ಬೆಂಗಳೂರು: ಆಗಸ್ಟ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾ. ನಾಗಮೋಹನದಾಸ್ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದ್ದಾರೆ. ಆಯೋಗ
ಸುಪ್ರೀಂ ಕೋರ್ಟ್‌ನ ಆದೇಶದಂತೆ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು| ಭಾರಿ ಮಳೆ: ರಸ್ತೆಗಳು ಜಲವೃತ
ಅತಿ ಹೆಚ್ಚು ಹಿಂದುಳಿದ ಸಣ್ಣ ಜಾತಿಗಳನ್ನು ‘ಎ’ ಗುಂಪು ಮಾಡಿ ಶೇ 1 ಮೀಸಲಾತಿ ನಿಗದಿಪಡಿಸಲಾಗಿದೆ. ಮಾದಿಗ ಮತ್ತು ಅದೇ ರೀತಿ ಅಸ್ಪೃಶ್ಯತೆ ಹೊಂದಿರುವ ಜಾತಿಗಳನ್ನು ‘ಬಿ’ ಗುಂಪಿಗೆ ಸೇರಿಸಿ ಶೇ 6, ಹೊಲೆಯ ಮತ್ತು ಅದೇ ರೀತಿ ಅಸ್ಪೃಶ್ಯತೆ ಹೊಂದಿರುವ ಜಾತಿಗಳನ್ನು ‘ಸಿ’ ಗುಂಪು ಮಾಡಿ ಶೇ 5, ಅಸ್ಪೃಶ್ಯರಲ್ಲದ ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳನ್ನು ‘ಡಿ’ ಗುಂಪಿಗೆ ಸೇರಿಸಿ ಶೇ 4, ಮಾದಿಗ, ಛಲವಾದಿ ಎಂದು ಗುರುತಿಸಿಕೊಳ್ಳದೆ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಎಂದು ಗುರುತಿಸಿಕೊಂಡಿರುವವರನ್ನು ‘ಇ’ ಗುಂಪು ಮಾಡಿ ಶೇ 1 ಮೀಸಲಾತಿ ಹಂಚಿಕೆ ಮಾಡಲಾಗಿದೆ. ‘ಇ’ ಗುಂಪಿನಲ್ಲಿ ಹೊಲೆಯ-ಮಾದಿಗರು ಇದ್ದಾರೆ. ಇದು ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾಡಲಾಗಿದೆ. ಇದು ವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದಾರೆ.
‘ಛಲವಾದಿ ಸಮುದಾಯದವರು ಗೊಂದಲ ಮೂಡಿಸಬಾರದು. ಒಂದೇ ಕುಟುಂಬದ ಅಣ್ಣ ತಮ್ಮಂದಿರಾದ ನಾವು ಒಳಮೀಸಲಾತಿ ವರದಿಗೆ ಸಂಬಂಧಿಸಿದಂತೆ ಪ್ರಬುದ್ಧರಾಗಿ ವರ್ತಿಸುವ ಮೂಲಕ ವರದಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಇದ್ದರೆ ನಮ್ಮ ಸಣ್ಣ ಮನಸ್ತಾಪದಿಂದ ದಲಿತ ಶಕ್ತಿಗೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಎಚ್ಚರಿಸಿದ್ದಾರೆ.
ಇದನ್ನೂ ನೋಡಿ: Karnataka Legislative Assembly Live – Day 04 – ವಿಧಾನಸಭೆಯ ಮುಂಗಾರು ಅಧಿವೇಶನದ ನೇರ ಪ್ರಸಾರ – ದಿನ 04
