ತಮಿಳುನಾಡು ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ನೈನಾರ್ ನಾಗೇಂದ್ರನ್ ಅವರು ತಿರುನೆಲ್ವೇಲಿ ಕ್ಷೇತ್ರದಿಂದ ಬಿಜೆಪಿ ಶಾಸಕನಾಗಿದ್ದು, ಈ ಹಿಂದೆ ಎಐಎಡಿಎಂಕೆ ಪಕ್ಷದಲ್ಲಿ ಪ್ರಮುಖ ನಾಯಕರಾಗಿದ್ದರು. ಜಯಲಲಿತಾ ಅವರ ನೇತೃತ್ವದ ಸರ್ಕಾರದಲ್ಲಿ ಸಾರಿಗೆ, ಕೈಗಾರಿಕೆ ಮತ್ತು ವಿದ್ಯುತ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2016 ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡು, 2021 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿದರು.
ಇದನ್ನೂ ಓದಿ:ಬೆಂಗಳೂರು| ಸೈಬರ್ ಅಪರಾಧ ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದಾಗ, ಪಕ್ಷದ ಹಿರಿಯ ನಾಯಕರು ಸೇರಿದಂತೆ ಕೆ.ಅಣ್ಣಾಮಲೈ, ಎಲ್.ಮುರುಗನ್, ಪೊನ್. ರಾಧಾಕೃಷ್ಣನ್ ಮತ್ತು ವನತಿ ಶ್ರೀನಿವಾಸನ್ ಅವರ ಬೆಂಬಲವನ್ನು ಪಡೆದರು . ನಾಗೇಂದ್ರನ್ ಅವರ ನೇತೃತ್ವದಲ್ಲಿ, ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ 2026 ರ ವಿಧಾನಸಭಾ ಚುನಾವಣೆಗೆ ಮೈತ್ರಿ ಸಾಧ್ಯತೆಗಳು ಹೆಚ್ಚಾಗಿವೆ.
ಅವರ ರಾಜಕೀಯ ಅನುಭವ ಮತ್ತು ಎಐಎಡಿಎಂಕೆ ಜೊತೆಗಿನ ಹಿಂದಿನ ಸಂಬಂಧಗಳು, ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ವಿಸ್ತರಣೆಗೆ ಸಹಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ನೀರಾವರಿ ಇಲಾಖೆ, ಪಿಡಬ್ಲ್ಯೂ ಇಲಾಖೆಯಲ್ಲಿ ಸಚಿವರ ಪುತ್ರರ ದರ್ಬಾರ್ – ಗುತ್ತಿಗೆದಾರರ ಆರೋಪ