ನರೇಗಾ ಕೂಲಿಯಲ್ಲೂ ಮೋಸ: ದಿನಕ್ಕೆ 100 ರೂ. ಕೊಡುತ್ತಿದ್ದಾರೆಂದು ಕಾರ್ಮಿಕರಿಂದ ಪ್ರತಿಭಟನೆ

ಬೆಳಗಾವಿ: ಜಿಲ್ಲೆಯ ಕಡೋಲಿ ಗ್ರಾಮದ ಹತ್ತಿರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂಪಾಯಿ ವೇತನ ನೀಡಲಾಗುತ್ತಿದೆ ಎಂದು ಕಾರ್ಮಿಕರು ತಮಗಾಗುತ್ತಿರುವ ಮೋಸದ ಬಗ್ಗೆ ವಿವರಿಸಿದ್ದಾರೆ.

ನರೇಗಾ ಯೋಜನೆಯಡಿ ಸರ್ಕಾರದ ನಿಗದಿ ಮಾಡಿರುವುದು ದಿನಕ್ಕೆ 289 ರೂಪಾಯಿ ವೇತನವನ್ನು ನೀಡಬೇಕೆಂದು ಆದರೆ ಅದಕ್ಕಿಂತ ಕಡಿಮೆ ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಕಚೇರಿ ಎದುರು ನಿನ್ನೆ ಪ್ರತಿಭಟನೆ ನಡೆಸಿದ್ದಾರೆ. ಕಡೋಲಿ ಗ್ರಾಮ ಪಂಚಾಯತ್‌ನಲ್ಲಿ 2,000 ಕ್ಕೂ ಹೆಚ್ಚು ಸಕ್ರಿಯ ಕಾರ್ಮಿಕರು ನರೇಗಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕೆರೆ ಅಭಿವೃದ್ಧಿ, ಕಾಲುವೆಗಳು, ನದಿಗಳು ಮತ್ತು ಸರೋವರಗಳ ನಿರ್ಜಲೀಕರಣ, ಸ್ವಚ್ಛಗೊಳಿಸುವಿಕೆ ಮತ್ತು ಹೊಸ ಕಂದಕಗಳನ್ನು ರಚಿಸುವುದು, ಅರಣ್ಯ ಪ್ರದೇಶಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ.

ಇದನ್ನು ಓದಿ: ಕೃಷಿ ಕಾರ್ಮಿಕರ ಮತ್ತು ನರೇಗಾ ಕೆಲಸಗಾರರ ಕನಿಷ್ಠ ವೇತನದಲ್ಲಿ ಯಾಕೆ ಈ ವ್ಯತ್ಯಾಸ?

ಕಾರ್ಮಿಕರ ಪ್ರಕಾರ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದರೂ ಅವರಲ್ಲಿ ಹಲವರಿಗೆ ದಿನಕ್ಕೆ 100 ರೂಪಾಯಿ ವೇತನ ನೀಡಲಾಗಿದೆ. ತಮಗೆ ನೀಡಲಾಗುತ್ತಿರುವ ವೇತನ ಸಾಲುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.

ನಿಗದಿತ ಕೂಲಿಯನ್ನು ಸರ್ಕಾರ ನಿಗದಿ ಮಾಡಿದರೂ ಸಹ ನಿಗದಿತ ಕೂಲಿಯೂ ಸಿಗುತ್ತಿಲ್ಲ ಎಂದು ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ ಪ್ರತಿಯೊಬ್ಬ ಕೆಲಸಗಾರರ ಕೆಲಸಕ್ಕೆ ಸರಿಯಾಗಿ ವೇತನ ನಿಗದಿ ಮಾಡಲಾಗಿದೆ ಎಂದಷ್ಟೇ ಹೇಳುತ್ತಿದ್ದಾರೆ. ಆದರೆ ಗ್ರಾಮಸ್ಥರು ತಮಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದಿದ್ದಾರೆ.

ಕಡೋಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಲ್ಪ ಸಮಯದವರೆಗೆ ಯಾವುದೇ ಉದ್ಯೋಗಗಳು ಇರಲಿಲ್ಲ, ಈ ಕಾರ್ಮಿಕರು ಉದ್ಯೋಗಗಳಿಗಾಗಿ 20 ಕಿಮೀ ದೂರ ಹೋಗಬೇಕಾಗಿತ್ತು. ಕಾರ್ಮಿಕರಿಗೆ ದಿನನಿತ್ಯದ ವೇತನವಾಗಿ 275 ರೂಪಾಯಿ,  ಉದ್ಯೋಗ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ 100 ದಿನಗಳ ಕೆಲಸ ನೀಡಲಾಗುತ್ತದೆ. ಆದರೆ, ಕೆಲವು ಪಂಚಾಯಿತಿ ಅಧಿಕಾರಿಗಳು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವೇತನವನ್ನು ಕಡಿತಗೊಳಿಸುತ್ತಿದ್ದಾರೆ.

ಇದನ್ನು ಓದಿ: ಮನರೇಗ ಸಲಹಾ ಆದೇಶದ ಬಗ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

ಪಂಚಾಯತ್ ಅಧಿಕಾರಿಗಳು ಮತ್ತು ಕೆಲಸದ ಮೇಲ್ವಿಚಾರಣೆ ಮಾಡಿದ ಎಂಜಿನಿಯರ್ ಕಡಿಮೆ ವೇತನ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು, ಕಾರ್ಮಿಕರು ಕೆಲಸದ ಪ್ರಮಾಣವನ್ನು ಪೂರ್ಣಗೊಳಿಸಿಲ್ಲ. ಆದರೆ, ಕೆಲಸಗಳು ನಡೆಯುತ್ತಿರುವಾಗ ಎಂಜಿನಿಯರ್ ಮತ್ತು ಪಂಚಾಯತ್ ಅಧಿಕಾರಿಗಳು ಕೆಲಸದ ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಕಾರ್ಮಿಕರು ಆರೋಪಿಸುತ್ತಾರೆ.

ನಾವು ಯಾವುದೇ ಕೆಲಸವನ್ನು ಮಧ್ಯದಲ್ಲಿ ಬಿಡಲಿಲ್ಲ. ನಮಗೆ ವಹಿಸಿದ ಕೆಲಸ ಪೂರ್ಣಗೊಳಿಸಿದ್ದೇವೆ. ಈ ಬಾರಿ ಯಾವುದೇ ಕಾರಣವಿಲ್ಲದೆ ಅಧಿಕಾರಿಗಳು ನಮ್ಮ ವೇತನವನ್ನು ಕಡಿತಗೊಳಿಸಿದ್ದಾರೆ. ತಮ್ಮ ತಪ್ಪಿನ ಅರಿವಾದ ನಂತರ, ಇಂಜಿನಿಯರ್ ಈಗ ನಮಗೆ ಸಂಪೂರ್ಣ ವೇತನದ ಭರವಸೆ ನೀಡಿದ್ದಾರೆ. ಅಲ್ಲದೆ, ಮಾಡಿದ ಕೆಲಸಗಳನ್ನು ಪರಿಶೀಲಿಸುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿರುತ್ತಾರೆ.

ಈ ಬಗ್ಗೆ ಮಾಧ್ಯಮಗಳು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ದರ್ಶನ್ ಎಚ್ ವಿ ಅವರನ್ನು ಹಲವು ಸಂಪರ್ಕಿಸಲು ಪ್ರಯತ್ನಿಸಿದರೂ ಸರಿಯಾದ ಉತ್ತರ ಸಿಗಲಿಲ್ಲ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *