ನಮ್ಮ ಧೋರಣೆ ನಿಮ್ಮ ಅಗತ್ಯಗಳಿಗೆ ಬೆರೆತುಕೊಳ್ಳುತ್ತದೆ

  • ಶ್ರೀಮಂತ ವಿದೇಶೀ ಹೂಡಿಕೆದಾರರಿಗೆ ಪ್ರಧಾನಿ ಭರವಸೆ

ಇದು ನವಂಬರ್ 5ರಂದು Virtual Global Investors Roundtable (VGIR) 2020, ಅಂದರೆ ಅಂತರ್ಜಾಲದಲ್ಲಿ ಜಾಗತಿಕ ಹೂಡಿಕೆದಾರರ ದುಂಡುಮೇಜಿನ ಸಭೆಯಲ್ಲಿ ಪ್ರಧಾನ ಮತ್ರಿಗಳು ನೀಡಿದ ಭರವಸೆ. ಜಗತ್ತಿನ ಒಟ್ಟು 6 ಟ್ರಿಲಿಯನ್ ಡಾಲರ್ (ಸುಮಾರು 4. 5 ಕೋಟಿ ಕೋಟಿ ರೂ.ಗಳು) ಆಸ್ತಿಗಳ ವ್ಯವಹಾರದಲ್ಲಿರುವ ಜಗತ್ತಿನ 20 ಅತ್ಯಂತ ಶ್ರೀಮಂತ ಹೂಡಿಕೆದಾರರು ಈ ಸಭೆಯಲ್ಲಿ ಭಾಗವಹಿಸಿದರು. ಪ್ರಧಾನ ಮಂತ್ರಿಗಳು ಬಿಹಾರದಲ್ಲಿ ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಈ ಸಭೆಯಲ್ಲಿ ಭಾಗವಹಿಸಿದರು. ಜತೆಗೆ ಮುಕೇಶ್ ಅಂಬಾನಿ, ರತನ್ ಟಾಟಾ, ದಿಲಿಪ್ ಸಾಂಘವಿ, ಉದಯ್ ಕೊಟಕ್, ದೀಪಕ್ ಪಾರೇಖ್ ಮತ್ತು ನಂದನ್ ನೀಲೆಕಣಿಯಂತಹ ದೇಶದ ಕಾರ್ಪೊರೇಟ್ ರಂಗದ ಅತಿರಥ, ಮಹಾರಥರೂ ಇದ್ದರು.

ನಮ್ಮಲ್ಲಿ ಕಾರ್ಪೊರೇಟ್ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ, ಹೊಸ ಕಾರ್ಮಿಕ ಸಂಹಿತೆಗಳನ್ನು ತಂದಿದ್ದೇವೆ, ವಿವಿಧ ವಲಯಗಳಲ್ಲಿ ವಿವಿಧ ರೀತಿಗಳ ಉತ್ಪಾದನಾ ಉತ್ತೇಜನೆಗಳನ್ನು ಪ್ರಕಟಿಸಿದ್ದೇವೆ, ಹೂಡಿಕೆದಾರರಿಗೆ ಅತ್ಯುತ್ತಮ ಮತ್ತು ಅತಿ ಸುರಕ್ಷಿತ ದೀರ್ಘಕಾಲದ ಪ್ರತಿಫಲಗಳು ಬೇಕು ಎಂದು ನಮಗೆ ಗೊತ್ತು. “ಇಂತಹ ಒಂದು ಧೋರಣೆ ನಿಮ್ಮ ಅಗತ್ಯಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ” ಎಂದು ಪ್ರಧಾನಿಗಳು ಹೇಳಿದರು. ( ಸುಭೋದ್ ವರ್ಮ, ನ್ಯೂಸ್‌ಕ್ಲಿಕ್, ನವಂಬರ್ 15)

ಅಂದರೆ ಇವೆಲ್ಲ ಕ್ರಮಗಳು ಜಗತ್ತಿನ ಅತ್ಯಂತ ಶ್ರೀಮಂತ ಹೂಡಿಕೆದಾರರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಎಂದೇ ಅರ್ಥವಲ್ಲವೇ?

ಇದೇ ಪ್ರಧಾನ ಮಂತ್ರಿಗಳು ಸಂಸತ್ತು ಪ್ರತಿಪಕ್ಷಗಳ ಸದಸ್ಯರ ಗೈರು ಹಾಜರಿಯಲ್ಲಿ ಕಾರ್ಮಿಕ ಆಂದೋಲನ ಬಹುವಾಗಿ ವಿರೋಧಿಸುತ್ತಿದ್ದ ಮೂರು ಕಾರ್ಮಿಕ ಸಂಹಿತೆಗಳನ್ನು ಪಾಸು ಮಾಡಿಸಿಕೊಂಡ ನಂತರ ಇವು ಕಾರ್ಮಿಕರ ಒಳಿತಿಗಾಗಿ, ಇವು ಎಲ್ಲರಿಗೂ ಕನಿಷ್ಟ ವೇತನ, ಕೆಲಸದ ಸ್ಥಳಗಳಲ್ಲಿ ಸುರಕ್ಷೆ ಇತ್ಯಾದಿಗಳನ್ನು ಖಾತ್ರಿ ಪಡಿಸುತ್ತದೆ ಎಂದಿದ್ದರು. ಇದನ್ನು ಉಳಿದ ಕಾರ್ಮಿಕ ಸಂಘಟನೆಗಳಂತೂ ನಂಬಿಲ್ಲ, ಸ್ವತಃ ಸಂಘ ಪರಿವಾರಕ್ಕೆ ಸೇರಿದ ಕಾರ್ಮಿಕ ಸಂಘಟನೆಯೂ ನಂಬಿಲ್ಲ. ಅದೇ ರೀತಿ ಮೂರು ಕೃಷಿ ಮಸೂದೆಗಳು ರೈತರ ಹಿತದೃಷ್ಟಿಯಿಂದ ಎಂಬುದನ್ನು ಯಾವ ರೈತ ಸಂಘಟನೆಯೂ ನಂಬಿಲ್ಲ. ಸಂಘ ಪರಿವಾರದ ಸಂಘಟನೆಯೂ ಹೊರತಲ್ಲ.

ಜಗತ್ತಿನ ಅತ್ಯಂತ ಶ್ರೀಮಂತ ಹೂಡಿಕೆದಾರರಿಗೆ ನೀಡಿದ ಭರವಸೆ ದೇಶದ ಕಾರ್ಮಿಕರ ಮತ್ತು ರೈತರ ಈ ಅಪನಂಬಿಕೆಯನ್ನು ಸಾಬೀತು ಮಾಡಿದೆ. ನಿಜವಾಗಿಯೂ ಮೋದಿ ಸರಕಾರದ ಧೋರಣೆ ಹೂಡಿಕೆದಾರರ ಅಗತ್ಯಗಳಿಗೆ ಚೆನ್ನಾಗಿಯೇ ಬೆರೆತುಕೊಳ್ಳುತ್ತದೆ. ಹೆಚ್ಚು ತೆರಿಗೆ ತೆರಬೇಕಾಗಿಲ್ಲ, ಮಾಲಕರ ಪರವಾಗಿರುವ ಹೊಸ ಕಾರ್ಮಿಕ ಸಂಹಿತೆಗಳಿಂದಾಗಿ ಕಾರ್ಮಿಕರಿಂದ ಏನೂ ತೊಂದರೆ ಮಾಡುವಂತಿಲ್ಲ, ನಮ್ಮ ಕೃಷಿ ವ್ಯವಸ್ಥೆಯನ್ನೂ ಸಾಗುವಳಿಯಿಂದ ಮಾರಾಟದ ವರೆಗೂ ಕಾರ್ಪೊರೇಟ್ ಹೂಡಿಕೆಗಳಿಗೆ ತೆರೆಯಲಾಗಿದೆ ಇನ್ನೇನು ಬೇಕು? ಎಂದು ಈ ಅರ್ಥಶಾಸ್ತ್ರಜ್ಞರು ಮಾರ್ಮಿಕವಾಗಿ ಹೇಳಿದ್ದಾರೆ.

ನಿನ್ನ ಬೆಳೆಯನ್ನು ಕೊಳ್ಳಲು ಎಷ್ಟೊಂದು ಕಂಪನಿಗಳು! ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್

ಆದರೆ ದೇಶದ ಪ್ರಧಾನ ಮಂತ್ರಿಗಳು ದೇಶದ ಜನರಿಗೆ ‘ಸ್ವಾವಲಂಬನೆಯ ಮಾತಾಡುತ್ತ, ವಿದೇಶಿ ಹೂಡಿಕೆದಾರರಿಗೆ ಖಾತ್ರಿಪಡಿಸಬೆಕೆಂದಿರುವ ಸೌಲಭ್ಯಗಳು ಬಹುಪಾಲು ಭಾರತೀಯರಿಗೆ ಸಾವು-ಬದುಕಿನ ವಿಷಯಗಳು ಎಂಬುದು ಈ ಹೂಡಿಕೆದಾರರಿಗೆ ಗೊತ್ತಿದೆಯೇ , ಅದ್ದರಿಂದಲೇ ಕಾರ್ಮಿಕರು ನವಂಬರ್‍ 26ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸುತ್ತಿದ್ದಾರೆ, ಅದೇ ಸಂದರ್ಭದಲ್ಲಿ ರೈತರು ದೇಶಾದ್ಯಂತ ಗ್ರಾಮೀಣ ಹರತಾಳ ನಡೆಸುತ್ತಾರೆ, ದಿಲ್ಲಿಯ ಸುತ್ತಮುತ್ತಲಿನ ರಾಜ್ಯಗಳ ರೈತರು ನವಂಬರ್‍ 26 ಮತ್ತು 27ರಂದು ದಿಲ್ಲಿ ಚಲೋದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಎಂದು ಅವರಿಗೆ ತಿಳಿದಿದೆಯೇ  ಎಂದು ಮುಂದುವರೆದು ಅವರು ಕೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *