ನವದೆಹಲಿ: ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜನರು ಜಾಗೃತಿ ವಹಿಸುತ್ತಿಲ್ಲ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಈ ವಿಚಾರದ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅತಿ ಹೆಚ್ಚು ಅವಘಾತವಾಗುವ ರಾಜ್ಯದ ಹೆಸರನ್ನು ಬಹಿರಂಗಗೊಳಿಸಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿರುವ ಟಾಪ್ 4 ರಾಜ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 100ಕ್ಕೆ ಹೆಚ್ಚಿಸಲು ಪ್ರಸ್ತಾಪ; ವಿಮಾ ಕಾಯ್ದೆ ತಿದ್ದುಪಡಿಗಳು ಯಾರಿಗಾಗಿ?
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 1,78,000 ಜೀವಗಳು ಬಲಿಯಾಗುತ್ತಿವೆ ಮತ್ತು ಬಲಿಪರುಗಳಲ್ಲಿ ಶೇಕಡಾ 60 ರಷ್ಟು, 18-34 ವರ್ಷ ವಯಸ್ಸಿನವರು ಎಂದು ಹೇಳಿದರು. ಅಲ್ಲದ ಈ ವರ್ಷ ಉತ್ತರ ಪ್ರದೇಶದಲ್ಲಿ 23,652, ತಮಿಳುನಾಡು 18,347, ಮಹಾರಾಷ್ಟ್ರ 15,366, ಮಧ್ಯಪ್ರದೇಶ ಒಟ್ಟು 13,798 ಮಂದಿ ಅಮವಾತದಿಂದ ಜೀವ ಬಿಟ್ಟಿದ್ದಾರ ಎಂದು ಹೇಳಿದ್ದಾರೆ.
ಇದಲ್ಲದ, ದೆಹಲಿ 1,457 ಕ್ಕೂ ಹೆಚ್ಚು ಸಾವುಗಳೊಂದಿಗೆ ಹೆಚ್ಚು ಹಾನಿಗೊಳಗಾದ ನಗರವಾಗಿದೆ. ಕರ್ನಾಟಕದ ಬೆಂಗಳೂರು 915 ಸಾವುಗಳು ಮತ್ತು ಜೈಪುರ 850 ಸಾವುಗಳೊಂದಿಗೆ ನಂತರದ ಸ್ಕ್ಯಾನದಲ್ಲಿದೆ ಎಂದು ಗಡ್ಕರಿ ಉಲ್ಲೇಖಿಸಿದ್ದಾರೆ.
ಇದನ್ನೂ ನೋಡಿ: ವಿಎಚ್‌ಪಿ ಕಾರ್ಯಕ್ರಮದಲ್ಲಿ ಜಸ್ಟೀಸ್ ಭಾಗಿ | ಜಸ್ಟೀಸ್ ಯಾದವ್ ಮತ್ತು ವಿವಾದಾತ್ಮಕ ಹೇಳಿಕೆಗಳು Janashakthi Media