ಬೆಂಗಳೂರು: 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2017ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ.
ಏಪ್ರಿಲ್ 24ರ ಸಂಜೆ 6 ಗಂಟೆಗೆ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ 2017ನೇ ವರ್ಷದ ಆದರ್ಶ ಈಶ್ವರಪ್ಪ ಅವರ ಶುದ್ದಿ, ಕೋಡ್ಲು ರಾಮಕೃಷ್ಣ ಅವರ ಮಾರ್ಚ್ 24 ಮತ್ತು ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಕ್ರಮವಾಗಿ ಪ್ರಥಮ, ದ್ವಿತಿಯಾ, ತೃತಿಯ ಪ್ರಶಸ್ತಿಗಳು ಪಡೆದಿವೆ. 2017ನೇ ಸಾಲಿನ ಪ್ರಶಸ್ತಿಗಳೊಂದಿಗೆ, ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ಜಿ.ಎನ್.ಲಕ್ಷ್ಮೀಪತಿ, ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ನಿರ್ದೇಶಕಿ ಲಕ್ಷ್ಮಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಎಸ್.ನಾರಾಯಣ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಲ್ಲದೆ, ಇದೇ ಸಂದರ್ಭದಲ್ಲಿ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೆಬ್ಬಟ್ ರಾಮಕ್ಕ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ರಾಜಕುಮಾರ, ಅತ್ಯುತ್ತಮ ಮಕ್ಕಳ ಚಿತ್ರ ಎಳೆಯರು ನಾವು ಗೆಳೆಯರು, ಅತ್ಯುತ್ತಮ ನಟಿ ತಾರಾ ಅನುರಾಧ, ಅತ್ಯುತ್ತಮ ಪೋಷಕ ನಟಿ ರೇಖಾ, ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಗೆ ವಿ.ಹರಿಕೃಷ್ಣ ಆಯ್ಕೆಯಾಗಿದ್ದಾರೆ.
ಇನ್ನೂ ಅನೇಕ ವಿಭಾಗಗಳಲ್ಲಿ ಕಲಾವಿದರು ಆಯ್ಕೆಯಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.
ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಹೀಗಿವೆ;
ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ – ಅಯನ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ತುಳು ಭಾಷೆಯ ಸೋಫಿಯಾ
ತೀರ್ಪುಗಾರರ ವಿಶೇಷ ಪ್ರಶಸ್ತಿ – ಮಹಾಕಾವ್ಯ ಚಿತ್ರದ ನಟ ಶ್ರೀದರ್ಶನ್, ರಾಗಾ ಸಿನಿಮಾದ ನಟ ಮಿತ್ರ
ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣದ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)
ಅತ್ಯುತ್ತಮ ಕತೆ – ಹನುಮಂತ ಬಿ. ಹಾಲಿಗೇರಿ (ಕೆಂಗುಲಾಬಿ)
ಅತ್ಯುತ್ಯಮ ಚಿತ್ರಕಥೆ- ವೆಂಕಟ್ ಭಾರಧ್ವಾಜ್ (ಕೆಂಪಿರ್ವೆ)
ಅತ್ಯುತ್ಯಮ ಸಂಭಾಷಣೆ-ಎಸ್.ಜಿ.ಸಿದ್ದರಾಮಯ್ಯ (ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ-ಸಂತೋಶ್ ರೈ ಪತಾಜೆ (ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ (ರಾಜಕುಮಾರ)
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಮಫ್ತಿ)
ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್ (ರಾಮರಾಜ್ಯ)
ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಕಟಕ)
ಪ್ರತಿ ವರ್ಷವೂ ನಿಗದಿಯಂತೆ ಚಲನಚಿತ್ರ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದು ವಾಡಿಕೆ. ಆದರೆ, 2017ರಿಂದ ಈವರೆಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. 2017ರಲ್ಲಿ ಎರಡು ಬಾರಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರೂ, ನಾನಾ ಕಾರಣಗಳಿಂದಾಗಿ ನಿಗದಿಯಾದ ದಿನಾಂಕಗಳಂದು ಸಮಾರಂಭ ನಡೆಯಲಿಲ್ಲ.
2018 ನವೆಂಬರ್ 24 ರಂದು ಬೆಂಗಳೂರಿನಲ್ಲಿ 2017ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಮಂಡ್ಯದ ಬಳಿ ಬಸ್ಸೊಂದು ಕೆರೆಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡರು. ಜತೆಗೆ ಅಂದೇ ನಟ ಅಂಬರೀಶ್ ನಿಧನರಾದರು. ಹಾಗಾಗಿ ಪ್ರದಾನ ಸಮಾರಂಭ ನಡೆಯಲಿಲ್ಲ. ನಂತರ ಕೊರೊನಾ ಸಾಂಕ್ರಾಮಿತೆಯೊಂದಿಗೆ ಮತ್ತೆ ಹಲವು ಕಾರಣಗಳನ್ನು ಕೊಟ್ಟು ಪ್ರಶಸ್ತಿ ವಿತರಣೆಯಾಗಿರಲಿಲ್ಲ.