ಬಣ್ಣ ಬದಲಿಸಿದ ನಮ್ಮ ಮೆಟ್ರೋ ರೈಲುಗಳು; ಬಿಎಂಟಿಸಿ ಬಸ್ ಮಾದರಿಯಲ್ಲಿಯೇ ಮೈತುಂಬಾ ಜಾಹೀರಾತು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳ ಮೇಲೆಲ್ಲಾ ಜಾಹೀರಾತು ಪ್ರದರ್ಶನ ಮಾಡಿ ಆದಾಯ ಗಳಿಸುತ್ತಿದೆ. ಇದೇ ಮಾರ್ಗವನ್ನು ಅನುಸರಿಸಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ನಿಗಮ ನಿ. (ಬಿಎಂಆರ್‌ಸಿಎಲ್) ಕೂಡ ನಮ್ಮ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ಅಂಟಿಸಿ ಸಂಚಾರ ಮಾಡಲು ಮುಂದಾಗಿದೆ. ಇಂದಿನಿಂದ ನಮ್ಮ ಮೆಟ್ರೋ ಹಲವು ರೈಲುಗಳ ಬಣ್ಣವೇ ಬದಲಾಗಿದ್ದು, ಸಂಪೂರ್ಣ ಜಾಹೀರಾತುಮಯ ಆಗಿವೆ. ಮೆಟ್ರೋ

ಬೆಂಗಳೂರು ಮೆಟ್ರೋ ರೈಲುಗಳತ್ತ ಪ್ರಯಾಣಿಕರಷ್ಟೇ ಅಲ್ಲ, ಈಗ ಜಾಹಿರಾತುದಾರರ ದೃಷ್ಟಿಯೂ ಹರಿದಿದೆ! ಬೃಹತ್ ಮಟ್ಟದ ಜಾಹಿರಾತು ಯೋಜನೆಯೊಂದಿಗೆ ನಮ್ಮ ಮೆಟ್ರೋ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ದಾರಿ ಹಿಡಿದಿದೆ. ಇಂದು (ಜೂನ್ 10) ರಿಂದ ‘ನಮ್ಮ ಮೆಟ್ರೋ’ಗೆ ಹೊಸ ಮುಖವೊದಗಿದೆ. ಪರ್ಪಲ್ ಲೈನ್‌ನ 33 ರೈಲುಗಳು ಮತ್ತು ಗ್ರೀನ್ ಲೈನ್‌ನ 24 ರೈಲುಗಳಿಗೆ ಬಣ್ಣ ಬಣ್ಣದ ಜಾಹಿರಾತುಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ : ಬೆಂಗಳೂರು| ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರ ಒದ್ದಾಟ

ಈ ಜಾಹಿರಾತು ಜೋಡಣೆಗೆ ಸಂಬಂಧಿಸಿದಂತೆ ಬಿಎಂಆಆರ್‌ಸಿಎಲ್ ಮುದ್ರ ಅವೆಂಚರ್ ಮತ್ತು ಲೋಕೇಶ್ ಔಟ್‌ಡೋರ್ ಸಂಸ್ಥೆಗಳ ಜೊತೆ ಒಟ್ಟು 7 ವರ್ಷಗಳ ಅವಧಿಯ ಮ್ಯೂಚುವಲ್ ಒಪ್ಪಂದ (MOE) ಮಾಡಿಕೊಂಡಿದೆ. ಪರ್ಪಲ್ ಲೈನ್‌ಗೆ ₹14 ಕೋಟಿ ಹಾಗೂ ಗ್ರೀನ್ ಲೈನ್‌ಗೆ ₹11 ಕೋಟಿಯ ಟೆಂಡರ್ ನೀಡಲಾಗಿದೆ. ಎರಡೂ ಲೈನ್‌ಗಳ ಒಟ್ಟು ಜಾಹಿರಾತು ಮೌಲ್ಯ ₹25 ಕೋಟಿಗೆ ತಲುಪಿದ್ದು, ಇದು ಬಿಎಂಆರ್‌ಸಿಎಲ್‌ಗೆ ದೊಡ್ಡ ಮಟ್ಟದ ಆದಾಯವನ್ನೇ ತಂದೆಕೊಡುವ ನಿರೀಕ್ಷೆ ಇದೆ.

ಇದನ್ನೂ ನೋಡಿ : ನಿರಂಜನ -100| ಬುದ್ಧಿ ಭಾವ ಬದುಕು – ಬಂಜಗೆರೆ ಜಯಪ್ರಕಾಶ Janashakthi Media   ಮೆಟ್ರೋ

 

Donate Janashakthi Media

Leave a Reply

Your email address will not be published. Required fields are marked *