ಬೆಂಗಳೂರು| “ನಮ್ಮ ಕ್ಲಿನಿಕ್‌” ವೈದ್ಯರ ವೇತನ 75 ಸಾವಿರ ರೂ.ಗೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿರುವ ದುರ್ಬಲ ವರ್ಗದವರಿಗೆಒ ಉಚಿತ ಆರೋಗ್ಯ ಸೇವೆ ದಗಿಸಲು ಆರಂಭಿಸಿರುವ “ನಮ್ಮ ಕ್ಲಿನಿಕ್‌” ಗಳ ವೈದ್ಯಾಧಿಕಾರಿಗಳು, ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಇದನ್ನು ಮನಗಂಡಿರುವ ರಾಜ್ಯ ಸರಕಾರವು “ನಮ್ಮ ಕ್ಲಿನಿಕ್‌” ವೈದ್ಯರ ವೇತನವನ್ನು 75 ಸಾವಿರ ರೂ.ಗೆ ಏರಿಸಲು ಚಿಂತಿಸಿದ್ದು, ಶೀಘ್ರದಲ್ಲೇ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಬೆಂಗಳೂರು

ರಾಜ್ಯದಲ್ಲಿ 646 “ನಮ್ಮ ಕ್ಲಿನಿಕ್‌’ ಗಳಿವೆ. ಆದರೆ ಇಲ್ಲಿ ವೈದ್ಯರ ಸಹಿತ ಸುಮಾರು ಶೇ. 30 ಸಿಬಂದಿ ಕೊರತೆ ಇದೆ. ಆಕರ್ಷಕ ವೇತನ ಇಲ್ಲದಿರುವುದರಿಂದ ವೈದ್ಯರು ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡ ಸರಕಾರವು ಈಗ 15 ಸಾವಿರ ರೂ. ವೇತನ ಏರಿ ಸಲು ಮುಂದಾಗಿದೆ. ಮುಂದಿನ ವಾರ ದೊಳಗೆ ಈ ಕುರಿತು ಆದೇಶ ಹೊರ ಡಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ನವದೆಹಲಿ| ಬಿ.ವಿ.ನಾಗರತ್ನ ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನ

15 ಸಾವಿರ ರೂ.ಗಳಿಗೆ ಹೆಚ್ಚಳ

ಅನಂತರ “ನಮ್ಮ ಕ್ಲಿನಿಕ್‌” ನಲ್ಲಿ ಈಗಾಗಲೇ ಇರುವ ಹಾಗೂ ಹೊಸದಾಗಿ ನೇಮಕಗೊಳ್ಳುವ ಎಂಬಿಬಿಎಸ್‌ ವೈದ್ಯರ ವೇತನವು 75 ಸಾವಿರ ರೂ. ಆಗಲಿದೆ. ಜತೆಗೆ “ನಮ್ಮ ಕ್ಲಿನಿಕ್‌’ಗಳಲ್ಲಿ ಖಾಲಿ ವೈದ್ಯ ಹುದ್ದೆಗಳನ್ನು ತಿಂಗಳೊಳಗೆ ಭರ್ತಿ ಮಾಡಲು ರಾಜ್ಯ ಸರಕಾರವು ಮುಂದಾಗಿದೆ.

“ನಮ್ಮ ಕ್ಲಿನಿಕ್‌” ವೈದ್ಯರಿಗೆ 48 ಸಾವಿರ ರೂ. ವೇತನವಿತ್ತು. ಬಳಿಕ 60 ಸಾವಿರ ರೂ.ಗೆ ಏರಿಸಲಾಗಿತ್ತು. ಈಗ ಕೇಂದ್ರ ಸರಕಾರದಿಂದ 75 ಸಾವಿರ ರೂ.ಗೆ ಏರಿಸಲು ಅನುಮತಿ ಸಿಕ್ಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ 159 | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೂರು ಸಿನಿಮಾಗಳತ್ತ ಒಂದು ನೋಟ

Donate Janashakthi Media

Leave a Reply

Your email address will not be published. Required fields are marked *