ರಾಹುಲ್ ಗಾಂದಿ ರವರು ಕೇರಳದಲ್ಲಿ ಸಾರ್ವಜನಿಕ ಭಾಷಣ ಮಾಡುತ್ತ, RSS ಮತ್ತು CPI(M) ನ ಒಂದೇ ತಕ್ಕಡಿಯಲ್ಲಿ ಇಟ್ಟು ಭಾಷಣ ಮಾಡಿದ್ದಾರೆ. ಇಂಡಿಯಾದಲ್ಲಿ ವಿರೋದ ಪಕ್ಶಗಳೇ ಇಲ್ಲ ಅನ್ನುವ ಈ ಪರಿಸ್ತಿತಿಯಲ್ಲಿ ರಾಹುಲ್ ಗಾಂದಿ ರವರ ಈ ಮಾತು ನಮ್ಮಂತಹವರಿಗೆ ಈ ಕಾಂಗ್ರೆಸ್ ಈ ಜನ್ಮದಲ್ಲಿ ಉದ್ದಾರ ಆಗಲ್ಲ ಅನ್ನಿಸಿ ಬಿಡುತ್ತೆ. ಕಮ್ಯೂನಿಸಂ
ನಾಗೇಗವ್ಡ ಕೆ ಎಸ್
ರಾಹುಲ್ ಗಾಂದಿ ಹೇಳುತ್ತಾರೆ ನಾನು RSS ಮತ್ತು CPI(M) ನ realm of ideas and realm of speech ವಿರುದ್ದ ಹೋರಾಡುತ್ತಿದ್ದೇನೆ ಅನ್ನುತ್ತಾರೆ. Seriously ಎರಡರ ಹೋಲಿಕೆ ಮಾಡೋದು ಎಸ್ಟು ಅಪಾಯಕಾರಿ ಅನ್ನೋದು ರಾಹುಲ್ ಗಾಂದಿ ರವರಿಗೆ ಗೊತ್ತಿಲ್ಲವೇ. ಕಮ್ಯೂನಿಸಂ
ಮೊನ್ನೆ ಮೊನ್ನೆ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಕಮ್ಯೂನಿಸ್ಟ್ ಕಾರ್ಮಿಕ ಸಂಗಟನೆಗಳು ಒಟ್ಟುಗೂಡಿ ರಾಸ್ಟ್ರ ಮಟ್ಟದಲ್ಲಿ ನಡೆಸಿದ ಮುಸ್ಕರ ವನ್ನು ರಾಹುಲ್ ಗಾಂದಿ ಆಯೋಜಿಸಲಿ. ನನ್ನ ಕೇಳಿದರೆ ರಾಹುಲ್ ಗಾಂದಿ ಕೈಯಲ್ಲಿ ಆಗಲ್ಲ ಅಂತಲೇ ಹೇಳ್ತಿನಿ. ಮಜಾ ಏನು ಅಂದರೆ ಮುಸ್ಕರದ ಡಿಮ್ಯಾಂಡ್ ನಲ್ಲಿ ಕಮ್ಯೂನಿಸ್ಟ್ ಪಕ್ಶವನ್ನು ಎಂದು ಬೆಂಬಲಿಸದ ಮದ್ಯಮ ವರ್ಗದವರ ಒಳಿತಿನ ಡಿಮ್ಯಾಂಡ್ ಗಳು ಇದ್ದವು. ಅಂಗನವಾಡಿ ಕಾರ್ಯಕರ್ತೆಯರು ನಮಗೋಸ್ಕರ ಬೀದಿಗೆ ಇಳಿದು ಹೋರಾಟ ಮಾಡಿದರು. ಸಿಂಪಲ್ ಆಗಿ ಇದು ಕಮ್ಯೂನಿಸ್ಟ್ ಪಾರ್ಟಿ ಯ realm of ideas. ಇಂತಹ ಐಡಿಯಾ ಕಾಂಗ್ರೆಸ್ ಬಳಿ ಇದೆಯೇ ಅಂತ ಕೇಳಿದರೆ ಉತ್ತರ ಇಲ್ಲ ಅಂತ ಬರುತ್ತೆ. ಕಮ್ಯೂನಿಸಂ
ಇದನ್ನೂ ಓದಿ: ಎಐಎಡಿಎಂಕೆ ನಾಯಕ ಅನ್ವರ್ ರಾಜಾ ಡಿಎಂಕೆ ಸೇರ್ಪಡೆ ಕಮ್ಯೂನಿಸಂ
ಎಪ್ಪತ್ತೈದು ವರುಶಗಳ ಕಾಂಗ್ರೆಸ್ ನ realm of ideas ಏನಿತ್ತು ಅತಿಯಾದ ಕೇಂದ್ರಿಕರಣ, soft ಕೋಮುವಾದ, ಹಿಂದಿ ಹೇರಿಕೆ ಇತ್ಯಾದಿ ಇತ್ಯಾದಿ. ಕಾಂಗ್ರೆಸ್ ರೀತಿಯಲ್ಲಿ ಅದಿಕಾರಕ್ಕಾಗಿ ಕಮ್ಯೂನಿಸ್ಟ್ ಪಾರ್ಟಿ ಕೂಡ ಕೋಮುವಾದದ ರಾಜಕಾರಣ ಮಾಡಬಹುದಿತ್ತು, ಆದರೆ ಮಾಡಲಿಲ್ಲ. ಕಮ್ಯೂನಿಸಂ
ಮಜಾ ಏನು ಅಂದರೆ ಮನಮೋಹನ್ ಸಿಂಗ್ ರ ಸರ್ಕಾರದ ಹಲವಾರು ಜನಪರ ಕಾನೂನು ಮತ್ತು ಯೋಜನೆಗಳು ಕಮ್ಯೂನಿಸ್ಟ್ ಪಾರ್ಟಿಯ relam of ideas ನಿಂದಲೇ ಬಂದದ್ದು. ಇವತ್ತು ಮನಮೋಹನ್ ಸಿಂಗ್ ರನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ಕಮ್ಯೂನಿಸ್ಟ್ ಪಾರ್ಟಿಯ realm of ideas and speeches. ಕಮ್ಯೂನಿಸಂ
ಸರಿ ಕೇರಳದಲ್ಲಿ ಕಮ್ಯೂನಿಸ್ಟ್ ಪಾರ್ಟಿಯನ್ನು ನಿರ್ನಾಮ ಮಾಡಿ ಕಾಂಗ್ರೆಸ್ ಅದಿಕಾರಕ್ಕೆ ಬಂದರೆ ಮುಂದಿನ ಐದು ವರುಶಗಳಲ್ಲಿ ಬಿಜೆಪಿ ಕೇರಳದಲ್ಲಿ ಅದಿಕಾರಕ್ಕೆ ಬರುತ್ತೆ. ಇದಕ್ಕೆ ಸಾಕ್ಶಿ ಇಂಡಿಯಾದ ಹಲವಾರು ರಾಜ್ಯಗಳ ಚುನಾವಣಾ ರಾಜಕೀಯವೇ ಸಾಕ್ಶಿ.
ಎಲ್ಲೆಲ್ಲಿ ಕಾಂಗ್ರೆಸ್ ಬಿಜೆಪಿ ಎದುರಾಳಿಗಳು ಆಗುತ್ತಾರೆ ಅಲ್ಲೆಲ್ಲ ಬಿಜೆಪಿ ಗೆಲ್ಲುತ್ತೆ. ಇವತ್ತಿಗೂ ಬಿಜೆಪಿಯನ್ನು ಹದ್ದು ಬಸ್ತಿನಲ್ಲಿ ಹಿಡಿದಿರೋದು ಪ್ರಾದೇಶಿಕ ಪಕ್ಶಗಳು. ಅದರಲ್ಲೂ ಸೌತ್ ಇಂಡಿಯಾ ಬಾಗಿಲು ಬಿಜೆಪಿ ಗೆ ಮುಚ್ಚಿರೋದು ಪ್ರಾದೇಶಿಕ ಪಕ್ಶಗಳಿಂದಲೇ. ನನ್ನ ಅಬಿಪ್ರಾಯದಲ್ಲಿ ಕೇರಳದ ಕಮ್ಯೂನಿಸ್ಟ್ ಪಾರ್ಟಿ ಕೂಡ ಒಂದು ಪ್ರಾದೇಶಿಕ ಪಕ್ಶವೇ. ಕಾಂಗ್ರೆಸ್ ಮತ್ತು ಬಿಜೆಪಿ ತರ ಹೆಚ್ಚಿನ ಸಂಪನ್ಮೂಲ ಇಲ್ಲದೆ ಕೂಡ ಚುನಾವಣೆಯಲ್ಲಿ ಗೆಲುವು ಸಾದಿಸುತ್ತಿದೆ. ಮಜಾ ಏನು ಅಂದರೆ ಚುನಾವಣಾ ಬಾಂಡ್ ಗಳು ನಮಗೆ ಬೇಡವೇ ಬೇಡ ಅಂತ ತೀರಸ್ಕರಿಸಿದ್ದು ಕಮ್ಯೂನಿಸ್ಟ್ ಪಾರ್ಟಿ ಮಾತ್ರ.
ಆದ್ದರಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂದಿ ರವರು ದೇಶದ ಬಿಜೆಪಿಯೇತರ ಪಕ್ಶಗಳ realm of ideas and speeches ಬಗ್ಗೆ ಸಾರ್ವಜನಿಕ ಚರ್ಚೆ ಬಯಸಿದರೆ ಹೆಚ್ಚಿನ ತೊಂದರೆ ಕಾಂಗ್ರೆಸ್ ಗೆ ಆಗೋದು. ಆದರೆ ಇದರ ಲಾಬ ಮಾತ್ರ ಬಿಜೆಪಿ ಗೆ ಆಗುತ್ತೆ.
ಮತ್ತೊಂದು ವಿಚಾರ ರಾಹುಲ್ ಗಾಂದಿ ಅಂಬಾನಿ ಅದಾನಿ ಅಂತ ದಿನ ವಿಡಿಯೋ ಮಾಡುತ್ತಾರೆ. ಮಜಾ ಏನು ಅಂದರೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಅಂಬಾನಿ, ಅದಾನಿ ವ್ಯವಹಾರಗಳು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ನಡೆಯುತ್ತಿದೆ. ಇದು ಯಾವ ಸೀಮೆ ಕಾಂಗ್ರೆಸ್ ನ realm of ideas.
ಈಗಿನ ಕಾಂಗ್ರೆಸ್ ಕೂಡ ಒಂದು ರೀತಿಯ ಪ್ರಾದೇಶಿಕ ಪಕ್ಶವೇ. ಮಜಾ ಏನು ಅಂದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಕ್ಯಮಂತ್ರಿ ಜನತಾ ಪಕ್ಶದವರು. ತೆಲಂಗಾಣದ ಮುಕ್ಯಮಂತ್ರಿ ಬಿಜೆಪಿಯವರು. ಬಿಜೆಪಿ ರಾಜ್ಯಗಳಲ್ಲೂ ಮೂಲ ಬಿಜೆಪಿ ಯವರು ಹೆಚ್ಚಿನ ಜನರು ಮುಕ್ಯಮಂತ್ರಿ ಆಗಿಲ್ಲ. ಈ ಎರಡೂ ಪಕ್ಶಗಳು ಪ್ರಾದೇಶಿಕ ಪಕ್ಶಗಳಿಂದ ರಾಜಕಾರಣಿಗಳನ್ನು ಪಕ್ಶಾಂತರ ಮಾಡಿಸಿಯೇ ಅದಿಕಾರದಲ್ಲಿ ಇರೋದು. ಆದ್ದರಿಂದ ಈ ಎರಡೂ ಪಾರ್ಟಿಗಳು ಒಂದು ರೀತಿಯ ಪ್ರಾದೇಶಿಕ ಪಕ್ಶಗಳೇ. ಆದರೆ ಬಿಲ್ಡಪ್ಪ ಮಾತ್ರ ರಾಸ್ಟ್ರಿಯ ಪಕ್ಶಗಳ ತರ ತಗೋತಾವೆ.
ನನ್ನ ಆಶಾಬಾವನೆ ಏನು ಅಂದರೆ ಕಮ್ಯೂನಿಸ್ಟ್ ಪಾರ್ಟಿನೂ ಸೇರಿದಂತೆ ದೇಶದ ಎಲ್ಲ ಪ್ರಾದೇಶಿಕ ಪಕ್ಶಗಳು 2029 ರೊಳಗೆ ತಮ್ಮನ್ನು ತಾವು ಗಟ್ಟಿಗೊಳಿಸಿಕೊಂಡು ಪುಟಿದೇಳುತ್ತವೆ ಅನ್ನೋದು. ಇದು ಗಟಿಸಲಿಲ್ಲ ಅಂದರೆ ಮುಂದಿನ ಇಪ್ಪತ್ತೈದು ವರುಶಗಳಲ್ಲಿ ಇಂಡಿಯಾದಲ್ಲಿ ಒಂದೇ ಪಾರ್ಟಿ ಉಳಿಯುತ್ತೆ. ಅದು ಯಾವುದು ಅಂತ ಪೋಸ್ಟ್ ಓದುತ್ತಿರುವ ನಿಮಗೆ ಹೇಳುವ ಅವಶ್ಯಕತೆ ಇಲ್ಲ ಅಂತ ಬಾವಿಸುತ್ತೇನೆ.
ಕೊನೆಯದಾಗಿ RSS ಮತ್ತು ಬಿಜೆಪಿ ಯನ್ನು ಎಲ್ಲ ರೀತಿಯಲ್ಲೂ ಸೋಲಿಸಬೇಕು ಅಂದರೆ ಕಾಂಗ್ರೆಸ್ ತನ್ನ ದರ್ಪ ಬಿಟ್ಟು ಬಿಜೆಪಿಯೇತರ ಎಲ್ಲ ಪಕ್ಶಗಳನ್ನು ಗೌರವಿಸುವುದನ್ನು ಕಲಿಬೇಕು.
ಇದನ್ನೂ ನೋಡಿ: ಬಿಹಾರ ಚುನಾವಣೇ | “ವಿಶೇಷ ತೀವ್ರ ಪರಿಷ್ಕರಣೆ”ಎನ್‌ಡಿಎ ಕೂಟದ ಹೊಸ ನಾಟಕ Janashakthi Media ಕಮ್ಯೂನಿಸಂ
