ಕಾಸರಗೋಡು: ಕಾಸರಗೋಡು ಮೂಲದ ನಗ್ಮಾ ಮಹಮ್ಮದ್ ಮಾಲಿಕ್ ಅವರನ್ನು ಜಪಾನ್‌ನಲ್ಲಿ ಭಾರತೀಯ ರಾಯಭಾರಿಯನ್ನಾಗಿ ಕೇಂದ್ರ ಸರ್ಕಾರ ನೇಮಕಮಾಡಿದೆ.
ಇದನ್ನೂ ಓದಿ : ಗುಜರಾತ್ ಸಂಪುಟ ಪುನಾರಚನೆ: ಕ್ಯಾಬಿನೆಟ್ ಸೇರಿದ ಕ್ರಿಕೆಟಿಗ ಜಡೇಜಾ ಪತ್ನಿ, ಡಿಸಿಎಂ ಹುದ್ದೆ ಮತ್ತೆ ಸೃಷ್ಟಿ
ನಗರದ ಕೋಟೆರಸ್ತೆಯ ಮೂಲನಿವಾಸಿಗಳಾದ, ಈಗ ನವದೆಹಲಿಯಲ್ಲಿ ನೆಲೆಸಿರುವ ಮಹಮ್ಮದ್ ಹಬೀಬುಲ್ಲ-ಸುಲುಬಾನು ದಂಪತಿ ಪುತ್ರಿ ನಗ್ಮಾ. ಅವರು ನವದೆಹಲಿಯಲ್ಲಿ ಜನಿಸಿ ಅಲ್ಲಿನ ಸೇಂಟ್ ಸ್ಟಿಫನ್ ಕಾಲೇಜು ಮತ್ತು ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಹಿಂದೆ ಪೋಲೇಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದರು.
ಇವರು ಸಾಹಿತಿ ಸಾರಾ ಅಬೂಬಕ್ಕರ್ ಅವರ ಸಹೋದರಿಯ ಪುತ್ರಿ.
ಇದನ್ನೂ ನೋಡಿ : ಗುಜರಾತ್ | ವರ್ಚಸ್ಸಿನ ಭೀತಿ ಬಿಜೆಪಿ – ಸಚಿವ ಸಂಪುಟಕ್ಕೆ ಫುಲ್ ಸರ್ಜರಿ Janashakthi Media
