತಿ, ಬಿ.ವಿ.ರಾಜಾರಾಮ್‌ ಉಪಸ್ಥಿತರಿರುವರು.

ಸಂಜೆ 7.15ಕ್ಕೆ ಎಂ.ಎನ್‌.ಸುರೇಶ್‌ ನಿರ್ದೇಶನದ ಕೃಷ್ಣೇ ಗೌಡರ ಆನೆ ನಾಟಕ ಪ್ರದರ್ಶನವಾಗುವ ಮೂಲಕ ನಾಟಕ ಬೆಂಗ್ಳೂರು ಚಾಲನೆಗೊಳ್ಳಲಿದೆ.

ನಾಟಕ ಪ್ರದರ್ಶನದ ವಿವರಗಳು

ಡಿಸೆಂಬರ್‌ 05 : ಸಾಫಲ್ಯ ಅಭಿನಯನದ ʻಕೃಷ್ಣೇಗೌಡರ ಆನೆʼ
ರಚನೆ : ಪೂರ್ಣಚಂದ್ರ ತೇಜಸ್ವಿ, ನಿರ್ದೆಶನ : ಎಂ.ಎನ್.‌ ಸುರೇಶ್‌

ಡಿಸೆಂಬರ್‌ 06: ಬೆಂಗಳೂರು ಥಿಯೇಟರ್‌ ಅನ್ಸಂಬಲ್‌ ಅಭಿನಯನದ ʻಚೆಕಾವ್‌ ಟು ಶಾಂಪೆನ್‌ʼ
ಮೂಲ: ಆಂಟನ್‌ ಚೆಕಾವ್‌, ಕನ್ನಡಕ್ಕೆ: ಡಾ. ಹೇಮಾ ಪಟ್ಟಣಶೆಟ್ಟಿ, ನಿರ್ದೇಶನ: ಅಭಿಮನ್ಯು ಭೂಪತಿ

ಡಿಸೆಂಬರ್‌ 07 : ಆಹಾರ್ಯ ಅಭಿನಯನದ ʻಪಂಜರ ಶಾಲೆʼ
ಮೂಲ: ರವಿಂದ್ರನಾಥ ಠಾಗೋರ್‌, ಕನ್ನಡಕ್ಕೆ: ಬಿ.ವಿ.ಕಾರಂತ, ನಿರ್ದೇಶನ : ರಾಮಕೃಷ್ಣ ಬೆಳ್ತೂರು

ಡಿಸೆಂಬರ್‌ 08 : ಅನೇಕ ಅಭಿನಯನದ ʻನವಿಲು ಪುರಾಣʼ
ಮೂಲ: ಇಂತಿಜಾರ್‌ ಹುಸೇನ್‌, ಕನ್ನಡಕ್ಕೆ ಕೆ ಇ ರಾಧಾಕೃಷ್ಣ, ನಿರ್ದೇಶನ: ಸುರೇಶ್‌ ಆನಗಳ್ಳಿ

ಡಿಸೆಂಬರ್‌ 12 : ಥೇಮಾ ಅಭಿನಯನದ ʻಕತ್ತಲಲ್ಲಿ ಕರಡಿಗೆʼ
ರಚನೆ : ರಾಜೇಂದ್ರ ಕಾರಂತ, ನಿರ್ದೇಶನ: ಡಾ ಎಸ್‌ ವಿ ಸುಷ್ಮಾ

ಡಿಸೆಂಬರ್‌ 13 : ಅಭಿನಯ ತರಂಗ ಅಭಿನಯನದ ʻಎ ಡಾಲ್ಸ್‌ ಹೌಸ್‌ʼ
ಮೂಲ: ಹೆನ್ರಿಕ್‌ ಇಬ್ಸನ್‌, ಕನ್ನಡಕ್ಕೆ ಮೀರಾ ಮೂರ್ತಿ, ನಿರ್ದೇಶನ: ಪ್ರವೀಣ್‌ ಕುಮಾರ್‌ ಎಡಮಂಗಲ

ಡಿಸೆಂಬರ್‌ 14 : ಅದಮ್ಯ ಅಭಿನಯನದ ʻಗುಣಮುಖʼ
ರಚನೆ : ಪಿ. ಲಂಕೇಶ್‌, ನಿರ್ದೇಶನ: ಛಾಯಾ ಭಾರ್ಗವಿ

ಡಿಸೆಂಬರ್‌ 15 : ಬೆಂಗಳೂರು ಎಶಿಯನ್‌ ಥಿಯೇಟರ್‌ ಅಭಿನಯನದ ʻಮಹಾಪ್ರಸ್ಥಾನʼ
ಮೂಲ : ಅಫ್ಸರ್‌ ಹುಸೇನ್‌ ಕನ್ನಡಕ್ಕೆ: ಸೂರ್ಯಕಾಂತ ಗುಣಕಿಮಠ್‌, ನಿರ್ದೇಶನ: ಸಿದ್ದರಾಮ ಕೊಪ್ಪರ್‌

ಡಿಸೆಂಬರ್‌ 16 : ನವ ಕ್ಷಿತಿಜ ಅಭಿನಯನದ ʻನರಿ ಕಕ್ಕೆ ಕಾಯಿ ಕಥೆʼ
ರಚನೆ: ಪ್ರಧ್ಯುಮ್ನ ಎ ಕೆ ನಿರ್ದೇಶನ: ಸುಧನ್ವ ಎ ಕೆ

ಡಿಸೆಂಬರ್‌ 17 : ಸಮಾಜಮುಖಿ ರಂಗ ಬಳಗ ಅಭಿನಯನದ ʻಬಿಳಿಅಂಗಿ-ಓವರ್‌ ಕೋಟುʼ
ಮೂಲ: ಕೆ ವಿ ತಿರುಮಲೇಶ್‌ / ನಿಕೊಲಾಯ್‌ ಗೊಗೊಲ್‌, ರಂಗರೂಪ ಮತ್ತು ನಿರ್ದೇಶನ : ನಿರಂಜನ್‌ ಖಾಲಿಕೊಡ

ಡಿಸೆಂಬರ್‌ 18 : ಪ್ರಯೋಗ ರಂಗ ಅಭಿನಯನದ ʻಮೋಳಿಗೆ ಮಾರಯ್ಯʼ
ರಚನೆ : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನಿರ್ದೇಶನ: ಮಾಲತೇಶ ಬಡಿಗೇರ

Donate Janashakthi Media

Leave a Reply

Your email address will not be published. Required fields are marked *